ಸೋಮವಾರ, ಏಪ್ರಿಲ್ 28, 2025
HomeSportsCricketKSCA Election 2022 : ನವೆಂಬರ್ 20ಕ್ಕೆ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆ, ನಾಮಪತ್ರ ಸಲ್ಲಿಕೆ...

KSCA Election 2022 : ನವೆಂಬರ್ 20ಕ್ಕೆ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆ, ನಾಮಪತ್ರ ಸಲ್ಲಿಕೆ ಬುಧವಾರ ಶುರು

- Advertisement -

ಬೆಂಗಳೂರು: KSCA Election 2022: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (Karnataka State Cricket Association – KSCA) ನೂತನ ಪದಾಧಿಕಾರಿಗಳ ಆಯ್ಕೆಗೆ ನವೆಂಬರ್ 20ರಂದು ಚುನಾವಣೆ ನಡೆಯಲಿದೆ. ಹಾಲಿ ಆಡಳಿತ ಮಂಡಳಿಯ ಅಧಿಕಾರಾವಧಿ ಈಗಾಗಲೇ ಅಂತ್ಯಗೊಂಡಿದ್ದು, ಹೊಸ ಆಡಳಿತ ಮಂಡಳಿಯ ಆಯ್ಕೆಗೆ ಇದೇ ತಿಂಗಳು ಚುನಾವಣೆ ನಡೆಯಲಿದೆ. ಬುಧವಾರ (ನವೆಂಬರ್ 2) ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮುಂದಿನ ಸೋಮವಾರ (ನವೆಂಬರ್ 7) ನಾಮಪತ್ರ ಪರಿಶೀಲನೆ ನಡೆಯಲಿದೆ. ನವೆಂಬರ್ 9ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.

ರಾಜ್ಯ ಕ್ರಿಕೆಟ್ ಸಂಸ್ಥೆಯ ವಾರ್ಷಿಕ ಮಹಾಸಭೆ ನವೆಂಬರ್ 20ರಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅದೇ ದಿನ ಬೆಳಗ್ಗೆ 11 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಲಿದೆ. ಸಂಜೆ 7 ಗಂಟೆಯವರೆಗೆ ಮತದಾನ ನಡೆಯಲಿದ್ದು, ಅದೇ ದಿನ ರಾತ್ರಿ ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದ ರೋಜರ್ ಬಿನ್ನಿ, ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು KSCA ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಹಾಲಿ ಆಡಳಿತ ಮಂಡಳಿ ಸದಸ್ಯರ ಪೈಕಿ ಕಾರ್ಯದರ್ಶಿ ಸಂತೋಷ್ ಮೆನನ್ ಮತ್ತು ಖಜಾಂಚಿ ವಿನಯ್ ಮೃತ್ಯುಂಜಯ ಮತ್ತೊಂದು ಅವಧಿಗೆ ಸ್ಪರ್ಧಿಸುಂತಿಲ್ಲ. ಈ ಇಬ್ಬರು ಈಗಾಗಲೇ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಸತತ ಆರು ವರ್ಷಗಳನ್ನು ಪೂರ್ತಿಗೊಳಿಸಿರುವ ಕಾರಣ ಕೂಲಿಂಗ್ ಆಫ್ ನಿಯಮದ ಪ್ರಕಾರ ಈ ಬಾರಿ ಸ್ಪರ್ಧಿಸುವಂತಿಲ್ಲ.

ರಾಜ್ಯ ಕ್ರಿಕೆಟ್ ಸಂಸ್ಥೆಯ ಚುನಾವಣೆಯಲ್ಲಿ ಯಾರು ಸ್ಪರ್ಧಿಸಲಿದ್ದಾರೆ ಎಂಬುದು ಇನ್ನು 3-4 ದಿನಗಳಲ್ಲಿ ಖಚಿತವಾಗಲಿದೆ. 2010ರಿಂದ 2013ರವರೆಗೆ KSCAನಲ್ಲಿ ಅಧಿಕಾರದಲ್ಲಿದ್ದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಮತ್ತು ಮೈಸೂರು ಎಕ್ಸ್’ಪ್ರೆಸ್ ಜಾವಗಲ್ ಶ್ರೀನಾಥ್ ಅವರ ಬಣ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲಿದೆಯೇ ಎಂಬುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. 2013ರ ಚುನಾವಣೆಯಲ್ಲಿ ಕುಂಬ್ಳೆ ಬಣ ಎಲ್ಲಾ ಸ್ಥಾನಗಳಲ್ಲೂ ಸೋತು ಮುಖಭಂಗಕ್ಕೊಳಗಾಗಿತ್ತು.

KSCA Election November 20 state cricket body election nomination papers start on Wednesday

KSCA Election 2022 : ಕೆಎಸ್‌ಸಿಎ ಚುನಾವಣೆ 2022

ನವೆಂಬರ್ 02: ನಾಮಪತ್ರ ಸಲ್ಲಿಕೆ ಆರಂಭ
ನವೆಂಬರ್ 07: ನಾಮಪತ್ರ ಪರಿಶೀಲನೆ
ನವೆಂಬರ್ 07: ಮಾನ್ಯ ನಾಮಪತ್ರಗಳ ಘೋಷಣೆ
ನವೆಂಬರ್ 09: ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ
ನವೆಂಬರ್ 09: ಅರ್ಹ ಅಭ್ಯರ್ಥಿಗಳ ಘೋಷಣೆ
ನವೆಂಬರ್ 20: ಚುನಾವಣೆ, ಫಲಿತಾಂಶ

ಇದನ್ನೂ ಓದಿ : India Vs Bangladesh: ಭಾರತದ ಗೆಲುವಿಗೆ ಕನ್ನಡಿಗನ ಕಿರು ಕಾಣಿಕೆ, ಬಾಂಗ್ಲಾ ವಿರುದ್ಧದ ಗೆಲುವಿನ ಹಿಂದೆ ‘ಬ್ರಷ್’ ಮಹಿಮೆ

ಇದನ್ನೂ ಓದಿ : Raghavendra Divgi life story : ಭಾರತ ವಿಶ್ವಕಪ್ ತಂಡದಲ್ಲಿರುವ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ಅವರ ಮನಮಿಡಿಯುವ ಕಥೆ

KSCA Election November 20 state cricket body election nomination papers start on Wednesday

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular