Prasidh Krishna : ಪ್ರಸಿದ್ಧ್ ಕೃಷ್ಣಗೆ ಕ್ರಿಕೆಟ್ ಅವಕಾಶ ಕೊಟ್ಟ ಕರ್ನಾಟಕಕ್ಕಿಂತ ಐಪಿಎಲ್ ಟೂರ್ನಿಯೇ ಮುಖ್ಯವಾಯ್ತಾ?

ಬೆಂಗಳೂರು: ಕರ್ನಾಟಕ ತಂಡದ ಮತ್ತೊಮ್ಮೆ ರಣಜಿ ಸೆಮಿಫೈನಲ್ (Ranji Trophy 2022-23) ಪಂದ್ಯದಲ್ಲಿ ಸೋತು ನಿರಾಸೆ ಅನುಭವಿಸಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಕರ್ನಾಟಕ 4 ವಿಕೆಟ್’ಗಳ ಸೋಲು ಕಂಡಿತ್ತು.ಕರ್ನಾಟಕ ತಂಡದ ಸೋಲಿಗೆ ಕಾರಣ ಕೆಲ ಹಿರಿಯ ಆಟಗಾರರ ಕಳಪೆ ಪ್ರದರ್ಶನ. ಮಾಜಿ ನಾಯಕ ಮನೀಶ್ ಪಾಂಡೆ, ಉಪನಾಯಕ ಆರ್.ಸಮರ್ಥ್, ಆಲ್ರೌಂಡರ್’ಗಳಾದ ಶ್ರೇಯಸ್ ಗೋಪಾಲ್ ಮತ್ತು ಕೃಷ್ಣಪ್ಪ ಗೌತಮ್ ಸೆಮಿಫೈನಲ್ ಪಂದ್ಯದಲ್ಲಿ ತಂಡಕ್ಕೆ (Prasidh Krishna) ಕೈಕೊಟ್ಟಿದ್ದರು.

ಈ ನಾಲ್ವರದ್ದು ಒಂದು ಕಥೆಯಾದ್ರೆ, ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ (Prasidh Krishna) ಅವರದ್ದು ಮತ್ತೊಂದು ಕಥೆ. ರಣಜಿ ಸೆಮಿಫೈನಲ್ ಪಂದ್ಯ ಆಡಲು ಫಿಟ್ ಆಗಿದ್ದರೂ ಪ್ರಸಿದ್ಧ್ ಕೃಷ್ಣ ಕರ್ನಾಟಕ ಪರ ಕಣಕ್ಕಿಳಿಯಲಿಲ್ಲ. ಇತ್ತ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ತಂಡ ಸೌರಾಷ್ಟ್ರ ವಿರುದ್ಧ ಸೆಮಿಫೈನಲ್ ಪಂದ್ಯವಾಡ್ತಾ ಇದ್ರೆ, ಅತ್ತ ಪಕ್ಕದಲ್ಲೇ ಇರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (National Cricket Academy – NCA) ಮೈದಾನದಲ್ಲಿ ಪ್ರಸಿದ್ಧ್ ಕೃಷ್ಣ ಬೌಲಿಂಗ್ ಅಭ್ಯಾಸ ನಡೆಸ್ತಾ ಇದ್ರು. ಈ ಅಭ್ಯಾಸ ಐಪಿಎಲ್’ಗಾಗಿ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಈ ರಣಜಿ ಋತುವಿನಲ್ಲಿ ಪ್ರಸಿದ್ಧ್ ಕೃಷ್ಣ ಕರ್ನಾಟಕ ಪರ ಒಂದೇ ಒಂದು ಪಂದ್ಯವಾಡಿಲ್ಲ. ಬೆನ್ನು ನೋವಿನಿಂದ ಬಳಲುತ್ತಿದ್ದ ಪ್ರಸಿದ್ಧ್ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆಯೇ ಆಡಲು ಫಿಟ್ ಆಗಿದ್ದರು. ಆದರೂ ರಾಜ್ಯ ತಂಡದ ಪರ ಆಡುವ ಮನಸ್ಸು ಮಾಡಲಿಲ್ಲ. ರಣಜಿ ಪಂದ್ಯವಾಡಿ ಮತ್ತೆ ಗಾಯಗೊಂಡ್ರೆ ಐಪಿಎಲ್’ನಲ್ಲಿ ಆಡುವ ಅವಕಾಶ ಕೈತಪ್ಪಿ ಹೋಗಲಿದೆ ಎಂಬ ಆತಂಕ. ಈ ಕಾರಣದಿಂದ ಕರ್ನಾಟಕ ತಂಡದ ಪರ ಆಡಲು ಪ್ರಸಿದ್ಧ್ ಹಿಂದೇಟು ಹಾಕಿದ್ದಾರೆ.

ಇದನ್ನೂ ಓದಿ : ಮಯಾಂಕ್ ಅಗರ್ವಾಲ್ ದ್ವಿಶತಕ ವ್ಯರ್ಥ : ರಣಜಿ ಸೆಮಿಫೈನಲ್ ಸೋತ ಕರ್ನಾಟಕ

ಇದನ್ನೂ ಓದಿ : Ravindra Jadeja : ಟೆಸ್ಟ್ ಗೆಲುವಿನ ಬೆನ್ನಲ್ಲೇ ರವೀಂದ್ರ ಜಡೇಜಾಗೆ ಶಾಕ್ ಕೊಟ್ಟ ಬಿಸಿಸಿಐ

ಇದನ್ನೂ ಓದಿ : Border-Gavaskar test series : ರೋಹಿತ್ ಸೆಂಚುರಿ, ಜಡೇಜಾ-ಅಕ್ಷರ್ ಭರ್ಜರಿ ಬ್ಯಾಟಿಂಗ್; ಗೆಲುವಿನ ಹಾದಿಯಲ್ಲಿ ಟೀಮ್ ಇಂಡಿಯಾ

ಪ್ರಸಿದ್ಧ್ ಕೃಷ್ಣ ಇವತ್ತು ಕ್ರಿಕೆಟ್’ನಲ್ಲಿ ಏನೇ ಆಗಿದ್ರೂ ಅದಕ್ಕೆ ಕರ್ನಾಟಕ ತಂಡ ಕಾರಣ. ಕರ್ನಾಟಕ ತಂಡದಲ್ಲೇ ಪ್ರಸಿದ್ಧ್’ಗೆ ಸ್ಥಾನ ನೀಡಿ ಆಡುವ ಅವಕಾಶ ನೀಡದೇ ಇದ್ದಿದ್ದರೆ ಐಪಿಎಲ್ ಅವಕಾಶವೂ ಸಿಗುತ್ತಿರಲಿಲ್ಲ. ಭಾರತ ಪರ ಆಡುವ ಚಾನ್ಸ್ ಕೂಡ ಸಿಗುತ್ತಿರಲಿಲ್ಲ. ಹಣ, ಕೀರ್ತಿ ಬಂದ ಕೂಡಲೇ ಇವೆಲ್ಲವನ್ನೂ ಮರೆತಿರುವ ಪ್ರಸಿದ್ಧ್ ಕೃಷ್ಣಗೆ ರಾಜ್ಯ ತಂಡದ ಪರ ಆಡುವುದಕ್ಕಿಂತ ಐಪಿಎಲ್ ಟೂರ್ನಿಯೇ ಮುಖ್ಯವಾಗಿ ಬಿಟ್ಟಿದೆ.

Is the IPL tournament more important than Karnataka, which gave cricket opportunity to Prasidh Krishna?

Comments are closed.