ಪುಣೆ : ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಈಗಾಗಲೇ ಸತತ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡ ಇಂದು ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಐಪಿಎಲ್‌ನ ಶ್ರೇಷ್ಟ ನಾಯಕ ಎನಿಸಿಕೊಂಡಿರುವ ರೋಹಿತ್ ಶರ್ಮಾಗೆ ಈ ಬಾರಿ ಲಕ್ ಕೈ ಹಿಡಿಯುತ್ತಿಲ್ಲ. ಹೀಗಾಗಿ ಮುಂಬೈ ಇಂದು ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ 14 ನೇ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ರೋಹಿತ್ ಶರ್ಮಾ ಮುಖಾಮುಖಿಯಾಗಲಿದ್ದಾರೆ. ಮುಂಬೈ ಡೆಲ್ಲಿ ಕ್ಯಾಪಿಟಲ್ಸ್ (KKR VS MI)ವಿರುದ್ದದ ಮೊದಲ ಪಂದ್ಯದಲ್ಲಿ ಸೋಲನ್ನು ಕಂಡಿದ್ದು, ಎರಡನೇ ಪಂದ್ಯದಲ್ಲಿ ಹೀನಾಯ ಸೋಲನ್ನು ಕಂಡಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಬಲಿಷ್ಠ ಕೆಕೆಆರ್ ತಂಡವನ್ನು ಎದುರಿಸಲಿದೆ.

ಐಪಿಎಲ್ ಅಂಕಪಟ್ಟಿಯಲ್ಲಿ ಈಗಾಗಲೇ ರಾಜಸ್ಥಾನ ರಾಯಲ್ಸ್ ತಂಡ ಮೊದಲ ಸ್ಥಾನದಲ್ಲಿದ್ರೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮೂರು ಪಂದ್ಯಗಳ ಪೈಕಿ 2 ಪಂದ್ಯವನ್ನು ಜಯಿಸಿ ಎರಡನೇ ಸ್ಥಾನದಲ್ಲಿದೆ. ಆದರೆ ಸತತ ಎರಡು ಪಂದ್ಯಗಳನ್ನು ಸೋತಿರುವ ಮುಂಬೈ ಇಂಡಿಯನ್ಸ್ ಸದ್ಯ ಅಂಕಪಟ್ಟಿಯಲ್ಲಿ ೮ ಸ್ಥಾನದಲ್ಲಿದೆ. ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸಸ್ ಹೈದ್ರಾಬಾದ್ ತಂಡಗಳು ಈ ಬಾರಿ ಖಾತೆಯನ್ನೇ ತೆರೆದಿಲ್ಲ.
KKR VS MI ತಂಡಗಳ ಬಲಾಬಲ ಹೇಗಿದೆ ಗೊತ್ತಾ ?
ಕೋಲ್ಕತ್ತಾ ನೈಟ್ ರೈಡರ್ಸ್ ಈ ಬಾರಿ ಐಪಿಎಲ್‌ನ ಬಲಿಷ್ಠ ತಂಡ. ಆರೋನ್ ಪಿಂಚ್, ಅಜಿಂಕ್ಯಾ ರಹಾನೆ, ನಿತೀಶ್ ರಾಣಾ, ಶ್ರೇಯಸ್ ಅಯ್ಯರ್, ಆಂಡ್ರೆ ರೆಸೆಲ್ ಸುನಿಲ್ ನರೇನ್, ವೆಂಕಟೇಶ್ ಅಯ್ಯರ್ , ಸ್ಯಾಮ್ ಬಿಲ್ಲಿಂಗ್ ಬ್ಯಾಟಿಂಗ್‌ಗೆ ನೆರವಾಗಲಿದ್ರೆ, ಉಮೇಶ್ ಯಾದವ್, ವರುಣ್ ಚಕ್ರವರ್ತಿ, ಟೀಮ್ ಸೌಥಿ, ಪಾಟ್ ಕುಮಿನ್ಸ್ ಬೌಲಿಂಗ್ ಅಸ್ತ್ರವಾಗಿದ್ದಾರೆ. ಆರೋನ್ ಪಿಂಚ್, ಉಮೇಶ್ ಯಾದವ್, ಶ್ರೇಯಸ್ ಅಯ್ಯರ್, ಅಜಿಂಕ್ಯಾ ರಹಾನೆ ಅದ್ಬುತ ಫಾರ್ಮ್‌ನಲ್ಲಿರುವುದು ಕೆಕೆಆರ್ ತಂಡಕ್ಕೆ ಫ್ಲಸ್ ಪಾಯಿಂಟ್.

ಇನ್ನು ಮುಂಬೈ ಇಂಡಿಯನ್ಸ್ ತಂಡ ಕೂಡ ಬಲಿಷ್ಠವಾಗಿದೆ. ರೋಹಿತ್ ಶರ್ಮಾ, ಟಿಲಕ್ ವರ್ಮಾ, ಡೇನಿಯಲ್ ಸ್ಯಾಮ್, ಅರ್ಶದ್ ಖಾನ್, ಕಿರೊನ್ ಪೊಲಾರ್ಡ್, ಬಾಸಿಲ್ ತಂಪಿ, ಇಶಾನ್ ಕಿಶನ್, ಟಿ ಮಿಲ್ಸ್ ಅವರಂತಹ ಬಲಾಢ್ಯ ಆಟಗಾರರಿದ್ದಾರೆ. ಆದರೆ ಈ ಬಾರಿ ಇಶಾನ್ ಕಿಶಾನ್ ಹೊರತು ಪಡಿಸಿ ಉಳಿದ್ಯಾವ ಆಟಗಾರರು ಮುಂಬೈ ತಂಡಕ್ಕೆ ಬಲ ತುಂಬುತ್ತಿಲ್ಲ.
ಮುಂಬೈ ಇಂಡಿಯನ್ಸ್ ತಂಡ : ಇಶಾನ್ ಕಿಶನ್ (WK), ರೋಹಿತ್ ಶರ್ಮಾ (C), ಅನ್ಮೋಲ್ಪ್ರೀತ್ ಸಿಂಗ್, ತಿಲಕ್ ವರ್ಮಾ, ಕೀರಾನ್ ಪೊಲಾರ್ಡ್, ಟಿಮ್ ಡೇವಿಡ್, ಡೇನಿಯಲ್ ಸಾಮ್ಸ್, ಮುರುಗನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಟೈಮಲ್ ಮಿಲ್ಸ್, ಬಾಸಿಲ್ ಥಂಪಿ, ಸೂರ್ಯಕುಮಾರ್ ಯಾದವ್, ಜಯದೇವ್ ಉನದ್ಕತ್, ಫ್ಯಾಬಿಯನ್ ಅಲೆನ್, ಸಂಜಯ್ ಯಾದವ್, ರಿಲೆ ಮೆರೆಡಿತ್, ರಮಣದೀಪ್ ಸಿಂಗ್, ಮಯಾಂಕ್ ಮಾರ್ಕಂಡೆ, ಆರ್ಯನ್ ಜುಯಲ್, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್, ರಾಹುಲ್ ಬುದ್ಧಿ, ಅರ್ಷದ್ ಖಾನ್, ಡೆವಾಲ್ಡ್ ಬ್ರೆವಿಸ್
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್(C), ಸ್ಯಾಮ್ ಬಿಲ್ಲಿಂಗ್ಸ್(WK), ನಿತೀಶ್ ರಾಣಾ, ಆಂಡ್ರೆ ರಸೆಲ್, ಸುನಿಲ್ ನರೈನ್, ಟಿಮ್ ಸೌಥಿ, ಶಿವಂ ಮಾವಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ, ಮೊಹಮ್ಮದ್ ನಬಿ, ಪ್ಯಾಟ್ ಕಮ್ಮಿನ್ಸ್, ಶೆಲ್ಡನ್ ಜಾಕ್ಸನ್, ಚಾಮಿಕಾ ಕರುಣಾರತ್ನೆ, ಬಾಬಾ ಇಂದ್ರಜಿತ್, ರಿಂಕು ಸಿಂಗ್, ಅನುಕುಲ್ ರಾಯ್, ಪ್ರಥಮ್ ಸಿಂಗ್, ಅಭಿಜೀತ್ ತೋಮರ್, ರಸಿಖ್ ಸಲಾಂ, ಅಮನ್ ಹಕೀಮ್ ಖಾನ್, ಅಶೋಕ್ ಶರ್ಮಾ, ರಮೇಶ್ ಕುಮಾರ್.
ಇದನ್ನೂ ಓದಿ : ಗುಜರಾತ್ ಟೈಟಾನ್ಸ್ ತಂಡದ ಈ ಆಟಗಾರ ವಿಶ್ವದ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗ ಎಂದ ರವಿಶಾಸ್ತ್ರಿ
ಇದನ್ನೂ ಓದಿ : IPL 2022 ಗಾಗಿ ದೆಹಲಿ ಕ್ಯಾಪಿಟಲ್ಸ್ ಸೇರಿಕೊಂಡ ಸನ್‌ರೈಸಸ್ ನಾಯಕ
…'𝘾𝙊𝙎 𝙊𝙐𝙍 𝙂𝘼𝙈𝙀 𝙏𝙊𝙊 𝙇𝙀𝙂𝙄𝙏! 👊#KnightsTV presented by @glancescreen | #KKRHaiTaiyaar #KKRvMI #IPL2022 pic.twitter.com/Z00uf4RKQR
— KolkataKnightRiders (@KKRiders) April 6, 2022
IPL 2022 : KKR VS MI 14th Match Indian Premier League 2022