Virat Kohli Restaurant: ಕೊಹ್ಲಿ ‘ಖೇಲ್’ ಕತಂ.. ದುಕಾನ್ ಓಪನ್

ಮುಂಬೈ : Virat Kohli Restaurant ಖೇಲ್ ಖತಂ ದುಕಾನ್ ಬಂದ್. ಈ ಮಾತು ತುಂಬಾ ಜನರಿಗೆ ಚಿರಪರಿಚಿತ.. ಇದರರ್ಥ ಆಟ ಮುಗಿತು, ಅಂಗಡಿ ಬಂದ್ ಮಾಡು ಎಂದು. ಈ ಪದವನ್ನ ಎಲ್ಲಾ ಮುಗೀತು ಅನ್ನೋದಕ್ಕೂ ಅನ್ವರ್ಥವಾಗಿ ಬಳಸ್ತಾರೆ. ಇದೀಗ ಇದೇ ಪದವನ್ನ ಉಲ್ಟಾ ಮಾಡ್ತಿದ್ದಾರೆ ರನ್ ಮಿಷಿನ್ ವಿರಾಟ್ ಕೊಹ್ಲಿ.

ಖೇಲ್ ಕತಂ ದುಕಾನ್ ಬಂದ್ ಅನ್ನ ಖೇಲ್ ಖತಂ.. ದುಕಾನ್ ಓಪನ್ ಅಂತಾ ವಿರಾಟ್ ಕೊಹ್ಲಿ ಹೊಸ ಟ್ರೆಂಡ್ ಸೃಷ್ಟಿಸ್ತಿದ್ದಾರೆ. ಹೌದು ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡದ ರನ್ ಮಿಷಿನ್ ಅಂತಾನೇ ಫೇಮಸ್. ಆದ್ರೆ ಕಳೆದ ಕೆಲ ತಿಂಗಳಿನಿಂದ ಕೊಹ್ಲಿ ಕಳಪೆ ಫಾರ್ಮ್ ನಿಂದ ಪರದಾಡ್ತಿದ್ದಾರೆ. ಸೆಂಚ್ಯೂರಿ ಸ್ಟಾರ್ ಬ್ಯಾಟ್ಸ್ ಮ್ಯಾನ್ ಕೊಹ್ಲಿ ಬ್ಯಾಟಿನಿಂದ ಒಂದೂವರೆ ವರ್ಷದಿಂದ ಒಂದು ಸೆಂಚ್ಯೂರಿ ಆಟದ ಪ್ರದರ್ಶನ ಬಂದಿಲ್ಲ.. ಹೀಗಾಗಿ ಅದ್ಯಾವ ಮಟ್ಟಿಗೆ ಕೊಹ್ಲಿ ಟ್ರೋಲ್ ಆಗ್ತಿದ್ದಾರೆ ಅಂದ್ರೆ ವಿರಾಟ್ ಭವಿಷ್ಯ ಇಷ್ಟೇ. ಕೊಹ್ಲಿ ಭವಿಷ್ಯ ಮುಗಿದೇ ಹೋಯ್ತು ಅನ್ನೋ ಲೆವಲ್ ಗೆ. ಇದೇ ಹೊತ್ತಲ್ಲಿ ಕೊಹ್ಲಿ ಕುರಿತು ಹೊಸ ವಿಚಾರವೊಂದು ಬಂದಿದೆ.

ಕೊಹ್ಲಿ ಮಂಬೈನಲ್ಲಿ ಹೊಸದಾಗಿ ರೆಸ್ಟೊರೆಂಟ್ ಮಾಡೋಕೆ ಮುಂದಾಗಿದ್ದಾರೆ ಅಂತಾಗೊತ್ತಾಗಿದೆ. ಇದಕ್ಕಾಗಿ ಮುಂಬೈನ ಜುಹು ಪ್ರದೇಶದಲ್ಲಿರೋ ಬಾಲಿವುಡ್ ಗಾಯಕ ದಿವಂಗತ ಕಿಶೋರ್ ಕುಮಾರ್ ಅವರ ಬಂಗಲೆಯ ಒಂದು ಭಾಗದಲ್ಲಿ ರೆಸ್ಟೊರೆಂಟ್ ಆರಂಭಿಸ್ತಿದ್ದಾರೆ ಅನ್ನೋ ಮಾಹಿತಿ ಇದೆ. ಕಿಶೋರ್ ಕುಮಾರ್ ಅವರ ಬಂಗೆಯಲ್ಲಿ ಈಗಾಗಲೇ ಒಂದು ರೆಸ್ಟೊರೆಂಟ್ ಇತ್ತು. ಅದನ್ನ ‘ಬಿ ಮುಂಬೈ’ ಅನ್ನೋ ಹೆಸರಿನಿಂದ ಕರೆಯಲಾಗ್ತಿತ್ತು. ಆದ್ರೀಗ ಆ ರೆಸ್ಟೊರೆಂಟ್ ಸ್ಥಗಿತಗೊಂಡಿದೆ. ಹೀಗಾಗಿ, ಈಗ ಬಂದ್ ಆಗಿರೋ ರೆಸ್ಟೊರೆಂಟ್ ಅನ್ನೇ ಹ್ಲಿ ಐದು ವರ್ಷಗಳ ಕಾಲಕ್ಕೆ ಲೀಸ್ ಗೆ ಪಡೆದಿದ್ದಾರೆ ಅಂತಾ ಮಾಧ್ಯಮಗಳು ವರದಿ ಮಾಡಿವೆ.

ಈಗಾಗಲೇ ದೆಹಲಿಯಲ್ಲಿಯೂ ಕೊಹ್ಲಿಗೆ ಸೇರಿದ ರೆಸ್ಟೊರೆಂಟ್ ಗಳು ಇವೆ. ಆದ್ರೆ, ಮುಂಬೈನಲ್ಲಿ ಹೊಸ ರೆಸ್ಟೊರೆಂಟ್ ಮಾಡಬೇಕು ಅನ್ನೋದು ಕೊಹ್ಲಿ ಪ್ಲ್ಯಾನ್ ಆಗಿತ್ತು. ಹೀಗಾಗಿ ಕೊಹ್ಲಿ ಆಟ ಕಳೆಗುಂದುತ್ತಿರುವ ಹೊತ್ತಲ್ಲಿ ರೆಸ್ಟೊರೆಂಟ್ ಆರಂಭಿಸೋಕ್ಕೆ ಮುಂದಾಗಿರೋದಕ್ಕೆ ಕೆಲವರು ಕೊಹ್ಲಿ ಖೇಲ್ ಖತಂ ದುಕಾನ್ ಓಪನ್ ಅಂತಾ ಹೇಳ್ತಿದ್ದಾರೆ.

Virat Kohli Restaurant- Kishore Kumar’s Bungalow-new start

Comments are closed.