KL Rahul – Venkatesh Prasad : ಅವಮಾನ ಮಾಡಿದವನಿಂದಲೇ ರಾಹುಲ್’ಗೆ ಸನ್ಮಾನ, ಟೀಕಾಕಾರರಿಗೆ ಆಟದಿಂದಲೇ ಉತ್ತರಿಸಿದ ಕನ್ನಡಿಗ

ಮುಂಬೈ: ಕನ್ನಡಿಗ ಕೆ.ಎಲ್ ರಾಹುಲ್ ಟೀಮ್ ಇಂಡಿಯಾದಲ್ಲಿ ಫಾರ್ಮ್ ಕಳೆದುಕೊಂಡು ಒದ್ದಾಡುತ್ತಿದ್ದಾಗ ಟೀಕೆ ಮಾಡಿದವರು ಒಬ್ಬಿಬ್ಬರಲ್ಲ. ಅದ್ರಲ್ಲೂ ಕರ್ನಾಟಕದವರೇ ಆದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ (KL Rahul – Venkatesh Prasad ) ಅವರಂತೂ ರಾಹುಲ್ ಬಗ್ಗೆ ಹಿಗ್ಗಾಮುಗ್ಗ ಟೀಕೆ ಮಾಡಿದ್ದರು. ಆದರೆ ಟೀಕೆ ಮಾಡಿದವರಿಗೆ ರಾಹುಲ್ ಆಟದಿಂದಲೇ ಉತ್ತರಿಸಿದ್ದಾರೆ. ರಾಹುಲ್’ಗೆ ಅವಮಾನ ಮಾಡಿದವರೇ ಈಗ ಸನ್ಮಾನ ಮಾಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರಾಹುಲ್ ರನ್ ಗಳಿಸಲು ಪರದಾಡುತ್ತಿದ್ದಾಗ ಟ್ವೀಟ್ ಮೂಲಕ ಟೀಕೆ ಮಾಡಿದ್ದ ವೆಂಕಟೇಶ್ ಪ್ರಸಾದ್, ಈಗ ಆಸೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರಾಹುಲ್ ಪಂದ್ಯ ಗೆಲ್ಲಿಸಿದ್ದೇ ತಡ, ಪ್ಲೇಟ್ ಬದಲಿಸಿದ್ದಾರೆ. ರಾಹುಲ್ ಆಟಕ್ಕೆ ಟ್ವಿಟರ್’ನಲ್ಲಿಅಭಿನಂದನೆ ಸಲ್ಲಿಸಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರದ ನಡೆದ ಆಸ್ಟ್ರೇಲಿಯಾ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ರಾಹುಲ್ ಆಕರ್ಷಕ ಅಜೇಯ 75 ರನ್ ಗಳಿಸಿ ಭಾರತವನ್ನು ಗೆಲ್ಲಿಸಿದ್ದರು. ಗೆಲುವಿಗೆ ಆಸ್ಟ್ರೇಲಿಯಾ ಒಡ್ಡಿದ 189 ರನ್’ಗಳ ಗುರಿ ಬೆನ್ನಟ್ಟಿದ್ದ ಟೀಮ್ ಇಂಡಿಯಾ, 83 ರನ್’ಗಳಿಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ 5ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ರಾಹುಲ್ ತಂಡಕ್ಕೆ ಆಸರೆಯಾಗಿ ನಿಂತಿದ್ದರು. ಮುರಿಯದ 6ನೇ ವಿಕೆಟ್’ಗೆ ಆಲ್ರೌಂಡರ್ ರವೀಂದ್ರ ಜಡೇಜ ಜೊತೆ 123 ಎಸೆತಗಳಲ್ಲಿ 108 ರನ್’ಗಳ ಜೊತೆಯಾಟವಾಡಿದ ರಾಹುಲ್ ಭಾರತಕ್ಕೆ 5 ವಿಕೆಟ್’ಗೆ ಅಮೋಘ ಗೆಲುವು ತಂದುಕೊಟ್ಟಿದ್ದರು.

ಇದನ್ನೂ ಓದಿ : Royal Challengers Bangalore : ವಿಲ್ ಜೇಕ್ ಬದಲು ಆರ್’ಸಿಬಿ ಟೀಮ್ ಸೇರಲಿದ್ದಾನೆ ಕಿವೀಸ್’ನ ಸ್ಫೋಟಕ ಆಲ್ರೌಂಡರ್

ಇದನ್ನೂ ಓದಿ : Exclusive: RCB practice match: ಮಾರ್ಚ್ 26ಕ್ಕೆ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಪ್ರಾಕ್ಟೀಸ್ ಮ್ಯಾಚ್, ಅಭಿಮಾನಿಗಳಿಗೆ ಫ್ರೀ ಎಂಟ್ರಿ

91 ಎಸೆತಗಳನ್ನೆದುರಿಸಿದ್ದ ರಾಹುಲ್ 7 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 75 ರನ್ ಗಳಿಸಿದ್ರೆ, ಜವಾಬ್ದಾರಿಯುತ ಆಟವಾಡಿದ್ದ ರವೀಂದ್ರ ಜಡೇಜ 69 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ ಅಜೇಯ 45 ರನ್ ಬಾರಿಸಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಪ್ರಥಮ ಏಕದಿನ ಪಂದ್ಯವನ್ನು 5 ವಿಕೆಟ್’ಗಳಿಂದ ಗೆದ್ದುಕೊಂಡಿರುವ ಟೀಮ್ ಇಂಡಿಯಾ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು, ಸರಣಿಯ 2ನೇ ಪಂದ್ಯ ನಾಳೆ ವಿಶಾಖಪಟ್ಟಣದಲ್ಲಿ ನಡೆಯಲಿದೆ.

KL Rahul – Venkatesh Prasad : Rahul was honored by the one who insulted him, Kannadiga responded to the critics with a game.

Comments are closed.