Jadeja’s wife gets BJP ticket : ವಿಧಾನಸಭಾ ಚುನಾವಣೆ: ರವೀಂದ್ರ ಜಡೇಜಾ ಪತ್ನಿಗೆ ಬಿಜೆಪಿ ಟಿಕೆಟ್

ಅಹ್ಮದಾಬಾದ್ : (Jadeja’s wife gets BJP ticket )ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜ ಅವರ ಪತ್ನಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ(Gujarat assembly elections) ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

ರವೀಂದ್ರ ಜಡೇಜ (Ravindra Jadeja) ಅವರ ಪತ್ನಿ ರಿವಾಬ ಜಡೇಜ (Rivaba Jadeja) ಅವರಿಗೆ ಜಾಮ್’ನಗರ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್(Jadeja’s wife gets BJP ticket ) ನೀಡಿದೆ. ಜಾಮ್’ನಗರ ಕ್ರಿಕೆಟಿಗ ರವೀಂದ್ರ ಜಡೇಜ ಅವರ ಹುಟ್ಟೂರು. ರಿವಾಬ ಜಡೇಜ 2019ರಲ್ಲಿ ಬಿಜೆಪಿ ಸೇರಿದ್ದರು. ಜಾಮ್’ನಗರ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿ ಜಡೇಜ ಅವರ ಪತ್ನಿಗೆ ಮಣೆ ಹಾಕಿದೆ. ಟೀಮ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜ ಮತ್ತು ರಿವಾಬ ಜಡೇಜ 2016ರ ಏಪ್ರಿಲ್ 17ರಂದು ವಿವಾಹವಾಗಿದ್ದರು.

ಇದನ್ನೂ ಓದಿ : Krishna Kumar Pandey died : ಭಾರತ್‌ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್‌ ಸೇವಾದಳ ನಾಯಕ ನಿಧನ

ಇದನ್ನೂ ಓದಿ : Congress Twitter Account Ban : ಕೆಜಿಎಫ್ ಎಫೆಕ್ಟ್: ಕಾಂಗ್ರೆಸ್ ಟ್ವಿಟರ್ ಅಕೌಂಟ್ ಬ್ಯಾನ್

ಡಿಸೆಂಬರ್ ತಿಂಗಳಲ್ಲಿ ನಡೆಯುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 38 ಮಂದಿ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದೆ. ಹಳಬರಿಗೆ ಕೊಕ್ ನೀಡಿರುವ ಕ್ಷೇತ್ರಗಳಲ್ಲಿ ಹೊಸಮುಖಗಳಿಗೆ ಭಾರತೀಯ ಜನತಾ ಪಕ್ಷ ಮಣೆ ಹಾಕಿದೆ. ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರಿಗೂ ಟಿಕೆಟ್ ನಿರಾಕರಿಸಲಾಗಿದೆ.
ಒಟ್ಟು 182 ಸ್ಥಾನಗಳ ಪೈಕಿ ಬಿಜೆಪಿ 160 ಸ್ಥಾನಗಳಿಗೆ ಟಿಕೆಟ್ ಪ್ರಕಟಿಸಿದ್ದು, ಅವರಲ್ಲಿ ರವೀಂದ್ರ ಜಡೇಜ ಅವರ ಪತ್ನಿ ರಿವಾಬ ಜಡೇಜ, ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಪಾಟಿದಾರ್ ಹೋರಾಟಗಾರ ಹಾರ್ದಿಕ್ ಪಟೇಲ್ ಅವರಿಗೆ ಟಿಕೆಟ್ ಸಿಕ್ಕಿದೆ. ಮೊರ್ಬಿ ಸೇತುವೆ ದುರಂತ ಸಂಭವಿಸಿರುವ ಕಾರಣ ಆ ಕ್ಷೇತ್ರದ ಹಾಲಿ ಶಾಸಕ ಬ್ರಿಜೇಶ್ ಮೆರ್ಜಾ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ.

ಇದನ್ನೂ ಓದಿ : By Election Result  : 7 ವಿಧಾನಸಭೆಗೆ ನಡೆದ ಉಪಚುನಾವಣೆ ಫಲಿತಾಂಶ.. ನಾಲ್ಕು ಕಡೆ ಬಿಜೆಪಿ ಗೆಲುವು

ಮುಖ್ಯಮಂತ್ರಿ ಭೂಪೇಂದ್ರ ಭಾಯ್ ಪಟೇಲ್ 2017ರಲ್ಲಿ ಸ್ಪರ್ಧಿಸಿದ್ದ ಫಟ್ಲೋಡಿಯಾ ವಿಧಾನಸಭಾ ಕ್ಷೇತ್ರದಿಂದಲೇ ಕಣಕ್ಕಿಳಿಯಲಿದ್ದಾರೆ.

ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಡಿಸೆಂಬರ್ 1ರಂದು ನಡೆಯಲಿದ್ದರೆ, 2ನೇ ಹಂತದ ಮತದಾನ ಡಿಸೆಂಬರ್ 5ರಂದು ನಡೆಯಲಿದೆ. ಡಿಸೆಂಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.

(Jadeja’s wife gets BJP ticket) Team India’s star all-rounder Ravindra Jadeja’s wife will contest as BJP candidate in Gujarat assembly elections.

Comments are closed.