ಸೋಮವಾರ, ಏಪ್ರಿಲ್ 28, 2025
HomeSportsCricketMaharaja Trophy T20 : ಕರುನಾಡ ಕ್ರಿಕೆಟ್ ಹಬ್ಬ ಮೈಸೂರಿನಲ್ಲಿ ನಾಳೆ ಶುರು: ಹುಬ್ಬಳ್ಳಿVs ಮಂಗಳೂರು...

Maharaja Trophy T20 : ಕರುನಾಡ ಕ್ರಿಕೆಟ್ ಹಬ್ಬ ಮೈಸೂರಿನಲ್ಲಿ ನಾಳೆ ಶುರು: ಹುಬ್ಬಳ್ಳಿVs ಮಂಗಳೂರು ಮಧ್ಯೆ ಆರಂಭಿಕ ಪಂದ್ಯ

- Advertisement -

ಮೈಸೂರು: (Maharaja Trophy T20 ) ಕರುನಾಡ ಕ್ರಿಕೆಟ್ ಹಬ್ಬ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಮೂಲಕ ಮತ್ತೆ ಬಂದಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾನುವಾರ ಆರಂಭ ವಾಗಲಿದೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಭಾನುವಾರ ಮಧ್ಯಾಹ್ನ 3ಕ್ಕೆ ಆರಂಭವಾಗಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮಂಗಳೂರು ಯುನೈಟೆಡ್ ಹಾಗೂ ಹುಬ್ಬಳ್ಳಿ ಟೈಗರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮಂಗಳೂರು ಯುನೈಟೆಡ್ ತಂಡವನ್ನು ಆರ್.ಸಮರ್ಥ್ ಮುನ್ನಡೆಸಲಿದ್ರೆ, ವೇಗಿ ಅಭಿಮನ್ಯು ಮಿಥುನ್ ಹುಬ್ಬಳ್ಳಿ ಟೈಗರ್ಸ್ ತಂಡದ ನಾಯಕತ್ವ ವಹಿಸಲಿದ್ದಾರೆ.

ಭಾನುವಾರ ಸಂಜೆ 7ಕ್ಕೆ ಆರಂಭವಾಗಲಿರುವ ಟೂರ್ನಿಯ 2ನೇ ಪಂದ್ಯದಲ್ಲಿ ಆತಿಥೇಯ ಮೈಸೂರು ವಾರಿಯರ್ಸ್ ತಂಡ ಶಿವಮೊಗ್ಗ ಸ್ಟ್ರೈಕರ್ಸ್ ತಂಡವನ್ನು ಎದುರಿಸಲಿದೆ. ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್, ಮೈಸೂರು ವಾರಿಯರ್ಸ್, ಗುಲ್ಬರ್ಗ ಮಿಸ್ಟಿಕ್ಸ್, ಶಿವಮೊಗ್ಗ ಸ್ಟ್ರೈಕರ್ಸ್, ಮಂಗಳೂರು ಯುನೈಟೆಡ್, ಹುಬ್ಬಳ್ಳಿ ಟೈಗರ್ಸ್ ಸೇರಿ ಆರು ತಂಡಗಳು ಆಡಲಿವೆ. ಲೀಗ್ ಹಂತದಲ್ಲಿ 30 ಪಂದ್ಯಗಳು, ಎಲಿಮಿನೇಟರ್, ಎರಡು ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯ ಸೇರಿದಂತೆ ಒಟ್ಟು 34 ಪಂದ್ಯಗಳು ನಡೆಯಲಿವೆ.

ಈ ಹಿಂದೆ ಕರ್ನಾಟಕ ಪ್ರೀಮಿಯರ್ ಲೀಗ್ – ಕೆಪಿಎಲ್ (Karnataka Premier League – KPL) ಹೆಸರಿನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಆರೋಪ ಕೇಳಿ ಬಂದ ಕಾರಣ ಕಳೆದ ಮೂರು ವರ್ಷಗಿಂದ ಟೂರ್ನಿ ನಡೆದಿಲ್ಲ. ಕೆಪಿಎಲ್ ಫಿಕ್ಸಿಂಗ್ ಆರೋಪದಲ್ಲಿ ರಾಜ್ಯ ತಂಡದ ಮಾಜಿ ನಾಯಕ ಸಿ.ಎಂ ಗೌತಮ್, ಮಾಜಿ ರಣಜಿ ಆಟಗಾರ ಅಬ್ರಾರ್ ಖಾಜಿ, ಮಾಜಿ ಕ್ರಿಕೆಟಿಗ ಹಾಗೂ ಹಾಲಿ KSCA ಆಡಳಿತ ಮಂಡಳಿ ಸದಸ್ಯ ಸುಧೀಂದ್ರ ಶಿಂಧೆ ಅವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಅರೆಸ್ಟ್ ಕೂಡ ಮಾಡಿದ್ದರು. ಫಿಕ್ಸಿಂಗ್ ಕಾರಣದಿಂದ ಸ್ಥಗಿತಗೊಂಡಿದ್ದ ಕೆಪಿಎಲ್ ಟೂರ್ನಿಯನ್ನು ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಹೆಸರಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆ (Karnataka State Cricket Association) ಮತ್ತೆ ಆರಂಭಿಸುತ್ತಿದೆ.

ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಆಡಲಿರುವ ತಂಡಗಳ ವಿವರ:

ಹುಬ್ಬಳ್ಳಿ ಟೈಗರ್ಸ್:
ಅಭಿಮನ್ಯು ಮಿಥುನ್ (ನಾಯಕ), ಲವ್ನೀತ್ ಸಿಸೋಡಿಯಾ, ವಿ.ಕೌಶಿಕ್, ಲಿಯಾನ್ ಖಾನ್, ನವೀನ್ ಎಂ.ಜಿ., ಆನಂದ್ ದೊಡ್ಡಮಣಿ, ಶಿವಕುಮಾರ್ ಬಿ.ಯು., ತುಷಾರ್ ಸಿಂಗ್, ಅಕ್ಷಣ್ ರಾವ್, ಜಹೂರ್ ಫರೂಕಿ, ರೋಹನ್ ನವೀನ್, ಸೌರವ್ ಶ್ರೀವಾತ್ಸವ್, ಸಾಗರ್ ಸೋಳಂಕಿ, ಗೌತಮ್ ಸಾಗರ್, ರೋಹನ್ ಎ., ರಾಹುಲ್ ಸಿಂಗ್ ರಾವತ್, ಶಿಶಿರ್ ಭವಾನೆ, ಶರಣ್ ಗೌಡ.
ಕೋಚ್: ದೀಪಕ್ ಚೌಗುಲೆ.
ಅಸಿಸ್ಟೆಂಟ್ ಕೋಚ್: ರಾಜೂ ಭಟ್ಕಳ್
ಸೆಲೆಕ್ಟರ್: ಆನಂದ್ ಕಟ್ಟಿ

ಮಂಗಳೂರು ಯುನೈಟೆಡ್:
ಆರ್.ಸಮರ್ಥ್ (ನಾಯಕ), ಅಭಿನವ್ ಮನೋಹರ್, ವೈಶಾಖ್ ವಿಜಯ್ ಕುಮಾರ್, ಅಮಿತ್ ವರ್ಮಾ, ಎಂ.ವೆಂಕಟೇಶ್, ಅನೀಶ್ವರ್ ಗೌತಮ್, ಸುಜಯ್ ಸತೇರಿ, ರೋಹಿತ್ ಕುಮಾರ್ ಎ.ಸಿ., ಮ್ಯಾಕ್ನೀಲ್ ನೊರೊನ್ಹಾ, ಎಚ್.ಎಸ್ ಶರತ್, ಶಶಿಕುಮಾರ್ ಕೆ., ನಿಕಿನ್ ಜೋಸ್, ರಘುವೀರ್, ಅಮೋಘ್ ಎಸ್., ಚಿನ್ಮಯ್ ಎನ್.ಎ., ಆದಿತ್ಯ ಸೋಮಣ್ಣ, ಯಶ್ವರ್ಧನ್, ಧೀರಜ್ ಗೌಡ.
ಕೋಚ್: ಸ್ಟುವರ್ಟ್ ಬಿನ್ನಿ.
ಅಸಿಸ್ಟೆಂಟ್ ಕೋಚ್: ಸಿ.ರಾಘವೇಂದ್ರ
ಸೆಲೆಕ್ಟರ್: ಎಂ.ವಿ ಪ್ರಶಾಂತ್

ಮೈಸೂರು ವಾರಿಯರ್ಸ್:
ಕರುಣ್ ನಾಯರ್ (ಕರುಣ್ ನಾಯರ್), ಶ್ರೇಯಸ್ ಗೋಪಾಲ್, ಶುಭಾಂಗ್ ಹೆಗ್ಡೆ, ಪವನ್ ದೇಶಪಾಂಡೆ, ವಿದ್ಯಾಧರ್ ಪಾಟೀಲ್, ನಿಹಾಲ್ ಉಳ್ಳಾಲ್, ಪ್ರತೀಕ್ ಜೈನ್, ಲೋಚನ್ ಅಪ್ಪಣ್ಣ, ಚಿರಂಜೀವಿ ಜಿ.ಎಸ್., ನಾಗಾ ಭರತ್, ಭರತ್ ಧುರಿ, ಶಿವರಾಜ್, ಮನೀಶ್ ರೆಡ್ಡಿ, ವರುಣ್ ರಾವ್, ರಾಹುಲ್ ಪ್ರಸನ್ನ, ನಿತಿನ್ ಬಿಲ್ಲೆ, ಆದಿತ್ಯ ಗೋಯೆಲ್, ಅಭಿಷೇಕ್ ಅಹ್ಲಾವತ್.
ಕೋಚ್: ಪಿ.ವಿ ಶಶಿಕಾಂತ್.
ಅಸಿಸ್ಟೆಂಟ್ ಕೋಚ್: ಎಸ್.ಎಲ್ ಅಕ್ಷಯ್
ಸೆಲೆಕ್ಟರ್: ಕೆ.ಎಲ್ ಅಶ್ವತ್ಥ್

ಶಿವಮೊಗ್ಗ ಸ್ಟ್ರೈಕರ್ಸ್:
ಕೆ.ಗೌತಮ್ (ನಾಯಕ), ಕೆ.ಸಿ ಕಾರಿಯಪ್ಪ, ರೋಹನ್ ಕದಂ, ಕೆ.ವಿ ಸಿದ್ಧಾರ್ಥ್, ದರ್ಶನ್ ಎಂ.ಬಿ., ಸ್ಟಾಲಿನ್ ಹೂವರ್, ಅವಿನಾಶ್ ಡಿ., ಸ್ಮರಣ್ ಆರ್., ಬಿ.ಆರ್ ಶರತ್, ರಾಜ್ವೀರ್ ವಾಧ್ವಾ, ರಾಜೇಂದ್ರ ಡಂಗನವರ್, ಉತ್ತಮ್ ಅಯ್ಯಪ್ಪ, ಚೈತನ್ಯ ಎಸ್., ಶ್ರೇಯಸ್ ಬಿ.ಎಂ, ಕೆ.ಎಸ್ ದೇವಯ್ಯ, ವಿನಯ್ ಸಾಗರ್, ಶ್ರೇಯಸ್ ಎಸ್.ಪಿ., ಪುನೀತ್ ಎಸ್.
ಕೋಚ್: ನಿಖಿಲ್ ಹಲ್ದೀಪುರ್.
ಅಸಿಸ್ಟೆಂಟ್ ಕೋಚ್: ಆದಿತ್ಯ ಸಾಗರ್
ಸೆಲೆಕ್ಟರ್: ಎ.ಆರ್ ಮಹೇಶ್

ಬೆಂಗಳೂರು ಬ್ಲಾಸ್ಟರ್ಸ್:
ಮಯಾಂಕ್ ಅಗರ್ವಾಲ್ (ನಾಯಕ), ಜೆ.ಸುಚಿತ್, ಅನಿರುದ್ಧ ಜೋಶಿ, ಟಿ.ಪ್ರದೀಪ್, ಕ್ರಾಂತಿ ಕುಮಾರ್, ಚೇತನ್ ಎಲ್.ಆರ್., ಅನೀಶ್ ಕೆ.ವಿ., ಕುಮಾರ್ ಎಲ್.ಆರ್., ರಕ್ಷಿತ್ ಶಿವಕುಮಾರ್, ರಿಷಿ ಬೋಪಣ್ಣ, ಸಂತೋಖ್ ಸಿಂಗ್, ಸೂರಜ್ ಅಹುಜಾ, ಲೋಚನ್ ಗೌಡ, ರೋನಿತ್ ಮೋರೆ, ಸೀನ್ ಇಶಾನ್ ಜೋಸೆಫ್, ಕುಷ್ ಮರಾಠೆ, ತನಯ್ ವಾಲ್ಮಿಕ್.
ಕೋಚ್: ಟಿ.ನಾಸಿರುದ್ದೀನ್.
ಅಸಿಸ್ಟೆಂಟ್ ಕೋಚ್: ಕೆ.ಬಿ ಪವನ್
ಸೆಲೆಕ್ಟರ್: ರಘೋತ್ತಮ್ ನಾವ್ಳಿ

ಗುಲ್ಬರ್ಗ ಮಿಸ್ಟಿಕ್ಸ್:
ಮನೀಶ್ ಪಾಂಡೆ (ನಾಯಕ), ದೇವದತ್ ಪಡಿಕ್ಕಲ್, ಸಿ.ಎ ಕಾರ್ತಿಕ್, ಮನೋಜ್ ಭಾಂಡಗೆ, ಕೃತಿಕ್ ಕೃಷ್ಣ, ಅಭಿಲಾಷ್ ಶೆಟ್ಟಿ, ಕುಶಾಲ್ ವಾಧ್ವಾನಿ, ಪ್ರಣವ್ ಭಾಟಿಯಾ, ಕೆ.ಎಲ್ ಶ್ರೀಜಿತ್, ರಿತೇಶ್ ಭಟ್ಕಳ್, ಮೋಹಿತ್ ಬಿ.ಎ., ರೋಹನ್ ಪಾಟೀಲ್, ಧನುಷ್ ಗೌಡ, ಮೊಹಮ್ಮದ್ ಅಕಿಬ್ ಜಾವೆದ್, ವಿದ್ವತ್ ಕಾವೇರಪ್ಪ, ಯಶ್ವಂತ್ ಆಚಾರ್ಯ, ಆರೋನ್ ಕ್ರಿಸ್ಟೀ, ಶ್ರೀಶ ಆಚಾರ್.
ಕೋಚ್: ಮನ್ಸೂರ್ ಅಲಿ ಖಾನ್.
ಅಸಿಸ್ಟೆಂಟ್ ಕೋಚ್: ರಾಜಶೇಖರ್ ಶಾನ್’ಬಾಲ್
ಸೆಲೆಕ್ಟರ್: ಸಂತೋಷ್ ವಿ.

ಪಂದ್ಯಗಳ ಆರಂಭ :ಮಧ್ಯಾಹ್ನ 3ಕ್ಕೆ ಹಾಗೂ ಸಂಜೆ 7ಕ್ಕೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಮತ್ತು ಫ್ಯಾನ್ ಕೋಡ್

ಇದನ್ನೂ ಓದಿ : Asia Cup 2022 India Playing XI : ಈ ಪ್ಲೇಯಿಂಗ್ XI ಇದ್ದರೆ ಪಾಕಿಸ್ತಾನ ವಿರುದ್ಧ ಗೆಲುವು ನಮ್ಮದೇ

ಇದನ್ನೂ ಓದಿ : Rahul Dravid Son : ದ್ರಾವಿಡ್ ಹೆಮ್ಮೆಯಿಂದ ಆಡಿದ್ದು BUCC ಕ್ಲಬ್‌ಗೆ ; ಮಗನಿಗೇಕೆ ವಲ್ಟರ್ಸ್ ಕ್ಲಬ್ ? ಪುತ್ರನ ಭವಿಷ್ಯಕ್ಕಾಗಿ ಈ ಅಚ್ಚರಿಯ ನಿರ್ಧಾರ

Maharaja Trophy T20 Cricket Festival starts tomorrow in Mysore Hubli Vs Mangalore opening match

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular