BJP CONG FIGHT : ವಾಮ ಮಾರ್ಗದಲ್ಲಿ ಸರ್ಕಾರ ರಚನೆ ಎಂದ ಸಿಎಂ ಬೊಮ್ಮಾಯಿ.. ಕಾಂಗ್ರೆಸ್ ಬಿಜೆಪಿ ಮಧ್ಯೆ ಫೇಕ್ ಫೈಟ್

ಬೆಂಗಳೂರು : BJP CONG FIGHT ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಸಮರ ಇದೀಗ ಮತ್ತಷ್ಟು ತಾರಕಕ್ಕೇರಿದೆ. ಪೇ ಸಿಎಂ, 40 ಪರ್ಸೆಂಟ್ ಕಮಿಷನ್, ಪಿಎಸ್ಐ ನೇಮಕಾತಿ ಹೀಗೆ ಸಾಲು ಸಾಲು ರಾಜಕೀಯ ಆರೋಪ ಪ್ರತ್ಯಾರೋಪ ಈಗ ಬೇರೆ ದಿಕ್ಕಿಗೆ ಹೊರಳಿದೆ. ಅದಕ್ಕೆ ಕಾರಣವಾಗಿರೋದು ಸಿಎಂ ಬೊಮ್ಮಾಯಿ ಶುಕ್ರವಾರ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಆಡಿದ ಮಾತು. ಮತ್ತು ರಾಜ್ಯ ಕಾಂಗ್ರೆಸ್ ಮಾಡಿರುವ ಟ್ವೀಟ್

ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಷಣ ಮಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಪ್ರಜಾಪ್ರಭುತ್ವ, ಸರ್ಕಾರ ರಚನೆಗಾಗಿ ಮಾಡುವ ಆಪರೇಷನ್ ಗಳ ಬಗ್ಗೆ ಉಲ್ಲೇಖಿಸಿ ಮಾತನಾಡಿದ್ರು. ಕಾಂಗ್ರೆಸ್ ವಿರುದ್ಧ ಬೊಮ್ಮಾಯಿ ಹರಿಹಾಯ್ದಿದ್ರು. ಆದ್ರೆ ಇದನ್ನೇ ಟ್ವೀಟ್ ಮೂಲಕ ಎಡಿಟ್ ಮಾಡಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಸಿಎಂ ಬೊಮ್ಮಾಯಿ ತಮ್ಮದೇ ಸರ್ಕಾರದ , ಸಚಿವರ ಭ್ರಷ್ಟಾಚಾರದ ಬಗ್ಗೆ ಸಿಎಂ ಮಾತು ಅನ್ನೋ ಅಡಿ ಬರಹದಲ್ಲಿ, ಬಿಜೆಪಿ ಕಾರ್ಯಕಾರಿಣಿಯಲ್ಲಿ ಸತ್ಯ ಒಪ್ಪಿಕೊಂಡ ಸಿಎಂ ಬೊಮ್ಮಾಯಿ ಅಂತಾ ಟ್ವೀಟ್ ಮಾಡಿದೆ. ಅಲ್ದೆ ಶಾಸಕರ ಖರೀದಿ ಸಂವಿಧಾನ ವಿರೋಧಿ ಸರ್ಕಾರ ರಚನೆ, ಸಿಡಿ ಬ್ಲ್ಯಾಕ್ಮೇಲ್ ಮಾಡಿದವರಿಗೆ ಮಂತ್ರಿಪದವಿ, ಸಚಿವ ಸ್ಥಾನಗಳು 40 ರಿಂದ 50 ಕೋಟಿಗೆ ಸೇಲ್, ಸಿಎಂ ಹುದ್ದೆ 2500 ಕೋಟಿ ರೂಪಾಯಿಗೆ ಸೇಲ್ 40 ಪರ್ಸೆಂಟ್ ಕಮಿಷನ್ ಭ್ರಷ್ಟಾಚಾರ ಸರ್ಕಾರಿ ಹುದ್ದೆಗಳ ಮಾರಾಟ,  ತಮ್ಮ 40 ಪರ್ಸೆಂಟ್ ಸರ್ಕಾರದ ಅನಾಚಾರಗಳೆಲ್ಲವನ್ನೂ ಒಪ್ಪಿದ ಪೇಸಿಎಂ ಗೆ ಧನ್ಯವಾದಗಳು ಅಂತಾ ರಾಜ್ಯ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿದೆ.

ಬಿಜೆಪಿ ತಿರುಗೇಟು : ಯಾವಾಗ ಸಿಎಂ ಬೊಮ್ಮಾಯಿ ಮಾತುಗಳನ್ನ ಕಾಂಗ್ರೆಸ್ ಈ ರೀತಿಯಾಗಿ ಟ್ವೀಟ್ ಮೂಲಕ ಟೀಕಿಸುವ ಪ್ರಯತ್ನ ಮಾಡಿತೋ ಆಗ ಬಿಜೆಪಿ ಕೂಡಾ ಟ್ವೀಟ್ ನಲ್ಲೇ ತಿರುಗೇಟು ಕೊಟ್ಟಿದೆ. ಕಾಂಗ್ರೆಸ್ ಮಾಡಿರೋದು ಫೇಕ್ ಅಂದ್ರೆ ನಕಲಿ ಅಂತಾ ಟ್ವೀಟ್ ಮಾಡಿರೋ ಬಿಜೆಪಿ ರಣಹೇಡಿಗಳ ಕೊನೆಯ ಅಸ್ತ್ರ ಸಶಕ್ತ ಎದುರಾಳಿಯ ಮಾತುಗಳನ್ನ ತಿರುಚಿ ಸತ್ಯದ ತಲೆಯ ಮೇಲೆ ಹೊಡೆಯುವ ಕೆಲಸ ಮಾಡುವುದು ಎಂದಿದೆ. ಅಷ್ಟೇ ಅಲ್ಲದೇ ಬಿಜೆಪಿಯ ಸಂಘಟನೆ ಮತ್ತು ಸೈದ್ಧಾಂತಿಕ ಶಕ್ತಿಗೆ ಹೆದರಿ ಕರ್ನಾಟಕ ಕಾಂಗ್ರೆಸ್ ಮೇಲೆಹೇಳಿದ ಕೆಲಸ ಮಾಡಿ ತನ್ನ ಮರ್ಯಾದೆಯನ್ನು ತಾನೇ ಹರಾಜಿಗಿಟ್ಟಿದೆ ಅಂತಾ ಟ್ವೀಟ್ ಮಾಡಿದೆ.

ಇದನ್ನೂ ಓದಿ: Galipata – 2 : ಜೀ5 ಒಟಿಟಿಯಲ್ಲಿ 48ಗಂಟೆಯಲ್ಲೇ ಹೊಸ ದಾಖಲೆ ಬರೆದ ಗಾಳಿಪಟ-2 ಒಟಿಟಿಯಲ್ಲೂ ಕಮಾಲ್ ಮಾಡಿದ ಗಣಿ ಅಂಡ್ ಭಟ್ರ ಕಾಂಬಿನೇಶನ್

BJP CONG FIGHT The battle between the state BJP and the Congress has now intensified

Comments are closed.