ಬೆಂಗಳೂರು: ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷಿ ಅನ್ನೋ ಮಾತಿದೆ. ಕರ್ನಾಟಕದ ಸ್ಟಾರ್ ಕ್ರಿಕೆಟಿಗ ಕೆ.ಎಲ್ ರಾಹುಲ್ ವಿಚಾರದಲ್ಲಿ ಈ ಮಾಕು ನೂರಕ್ಕೆ ನೂರು ಸತ್ಯ. ಗಾಯದಿಂದ ಚೇತರಿಸಿಕೊಂಡು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಸಜ್ಜಾಗುತ್ತಿದ್ದ ರಾಹುಲ್ ಕೋವಿಡ್ ಪಾಸಿಟಿವ್’ಗೆ (KL Rahul tested Covid-19 positive) ಒಳಗಾಗಿದ್ದಾರೆ. ಹೀಗಾಗಿ ಜುಲೈ 29 ರಿಂದ ಆರಂಭವಾಗಲಿರುವ ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ರಾಹುಲ್ ಆಡುವುದು ಅನುಮಾನ ಎನ್ನಲಾಗ್ತಿದೆ. ಸ್ಪೋರ್ಟ್ಸ್ ಹರ್ನಿಯ್ ಸಮಸ್ಯೆಗೆ ಜರ್ಮನಿಯಲ್ಲಿ ಇತ್ತೀಚೆಗೆ ಶಸ್ತ್ರಚಿಕಿತ್ಸೆಗೊಳಲಾಗಿದ್ದ ರಾಹುಲ್, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಟ್ರೈನಿಂಗ್ ಶುರು ಮಾಡಿದ್ದರು. ಇನ್ನೇನು ಎರಡು ದಿನಗಳಲ್ಲಿ ರಾಹುಲ್ ಅವರಿಗೆ ಫಿಟ್ನೆಸ್ ಟೆಸ್ಟ್ ಕೂಡ ನಡೆಯಬೇಕಿತ್ತು. ಆದರೆ ಅದಕ್ಕೂ ಮೊದಲೇ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ.
ಇಂಗ್ಲೆಂಡ್”ನಲ್ಲಿ ಏಕದಿನ ಹಾಗೂ ಟಿ20 ಸರಣಿಗಳನ್ನು ಮುಡಿಗೇರಿಸಿಕೊಂಡಿರುವ ಟೀಮ್ ಇಂಡಿಯಾ, ವೆಸ್ಟ್ ಇಂಡೀಸ್’ನಲ್ಲಿ 3 ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಏಕದಿನ ಸರಣಿ ಶುಕ್ರವಾರ (ಜುಲೈ 22) ಆರಂಭವಾಗಲಿದ್ದು, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಹಿರಿಯ ಎಡಗೈ ಓಪನರ್ ಶಿಖರ್ ಧವನ್ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಜುಲೈ 29ರಂದು ನಡೆಯಲಿದ್ದು, ರೋಹಿತ್ ಶರ್ಮಾ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ. ಏಕದಿನ ಸರಣಿಗೆ ರೋಹಿತ್ ಜೊತೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೂ ವಿಶ್ರಾಂತಿ ನೀಡಲಾಗಿದ್ದು, ಟಿ20 ಸರಣಿಗೆ ಪಾಂಡ್ಯ ವಾಪಸ್ಸಾಗಲಿದ್ದಾರೆ. ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ವೇಗಿ ಜಸ್ಪ್ರೀತ್ ಬುಮ್ರಾಗೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ವಿಶ್ರಾಂತಿ ನೀಡಲಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ:
ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜ (ಉಪನಾಯಕ), ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಆವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಆರ್.ಅಶ್ವಿನ್, ಕುಲ್ದೀಪ್ ಯಾದವ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಸೂಚನೆ: ಕೆ.ಎಲ್ ರಾಹುಲ್ ಮತ್ತು ಕುಲ್ದೀಪ್ ಯಾದವ್ ಫಿಟ್ ಆದರೆ ಮಾತ್ರ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಲಭ್ಯವಾಗಲಿದ್ದಾರೆ.
ಭಾರತ Vs ವೆಸ್ಟ್ ಇಂಡೀಸ್: ಏಕದಿನ ಸರಣಿಯ ವೇಳಾಪಟ್ಟಿ
ಜುಲೈ 22: ಮೊದಲ ಏಕದಿನ ಪಂದ್ಯ (ಟ್ರಿನಿಡಾಡ್)
ಜುಲೈ 24: ಎರಡನೇ ಏಕದಿನ ಪಂದ್ಯ (ಟ್ರಿನಿಡಾಡ್)
ಜುಲೈ 27: ಮೂರನೇ ಏಕದಿನ ಪಂದ್ಯ (ಟ್ರಿನಿಡಾಡ್)
ಭಾರತ Vs ವೆಸ್ಟ್ ಇಂಡೀಸ್: ಟಿ20 ಸರಣಿಯ ವೇಳಾಪಟ್ಟಿ
ಜುಲೈ 29: ಮೊದಲ ಟಿ20 ಪಂದ್ಯ (ಟ್ರಿನಿಡಾಡ್)
ಆಗಸ್ಟ್ 01: ಎರಡನೇ ಟಿ20 ಪಂದ್ಯ (ಸೇಂಟ್ ಕಿಟ್ಸ್)
ಆಗಸ್ಟ್ 02: ಮೂರನೇ ಟಿ20 ಪಂದ್ಯ (ಸೇಂಟ್ ಕಿಟ್ಸ್)
ಆಗಸ್ಟ್ 06: ನಾಲ್ಕನೇ ಟಿ20 ಪಂದ್ಯ (ಫ್ಲೋರಿಡಾ)
ಆಗಸ್ಟ್ 07: ಐದನೇ ಟಿ20 ಪಂದ್ಯ (ಫ್ಲೋರಿಡಾ)
ಇದನ್ನೂ ಓದಿ : IND vs WI ODI Series: ವಿಂಡೀಸ್ ವಿರುದ್ಧದ ಏಕದಿನ ಸರಣಿ : ಟೀಮ್ ಇಂಡಿಯಾದ ಈ ಪಂಚಪಾಂಡವರ ಪಾಲಿಗೆ ಇಂಪಾರ್ಟೆಂಟ್
KL Rahul tested Covid-19 positive Is this bad luck ?