ಬೆಂಗಳೂರು: ಒಬ್ಬರ ಪಾಲಿಗೆ ವಿಷವಾಗಿದ್ದು, ಮತ್ತೊಬ್ಬರ ಪಾಲಿಗೆ ಅಮೃತ ಎಂಬ ಮಾತಿದೆ. ಆ ಮಾತು ಕನ್ನಡಿಗ ಮಯಾಂಕ್ ಅಗರ್ವಾಲ್ (Mayank Agarwal ) ವಿಚಾರದಲ್ಲಿ ನಿಜವಾಗಿದೆ. ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡಕ್ಕೆ (England Tour of England) ಆಘಾತಗಳ ಮೇಲೆ ಆಘಾತ ಎದುರಾಗುತ್ತಿದೆ. ಸರಣಿಗೆ ತಂಡವನ್ನು ಆಯ್ಕೆ ಮಾಡಿದ ಬೆನ್ನಲ್ಲೇ ಅನುಭವಿ ಓಪನರ್ ಕೆ.ಎಲ್ ರಾಹುಲ್ (KL Rahul) ತೊಡೆ ಸಂಧು (Groin Injury) ಗಾಯದ ಕಾರಣ ಇಂಗ್ಲೆಂಡ್ ಪ್ರವಾಸಕ್ಕೆ ಅಲಭ್ಯರಾಗಿದ್ದರು. ಈಗ ನಾಯಕ ರೋಹಿತ್ ಶರ್ಮಾ (Rohit Sharma tests Covid Positive) ಕೋವಿಡ್ ಪಾಸಿಟಿವ್”ಗೆ ಒಳಗಾಗಿರುವ ಕಾರಣ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ.
ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಟೆಸ್ಟ್ ತಂಡದಲ್ಲಿ ರಾಹುಲ್ ಅವರಿಗೆ ಬದಲಿ ಆಟಗಾರನನ್ನಾಗಿ ಯಾರನ್ನೂ ಹೆಸರಿಸಿರಲಿಲ್ಲ. ಕಾರಣ, ಮೀಸಲು ಆರಂಭಿಕನಾಗಿ ಶುಭಮನ್ ಗಿಲ್ ತಂಡದಲ್ಲಿರುವ ಕಾರಣ ಏಕೈಕ ಟೆಸ್ಟ್ ಪಂದ್ಯಕ್ಕೆ ಮತ್ತೊಬ್ಬ ಆಟಗಾರ ಯಾಕೆ ಎಂಬ ಲೆಕ್ಕಾಚಾರ. ಆದರೆ ಇದೀಗ ಮತ್ತೊಬ್ಬ ಆರಂಭಿಕಾರ ರೋಹಿತ್ ಶರ್ಮಾ ಕೂಡ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿರುವುದರಿಂದ ಅವರಿಗೆ ಬ್ಯಾಕಪ್ ಆಗಿ ಕನ್ನಡಿಗ ಮಯಾಂಕ್ ಅಗರ್ವಾಲ್ (Mayank Agarwal Included to India Test Squad) ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾಗಿದ್ದ ಭಾರತ ತಂಡದಿಂದ ಮಯಾಂಕ್ ಅಗರ್ವಾಲ್ ಅವರನ್ನು ಕೈಬಿಡಲಾಗಿತ್ತು. ಟೆಸ್ಟ್ ತಂಡದಿಂದ ಹೊರ ಬಿದ್ದಿದ್ದ ಮಯಾಂಕ್, ಕರ್ನಾಟಕ ಪರ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಭಾರತ ತಂಡದಿಂದ ಕರೆ ಬಂದಿರುವ ಹಿನ್ನೆಲೆಯಲ್ಲಿ ಮಯಾಂಕ್ ಅಗರ್ವಾಲ್ ಈಗಾಗ್ಲೇ ಬೆಂಗಳೂರಿನಿಂದ ಲಂಡನ್”ಗೆ ಪ್ರಯಾಣಿಸಿದ್ದು, ಸೋಮವಾರ ಸಂಜೆ ಅಥವಾ ರಾತ್ರಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್”ನ ಟ್ರಾವೆಲ್ ಅಡ್ವೈಸರಿ ಪ್ರಕಾರ ಮಯಾಂಕ್ ಅಗರ್ವಾಲ್ ಕ್ವಾರಂಟೈನ್”ಗೆ ಒಳಗಾಗುವ ಅಗತ್ಯವಿಲ್ಲ, ಹೀಗಾಗಿ ನಾಯಕ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾದರೆ, ಶುಭಮನ್ ಗಿಲ್ ಜೊತೆ ಮಯಾಂಕ್ ಟೀಮ್ ಇಂಡಿಯಾ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
31 ವರ್ಷದ ಮಯಾಂಕ್ ಅಗರ್ವಾಲ್ ಕಳೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿದ್ದರು. ಆದರೆ ಸರಣಿಯಲ್ಲಿ ಆಡಿದ 2 ಪಂದ್ಯಗಳಿಂದ ಕೇವಲ 59 ರನ್ ಹಾಕಿದ್ದ ಮಯಾಂಕ್, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾದ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ ಅದೃಷ್ಟ ಮತ್ತೊಮ್ಮೆ ಮಯಾಂಕ್ ಕೈ ಹಿಡಿದಿದೆ. ಭಾರತ ಪರ ಇದುವರೆಗೆ 21 ಟೆಸ್ಟ್ ಪಂದ್ಯಗಳನ್ನಾಡಿರುವ ಬಲಗೈ ಬ್ಯಾಟ್ಸ್”ಮನ್ ಮಯಾಂಕ್ ಅಗರ್ವಾಲ್ 41.33ರ ಸರಾಸರಿಯಲ್ಲಿ 4 ಶತಕಗಳ ಸಹಿತ 1,488 ರನ್ ಕಲೆ ಹಾಕಿದ್ದಾರೆ.
ಕೋವಿಡ್ ಕಾರಣದಿಂದ ಕಳೆದ ವರ್ಷ ಮೊಟಕುಗೊಂಡಿದ್ದ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯವನ್ನು ಭಾರತ ಜುಲೈ ಒಂದರಿಂದ ಎಡ್ಜ್’ಬಾಸ್ಟನ್ ಮೈದಾನದಲ್ಲಿ ಆಡಲಿದೆ. 4 ಪಂದ್ಯಗಳು ಈಗಾಗಲೇ ಮುಗಿದಿದ್ದು, ಭಾರತ 2-1ರಲ್ಲಿ ಮುನ್ನಡೆಯಲ್ಲಿದೆ. ಅಂತಿಮ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಇಂಗ್ಲೆಂಡ್ ನೆಲದಲ್ಲಿ ಭಾರತ 15 ವರ್ಷಗಳ ನಂತರ ಟೆಸ್ಟ್ ಸರಣಿಯನ್ನು ಗೆಲ್ಲಲಿದೆ.
NEWS – Mayank Agarwal added to India’s Test squad as a cover for captain Rohit Sharma, who tested positive for COVID-19.
— BCCI (@BCCI) June 27, 2022
More details here – https://t.co/1LHFAEDkx9 #ENGvIND pic.twitter.com/f5iss5vIlL
ಭಾರತ ಟೆಸ್ಟ್ ತಂಡ : ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಭ್ ಪಂತ್ (WK), ಕೆಎಸ್ ಭರತ್ (WK), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರಿತ್ ಶಮಿ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ, ಮಯಾಂಕ್ ಅಗರ್ವಾಲ್
ಇದನ್ನೂ ಓದಿ : ಚಿನ್ನಸ್ವಾಮಿ ಮೈದಾನದಲ್ಲೇ ಸೋತಿದ್ದ ನಾಯಕ, ಅದೇ ಮೈದಾನದಲ್ಲಿ ರಣಜಿ ಟ್ರೋಫಿ ಎತ್ತಿ ಹಿಡಿದ !
ಇದನ್ನೂ ಓದಿ : Jaspreet Bumrah to lead India : ಟೀಮ್ ಇಂಡಿಯಾಗೆ ಬುಮ್ರಾ ನಾಯಕ ?
Karnataka Star Mayank Agarwal called up to India Test squad