Last match for Rahul & Rohit: ಲಕ್ನೋ ಪರ ರಾಹುಲ್’ಗೆ ಇಂದೇ ಲಾಸ್ಟ್ ಮ್ಯಾಚ್, ಮುಂಬೈ ಪರ ಕೊನೆಯ ಪಂದ್ಯವಾಡಲಿದ್ದಾರೆ ರೋಹಿತ್ !

KL Rahul & Rohit Sharma : ಐಪಿಎಲ್-2024 ಟೂರ್ನಿಯ (IPL 2024) ಇಂದಿನ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ತಂಡ ಕೆ.ಎಲ್ ರಾಹುಲ್ (KL Rahul) ನಾಯಕತ್ವದ ಲಕ್ನೋ ಸೂಪರ್ ಜಯಂಟ್ಸ್ (Lucknow Super Giants) ತಂಡವನ್ನು ಎದುರಿಸಲಿದೆ.

KL Rahul & Rohit Sharma : ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್-2024 ಟೂರ್ನಿಯ (IPL 2024) ಇಂದಿನ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ತಂಡ ಕೆ.ಎಲ್ ರಾಹುಲ್ (KL Rahul) ನಾಯಕತ್ವದ ಲಕ್ನೋ ಸೂಪರ್ ಜಯಂಟ್ಸ್ (Lucknow Super Giants) ತಂಡವನ್ನು ಎದುರಿಸಲಿದೆ.

KL Rahul Rohit Sharma KL Rahul last match for Lucknow Super Giants today Rohit will play his last match for Mumbai Indians
Image Credit to Original Source

ಕೆ.ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ (Rohit Sharma) ಕಾರಣಕ್ಕೆ ಈ ಪಂದ್ಯ ಭಾರೀ ಕುತೂಹಲ ಕೆರಳಿಸಿದೆ. ಲಕ್ನೋ ಸೂಪರ್ ಜಯಂಟ್ಸ್ ಪರ ರಾಹುಲ್ ಅವರಿಗೆ ಇದೇ ಕೊನೆಯ ಪಂದ್ಯವಾಗುವ ಸಾಧ್ಯತೆಯಿದೆ. ಅದೇ ರೀತಿ ರೋಹಿತ್ ಶರ್ಮಾ ಅವರಿಗೂ ಮುಂಬೈ ಇಂಡಿಯನ್ಸ್ ಪರ ಈ ಪಂದ್ಯವೇ ಅಂತಿಮ ಪಂದ್ಯ ಎನ್ನಲಾಗುತ್ತಿದೆೆ.

ಸನ್’ರೈಸರ್ಸ್ ಹೈದರಾಬಾದ್ ವಿರುದ್ಧದ ಸೋಲಿನ ನಂತರ ಲಕ್ನೋ ಸೂಪರ್ ಜಯಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ತಂಡದ ನಾಯಕ ಕೆ.ಎಲ್ ರಾಹುಲ್ ಅವರನ್ನು ನಿಂದಿಸಿದ್ದ ದೃಶ್ಯಗಳು ವೈರಲ್ ಆಗಿ, ಕ್ರಿಕೆಟ್ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿತ್ತು.

ಆ ಘಟನೆಯ ನಂತರ ರಾಹುಲ್ ನೊಂದಿದ್ದು, ಮುಂದಿನ ವರ್ಷದಿಂದ ಲಕ್ನೋ ಪರ ಆಡದಿರುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಆ ಘಟನೆಯ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಳ್ಳುವಂತೆ ಕೆ.ಎಲ್ ರಾಹುಲ್ ಅವರಿಗೆ ಆರ್’ಸಿಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದರು.

ಇದನ್ನೂ ಓದಿ : T20 World Cup 2024: ಟಿ20 ವಿಶ್ವಕಪ್’ನಲ್ಲಿ ಸ್ಕಾಟ್ಲೆಂಡ್ ತಂಡಕ್ಕೆ “ನಂದಿನಿ” ಪ್ರಾಯೋಜಕತ್ವ, ಜರ್ಸಿ ಬಿಡುಗಡೆಗೊಳಿಸಿದ ಸ್ಕಾಟ್ಲೆಂಡ್ ಕ್ರಿಕೆಟ್

ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ತಂಡದಲ್ಲೂ ಎಲ್ಲವೂ ಸರಿಯಿಲ್ಲ. ಐಪಿಎಲ್ ಟೂರ್ನಿ ಆರಂಭಕ್ಕೂ ಮೊದಲೇ ನಾಯಕ ಪಟ್ಟದಿಂದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ಪಟ್ಟಾಭಿಷೇಕ ಮಾಡಲಾಗಿತ್ತು. ಇದು ರೋಹಿತ್ ಶರ್ಮಾ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ತಮ್ಮ ಅಸಮಾಧಾನವನ್ನು ರೋಹಿತ್ ಬಹಿರಂಗವಾಗಿ ವ್ಯಕ್ತಪಡಿಸದೇ ಇದ್ದರೂ, ಒಳಗೊಳಗೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ನಿರ್ಧಾರದ ವಿರುದ್ಧ ಕುದಿಯುತ್ತಿದ್ದಾರೆ.

KL Rahul Rohit Sharma KL Rahul last match for Lucknow Super Giants today Rohit will play his last match for Mumbai Indians
Image Credit to Original Source

ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ವೇಳೆ ಮುಂಬೈನವರೇ ಆದ ಅಭಿಷೇಕ್ ನಾಯರ್ ಜೊತೆಗಿನ ಮಾತುಕತೆಯ ವೇಳೆ ರೋಹಿತ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಪರ ಆಡುವುದು ಅನುಮಾನವಾಗಿದೆ.

ಇದನ್ನೂ ಓದಿ : Dhoni Meets CISF Soldiers: RCB ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಸೈನಿಕರನ್ನು ಭೇಟಿ ಮಾಡಿದ ಧೋನಿ!

ಈ ಬಾರಿಯ ಐಪಿಎಲ್’ನಲ್ಲಿ ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಆಡಿರುವ 13 ಪಂದ್ಯಗಳಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಗೆದ್ದು 9ರಲ್ಲಿ ಸೋತು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಮತ್ತೊಂದೆದೆ ಲಕ್ನೋ ಸೂಪರ್ ಜಯಂಟ್ಸ್ ತಂಡ 13 ಪಂದ್ಯಗಳಲ್ಲಿ 6 ಗೆಲುವು, 7 ಸೋಲುಗಳೊಂದಿಗೆ 12 ಪಾಯಿಂಟ್ಸ್ ಗಳಿಸಿದ್ದು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಹೀಗಾಗಿ ಎರಡೂ ತಂಡಗಳು ಪ್ಲೇ ಆಫ್ ರೇಸ್’ನಿಂದ ಹೊರ ಬಿದ್ದಿರುವ ಕಾರಣ, ಇಂದಿನ ಪಂದ್ಯ ಕೇವಲ ಔಪಚಾರಿಕವಾಗಿದೆ.

ಇದನ್ನೂ ಓದಿ : Hardik Pandya: ರೋಹಿತ್, ಅಗರ್ಕರ್ ಬೇಡ ಎಂದರೂ ಹಾರ್ದಿಕ್ ಪಾಂಡ್ಯ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದು ಹೇಗೆ ? ಇಲ್ಲಿದೆ ಅಸಲಿ ಕಾರಣ !

KL Rahul & Rohit Sharma : KL Rahul last match for Lucknow Super Giants today Rohit will play his last match for Mumbai Indians

Comments are closed.