ಸೋಮವಾರ, ಏಪ್ರಿಲ್ 28, 2025
HomeSportsCricketKinchit Shah Love Story: ಭಾರತ ವಿರುದ್ಧ ಸೋತ ಬೆನ್ನಲ್ಲೇ ಪ್ರೇಯಸಿಗೆ “ಲವ್ ಪ್ರಪೋಸ್” ಮಾಡಿದ...

Kinchit Shah Love Story: ಭಾರತ ವಿರುದ್ಧ ಸೋತ ಬೆನ್ನಲ್ಲೇ ಪ್ರೇಯಸಿಗೆ “ಲವ್ ಪ್ರಪೋಸ್” ಮಾಡಿದ ಹಾಂಕಾಂಗ್ ಆಟಗಾರ

- Advertisement -

ದುಬೈ: (Kinchit Shah Love Story) ಕಳೆದ ವರ್ಷದ ಐಪಿಎಲ್ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಧ್ಯಮ ವೇಗಿ ದೀಪಕ್‌ ಚಹರ್ ಸ್ಟೇಡಿಯಂನಲ್ಲೇ ತಮ್ಮ ಪ್ರೇಯಸಿಗೆ ಲವ್ ಪ್ರಪೋಸ್ ಮಾಡಿದ ವಿಚಾರ ನಿಮ್ಗೆ ಗೊತ್ತೇ ಇದೆ. ಭಾರತ ಮತ್ತು ಹಾಂಕಾಂಗ್ (Hong Kong) ನಡುವಿನ ಏಷ್ಯಾ ಕಪ್ ಪಂದ್ಯದ ಬೆನ್ನಲ್ಲೇ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಅಂಥದ್ದೇ ಘಟನೆಯೊಂದು ನಡೆದಿದೆ.

ಬುಧವಾರ ನಡೆದ ಏಷ್ಯಾ ಕಪ್ ಪಂದ್ಯದಲ್ಲಿ ಭಾರತ ವಿರುದ್ಧ ಹಾಂಕಾಂಗ್ (India Vs Hong Kong Asia Cup 2022) ಸೋತ ಬೆನ್ನಲ್ಲೇ ಹಾಂಕಾಂಗ್ ಆಟಗಾರ ಕಿಂಚಿತ್ ಶಾ, ತಮ್ಮ ಪ್ರೇಯಸಿಗೆ ಸ್ಟೇಡಿಯಂನಲ್ಲೇ ಪ್ರೇಮ ನಿವೇದನೆ ಮಾಡಿದ್ದಾರೆ. ಭಾರತ ವಿರುದ್ಧ 28 ಎಸೆತಗಳಲ್ಲಿ 30 ರನ್ ಬಾರಿಸಿದ್ದ ಕಿಂಚಿತ್ ಶಾ, ಪಂದ್ಯದ ನಂತರ ತಮ್ಮ ಪ್ರೇಯಸಿಯಿದ್ದ ಸ್ಟ್ಯಾಂಡ್’ಗೆ ಹೋಗಿದ್ದಾರೆ. ಈ ವೇಳೆ ಪ್ರಿಯಕರ ಸೋಲಿನ ನಿರಾಸೆಯಲ್ಲಿದ್ದಾರೆ ಎಂದು ಭಾವಿಸಿದ ಪ್ರೇಯಸಿ, ಕಿಂಚಿತ್ ಶಾ ಅವರನ್ನು ಅಪ್ಪಿಕೊಂಡು ಸಮಾಧಾನ ಪಡಿಸಲು ಮುಂದಾಗಿದ್ದಾರೆ. ಆದರೆ ಆಗಿದ್ದೇ ಬೇರೆ.

ಪ್ರೇಯಿಸಿ ಮುಂದೆ ಮಂಡಿಯೂರಿ ಕುಳಿತ ಕಿಂಚಿತ್ ಶಾ, ಉಂಗುರವೊಂದನ್ನು ಹಿಡಿದು “ನನ್ನನ್ನು ಮದುವೆಯಾಗುತ್ತೀಯಾ” ಎಂದು ಕೇಳಿದ್ದಾರೆ. ಇದನ್ನು ಕೇಳಿ ಪ್ರೇಯಸಿಗೆ ಒಂದು ಕ್ಷಣ ಅಚ್ಚರಿ, ಕಣ್ಣಲ್ಲಿ ಆನಂದಭಾಷ್ಪ. ನಂತರ ಸಾವರಿಸಿಕೊಂಡ ಆಕೆ, ಪ್ರಿಯಕರನ ಪ್ರೇಮ ನಿವೇದನೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾಳೆ. ಬಳಿಕ ಪ್ರೇಯಸಿಗೆ ಕಿಂಚಿತ್ ಶಾ ಉಂಗುರ ತೊಡಿಸಿದ್ದಾರೆ. ಈ ದೃಶ್ಯವನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದು, ಹೊಸ ಜೀವನಕ್ಕೆ ಕಾಲಿಟ್ಟಿರುವ ಇಬ್ಬರಿಗೂ ಶುಭ ಹಾರೈಸಿದೆ.

ಹಾಂಕಾಂಗ್ ಆಡ್ತಿರೋ ಕಿಂಚಿತ್ ಶಾ ಮೂಲತಃ ಮುಂಬೈ ಮೂಲದವರು. ಕಿಂಚಿತ್ ತಂದೆ ವಜ್ರದ ವಾಪಾರಿ. ಮಗ 3 ತಿಂಗಳು ಮಗುವಿದ್ದಾಗ ತಂದೆ ಹಾಂಕಾಂಗ್’ಗೆ ಹೋಗಿದ್ದರು. ತಂದೆ ಸಹ ಕ್ರಿಕೆಟ್ ಆಡುತ್ತಿದ್ದರಿಂದ 10ನೇ ವಯಸ್ಸಿನಲ್ಲಿ ಬ್ಯಾಟ್-ಬಾಲ್ ಹಿಡಿದ ಕಿಂಚಿತ್, 4 ವರ್ಷಗಳ ಕಾಲ ಕ್ಲಬ್ ಪರ ಆಡುತ್ತಿದ್ದರು. ಬಳಿಕ ಹಾಂಕಾಂಗ್ ತಂಡಕ್ಕೆ ಆಯ್ಕೆಯಾಗಿದ್ದರು. 2018ರ ಏಷ್ಯಾಕಪ್ ಟೂರ್ನಿಯಲ್ಲೂ ಕಿಂಚಿತ್ ಶಾ ಆಡಿದ್ದರು.

ಭಾರತ ವಿರುದ್ಧದ ಏಷ್ಯಾ ಕಪ್ ಪಂದ್ಯದ ನಂತರ ಪ್ರೇಯಸಿಗೆ ಪ್ರೇಮ ನಿವೇದನೆ ಮಾಡಿಕೊಳ್ಳಲು ಕಿಂಚಿತ್ ಶಾ ಮೊದಲೇ ಪ್ಲಾನ್ ಮಾಡಿದ್ದರು. ಅದರಂತೆ ಲವ್ ಪ್ರಪೋಸ್ ಮಾಡಿ ಕ್ರೀಡಾಂಗಣದಲ್ಲೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಈ ಸುಂದರ ದೃಶ್ಯಕ್ಕೆ ಸ್ಟೇಡಿಯಂನಲ್ಲಿದ್ದ ಕ್ರಿಕೆಟಿಗರು, ಕ್ರಿಕೆಟ್ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ.

ಇದನ್ನೂ ಓದಿ : Irfan Pathan: ಅರಬ್ ದೇಶದಲ್ಲಿ ಯುವ ಕ್ರಿಕೆಟಿಗರಿಗೆ ಕ್ರಿಕೆಟ್ ಪಾಠ ಹೇಳಿಕೊಟ್ಟ ಟೀಮ್ ಇಂಡಿಯಾ ಆಲ್ರೌಂಡರ್ ಇರ್ಫಾನ್‌ ಪಠಾಣ್

ಇದನ್ನೂ ಓದಿ : Duleep Trophy: ದುಲೀಪ್ ಟ್ರೋಫಿ: ದಕ್ಷಿಣ ವಲಯ ತಂಡದಲ್ಲಿ ಕರ್ನಾಟಕದ ನಾಲ್ವರಿಗೆ ಸ್ಥಾನ; ಮಯಾಂಕ್ ಅಗರ್‌ವಾಲ್ ಉಪನಾಯಕ

Kinchit Shah Love Story The Hong Kong player proposed to his girlfriend after losing against India

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular