Vehicle checks New Order : ತಪಾಸಣೆ ನೆಪದಲ್ಲಿ ಇನ್ಮುಂದೆ ಎಲ್ಲೆಂದರಲ್ಲಿ ವಾಹನ ಅಡ್ಡಗಟ್ಟುವಂತಿಲ್ಲ ಪೊಲೀಸರು

ಬೆಂಗಳೂರು : ವಾಹನ ಸವಾರರು ನಿಯಮ ಉಲ್ಲಂಘಿಸುತ್ತಾರೆ ಅನ್ನೋದು ಎಷ್ಟು ನಿಜವೋ ಸಂಚಾರಿ ನಿಯಮ ಪಾಲಿಸುವ ನೆಪದಲ್ಲಿ (Vehicle checks New Order) ಪೊಲೀಸರು ಜನರನ್ನು ಸುಲಿಗೆ ಮಾಡ್ತಾರೆ ಅನ್ನೋದು ಅಷ್ಟೇ ನಿಜ. ಆದರೆ ಇನ್ಮುಂದೇ ಈ ಸುಲಿಗೆಗೆ ಕಡಿವಾಣ ಬೀಳುವ ಲಕ್ಷಣ ಕಾಣಿಸುತ್ತಿದ್ದು, ಸಿಲಿಕಾನ್ ಸಿಟಿಯಲ್ಲಿ ಇನ್ಮುಂದೆ ಸುಮ್ಮ ಸುಮ್ಮನೆ ವಾಹನ ನಿಲ್ಲಿಸುವಂತಿಲ್ಲ ಎಂದು ಪೊಲೀಸರಿಗೆ ಡಿಜಿಪಿ ಪ್ರವೀಣ್ ಸೂದ್ ಖಡಕ್ ಸೂಚನೆ ನೀಡಿದ್ದಾರೆ.

ಹೌದು ನಗರದಾದ್ಯಂತ ಸಂಚಾರಿ ಪೊಲೀಸರು ಎಲ್ಲೆಂದರಲ್ಲಿ ವಾಹನ ಸವಾರರನ್ನು ತಡೆದು ದಾಖಲೆ ಪರಿಶೀಲಿಸುತ್ತಿದ್ದರು. ಇದರಿಂದ ಅದೇಷ್ಟೋ ವಾಹನ ಸವಾರರು ಆಯತಪ್ಪಿ ಬೀಳೋದು, ಅಲ್ಲದೇ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬಿದ್ದು ಸಾಯುವಂತಹ ಘಟನೆಗಳು ನಡೆಯುತ್ತಿದ್ದವು. ಈಗ ಈ ಅವಾಂತರಕ್ಕೆ ಕಡಿವಾಣ ಹಾಕಲು ಬೆಂಗಳೂರು ನಗರ ಟ್ರಾಫಿಕ್ ಪೊಲೀಸರಿಗೆ ಡಿಜಿಪಿ ಪ್ರವೀಣ್ ಸೂದ್ ಸೂಚನೆ ನೀಡಿದ್ದು, ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನ ತಡೆದು ಪರಿಶೀಲನೆ ನಡೆಸುವುದಕ್ಕೆ ಬ್ರೇಕ್ ಹಾಕಲು ಸೂಚಿಸಿದ್ದಾರೆ.

ಈ ಬಗ್ಗೆ ಟ್ವಿಟ್ ಮೂಲಕ ಮಾಹಿತಿ ನೀಡಿದ ಡಿಜಿಪಿ ಪ್ರವೀಣ್ ಸೂದ್, ಟ್ವೀಟ್ ನ್ನು ನಗರದ ಪೊಲೀಸ್ ಕಮೀಷನರ್ ಹಾಗೂ ಟ್ರಾಫಿಕ್ ಜಂಟಿ ಆಯುಕ್ತರ ಟ್ಯಾಗ್ ಮಾಡಿದ್ದಾರೆ. ಅಲ್ಲದೇ ನಗರದಲ್ಲಿ ವಾಹನಗಳ ತಡೆದು ಪರಿಶೀಲನೆ ಬಗ್ಗೆ ಸಾರ್ವಜನಿಕರಿಂದ ಸಾಲು ಸಾಲು ದೂರು ಸಲ್ಲಿಕೆಯಾಗಿತ್ತು. ಬಹುತೇಕರು ಡಿಜಿಪಿ ಪ್ರವೀಣ್ ಸೂದ್ ಗೆ ಟ್ವಿಟ್ ಮೂಲಕ ದೂರು ನೀಡಿದ್ದರು.

ಸಾರ್ವಜನಿಕರ ಟ್ವಿಟ್ ಗೆ ಪ್ರತಿಕ್ರಿಯಿಸಿದ ಡಿಜಿಪಿ, ಇನ್ಮುಂದೆ ಬೇಕಾಬಿಟ್ಟಿ ವಾಹನಗಳನ್ನು ಟ್ರಾಫಿಕ್‌ ಪೊಲೀಸರು ತಡೆದು ನಿಲ್ಲಿಸುವಂತಿಲ್ಲ.ಡ್ರಿಂಕ್‌ ಆಂಡ್ ಡ್ರೈವ್‌ ಮಾಡುವ ವಾಹನ ಗಳಿಗೆ ಮಾತ್ರ ತಪಾಸಣೆ. ಹಾಗೂ ರೂಲ್ಸ್‌ ಬ್ರೇಕ್‌ ಮಾಡುವಂತಹ ವಾಹನಗಳ ಮೇಲೆ ಮಾತ್ರ ನಿಗಾ ಇಡಿ ಎಂದು ನಗರದ ಹಿರಿಯ ಅಧಿಕಾರಿಗಳಿಗೆ ಟ್ರಾಫಿಕ್ ಟ್ವೀಟ್ ಮೂಲಕ ಆದೇಶ ನೀಡಿದ್ದಾರೆ.

ಇನ್ನು ಡಿಜಿಪಿ ಈ ಆದೇಶದ ಕುರಿತು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ದಾಖಲೆ ಗಳ ಪರಿಶೀಲನೆ ವಿಷಯದಲ್ಲಿ ನಿಯಮ ಉಲ್ಲಂಘನೆ ಆಗಿದ್ದಲ್ಲಿ ಸ್ಥಳ, ದಿನಾಂಕ ಹಾಗೂ ಸಮಯವನ್ನು ತಿಳಿಸಿ. ನಾವು ಕೂಡಲೇ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ : Monsoon Health Care: ಮಾನ್ಸೂನ್ ನಲ್ಲಿ ಆರೋಗ್ಯ ಕಾಳಜಿ ಹೀಗಿರಲಿ; ಸಾಂಕ್ರಾಮಿಕ ರೋಗಗಳನ್ನು ದೂರವಿರಿಸಲು ಹೀಗೆ ಮಾಡಿ

ಇದನ್ನೂ ಓದಿ : woman switches gender : ಸಲಿಂಗಕಾಮಕ್ಕಾಗಿ ಪುರುಷನಾಗಿ ಲಿಂಗ ಪರಿವರ್ತನೆ ಮಾಡಿಕೊಂಡ ಮಹಿಳೆ

vehicle checks New Order, Police are not obstructing vehicle checks on all sides

Comments are closed.