woman switches gender : ಸಲಿಂಗಕಾಮಕ್ಕಾಗಿ ಪುರುಷನಾಗಿ ಲಿಂಗ ಪರಿವರ್ತನೆ ಮಾಡಿಕೊಂಡ ಮಹಿಳೆ

ಉತ್ತರ ಪ್ರದೇಶ : woman switches gender : ಸಲಿಂಗ ಕಾಮಕ್ಕೆ ಕಾನೂನು ರೀತಿಯಲ್ಲಿ ಮಾನ್ಯತೆ ಸಿಕ್ಕಿದ್ದರೂ ಸಹ ಅನೇಕರು ಇದನ್ನು ಒಪ್ಪಿಕೊಳ್ಳುವುದಿಲ್ಲ. ಅದರಲ್ಲೂ ಮನೆಯಲ್ಲಿ ಯಾರಾದರೊಬ್ಬರು ಈ ರೀತಿ ಇದ್ದಾರೆ ಎಂದರೂ ಸಾಕು ಕುಟುಂಬದ ಮರ್ಯಾದೆಯೇ ಹೋಯ್ತು ಎಂಬಂತೆ ವರ್ತಿಸುವವರೇ ಹೆಚ್ಚು. ಉತ್ತರ ಪ್ರದೇಶದ ಪ್ರಯಾಗ್​ ರಾಜ್​ ಎಂಬಲ್ಲಿಯೂ ಸಹ ಇಂತಹದ್ದೇ ಒಂದು ಘಟನೆ ವರದಿಯಾಗಿದೆ. ಕುಟುಂಬಸ್ಥರ ವಿರೋಧವನ್ನು ಸಹಿಸಲಾರದ ಸಲಿಂಗಕಾಮಿಯೊಬ್ಬರು ಲಿಂಗ ಪರಿವರ್ತನೆ ಮಾಡಿಕೊಂಡ ಘಟನೆಯೊಂದು ವರದಿಯಾಗಿದೆ.


ಇಬ್ಬರು ಮಹಿಳೆಯರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಈ ಸಲಿಂಗ ಸಂಬಂಧಕ್ಕೆ ಕುಟುಂಬಸ್ಥರು ಒಪ್ಪಿಗೆ ನೀಡಿರಲಿಲ್ಲ. ನಾನಾ ವಿಧಗಳಿಂದ ಪೋಷಕರನ್ನು ಒಪ್ಪಿಸಲು ಈ ಇಬ್ಬರು ಮಹಿಳೆಯರು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದಾರೆ. ಆದರೆ ಕುಟುಂಬಸ್ಥರು ಮಾತ್ರ ಯಾವುದೇ ಮನವಿಗೂ ಬಾಗಲಿಲ್ಲ. ಆದರೆ ಒಬ್ಬರನ್ನೊಬ್ಬರು ಬಿಟ್ಟಿರಲು ಸಾಧ್ಯವಾಗದಷ್ಟು ಆಪ್ತವಿದ್ದ ಈ ಜೋಡಿ ಕುಟುಂಬಸ್ಥರು ತಮ್ಮ ಸಂಬಂಧವನ್ನು ಒಪ್ಪಿಕೊಳ್ಳುವಂತೆ ಮಾಡಲು ಹೊಸ ನಿರ್ಧಾರ ಮಾಡಿತ್ತು.


ಈ ಇಬ್ಬರು ಮಹಿಳೆಯರಲ್ಲಿ ಒಬ್ಬರು ಪ್ರಯಾಗ್​ ರಾಜ್​ನ ಆಸ್ಪತ್ರೆಯಲ್ಲಿ ಲಿಂಗ ಪರಿವರ್ತನೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಈ ಬಳಿಕವಾದರೂ ಕುಟುಂಬಸ್ಥರು ತಮ್ಮ ಸಂಬಂಧವನ್ನು ಒಪ್ಪಿಕೊಳ್ಳಲಿ ಎಂದು ಇಂತಹದ್ದೊಂದು ಕಠಿಣ ನಿರ್ಧಾರ ಕೈಗೊಂಡಿದ್ದಾರೆ.


ಪ್ರಯಾಗ್​​ ರಾಜ್​​ನಲ್ಲಿರುವ ಸ್ವರೂಪ್​ ರಾಣಿ ನೆಹರೂ ಆಸ್ಪತ್ರೆಯಲ್ಲಿ ಮಹಿಳೆಗೆ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಯನ್ನು ವೈದ್ಯ ತಂಡ ಯಶಸ್ವಿಯಾಗಿ ನೆರವೇರಿಸಿದೆ. ಈಕೆ ಪುರುಷನಾಗಿ ಸಂಪೂರ್ಣ ಬದಲಾಗಲು ಇನ್ನೂ 1.5 ವರ್ಷ ಸಮಯ ಬೇಕಾಗುತ್ತದೆ ಎಂದು ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ತಿಳಿಸಿದ್ದಾರೆ.


“ಮಹಿಳೆಗೆ ಟೆಸ್ಟೋಸ್ಟೆರಾನ್ ರಿಪ್ಲೇಸ್ಮೆಂಟ್ ಥೆರಪಿ ನೀಡಲಾಗುತ್ತದೆ. ಟೆಸ್ಟೋಸ್ಟೆರಾನ್ ಚಿಕಿತ್ಸೆಯು ಎದೆಯ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ” ಎಂದು ಡಾ ಮೋಹಿತ್ ಜೈನ್ ಮಾಹಿತಿ ನೀಡಿದ್ದಾರೆ .
ಲಿಂಗ ಬದಲಾವಣೆ ಶಸ್ತ್ರ ಚಿಕಿತ್ಸೆಯ ಬಳಿಕ ಮಹಿಳೆಗೆ ಗರ್ಭ ಧರಿಸುವ ಸಾಮರ್ಥ್ಯ ಇರುವುದಿಲ್ಲ. ಈ ರೀತಿಯ ಒಂದು ಶಸ್ತ್ರ ಚಿಕಿತ್ಸೆಯನ್ನು ನಾವು ನಡೆಸಿರುವುದು ಇದೇ ಮೊದಲು. ಮುಂದಿನ 18 ತಿಂಗಳೊಳಗಾಗಿ ಇದು ಪೂರ್ಣಗೊಳ್ಳಲಿದೆ. ಶಸ್ತ್ರ ಚಿಕಿತ್ಸೆಗೆ ಒಳಗಾದ ಮಹಿಳೆಯು ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂಡು ಡಾ. ಮೋಹಿತ್ ಜೈನ್​ ತಿಳಿಸಿದ್ದಾರೆ.

ಇದನ್ನು ಓದಿ : Alia Bhatt : ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಆಲಿಯಾ ಭಟ್​,ರಣಬೀರ್​ ಕಪೂರ್​ ದಂಪತಿ

ಇದನ್ನೂ ಓದಿ : ಚಿನ್ನಸ್ವಾಮಿ ಮೈದಾನದಲ್ಲೇ ಸೋತಿದ್ದ ನಾಯಕ, ಅದೇ ಮೈದಾನದಲ್ಲಿ ರಣಜಿ ಟ್ರೋಫಿ ಎತ್ತಿ ಹಿಡಿದ !

UP woman switches gender to be with girlfriend after families oppose relation

Comments are closed.