Vice-Presidential Poll : ಭಾರತದ 14ನೇ ಉಪ ರಾಷ್ಟ್ರಪತಿಯಾಗಿ ಜಗದೀಪ್​ ಧನಕರ್​ ಆಯ್ಕೆ

ದೆಹಲಿ : Vice-Presidential Poll : ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಹಾಗೂ ಎನ್​ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ಜಗದೀಪ್ ಧನಕರ್​​ ಇಂದು ಉಪರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿ ಮಾರ್ಗರೇಟ್​ ಆಳ್ವಾರನ್ನು ಮಣಿಸಿ ದೇಶದ 14 ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಹಾಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿಯು ಆಗಸ್ಟ್​ 10ರಂದು ಕೊನೆಗೊಳ್ಳಲಿದೆ.

ಇಂದು ಸಂಸತ್ತಿನ ಉಭಯ ಸದನಗಳ ಸದಸ್ಯರು ದಿನವಿಡೀ ಉಪರಾಷ್ಟ್ರಪತಿಗಳ ಆಯ್ಕೆಗಾಗಿ ಮತ ಚಲಾವಣೆ ಮಾಡಿದ್ದಾರೆ. ಮಾರ್ಗರೇಟ್​ ಆಳ್ವಾ ವಿರುದ್ಧ ಧನಕರ್​ 528 ಮತಗಳನ್ನು ಪಡೆದರು. ಮಾರ್ಗರೇಟ್​ ಆಳ್ವಾ 182 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ನೂತನ ಉಪರಾಷ್ಟ್ರಪತಿ ಜಗದೀಪ್​ ಧನಕರ್​ ಆಗಸ್ಟ್​ 11ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ

ಜನತಾ ದಳ (ಯುನೈಟೆಡ್), ವೈಎಸ್‌ಆರ್‌ಸಿಪಿ, ಬಿಎಸ್‌ಪಿ, ಎಐಎಡಿಎಂಕೆ ಮತ್ತು ಶಿವಸೇನೆಯಂತಹ ಪ್ರಾದೇಶಿಕ ಪಕ್ಷಗಳ ಬೆಂಬಲಗಳನ್ನೂ ಹೊಂದಿದ್ದ ಜಗದೀಪ್​ ಧನಕರ್​ ಗೆಲುವು ಸುಲಭದ ಮಾರ್ಗವೇ ಆಗಿತ್ತು. ಮಾರ್ಗರೇಟ್​ ಆಳ್ವಾ ಆಮ್ ಆದ್ಮಿ ಪಕ್ಷ (ಎಎಪಿ), ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಬೆಂಬಲವನ್ನು ಪಡೆದಿದ್ದರೂ ಸಹ, ಅವರು ಕಾಂಗ್ರೆಸ್ ನಂತರ ಎರಡನೇ ಅತಿದೊಡ್ಡ ವಿರೋಧ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬೆಂಬಲವನ್ನು ಗಳಿಸಲು ವಿಫಲರಾಗಿದ್ದು ಅವರಿಗೆ ಗೆಲುವಿನ ಓಟದಲ್ಲಿ ಭಾರೀ ಹಿನ್ನೆಡೆಗೆ ಕಾರಣವಾಯ್ತು. ಉಪರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಯಲ್ಲಿ ನಮ್ಮ ಅಭಿಪ್ರಾಯವನ್ನು ಕೇಳಲಾಗಿಲ್ಲ ಎಂದು ಆರೋಪಿಸಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ ಉಪರಾಷ್ಟ್ರಪತಿ ಚುನಾವಣೆಗೆ ಬಹಿಷ್ಕಾರ ಹೇರಿದೆ.

71 ವರ್ಷದ ಜಗದೀಪ್​ ಧನಕರ್​​ ಸಮಾಜವಾದಿ ಹಿನ್ನೆಲೆ ಹೊಂದಿರುವ ರಾಜಸ್ಥಾನದ ಜಾಟ್​ ಸಮುದಾಯದ ನಾಯಕರಾಗಿದ್ದಾರೆ. 80 ವರ್ಷದ ಮಾರ್ಗರೇಟ್​ ಆಳ್ವಾ ಕಾಂಗ್ರೆಸ್​​ನ ಹಿರಿಯ ನಾಯಕಿಯಾಗಿದ್ದಾರೆ. ಮಾರ್ಗರೇಟ್​ ಆಳ್ವಾ ರಾಜಸ್ಥಾನ ಹಾಗೂ ಉತ್ತರಾಖಂಡ್​​ನ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ್ದಾರೆ .

ಇದನ್ನು ಓದಿ : people test HIV positive : ಕಡಿಮೆ ಖರ್ಚಿನಲ್ಲಿ ಟ್ಯಾಟೂ ಹಾಕಿಸಲು ಹೋಗಿ ಯಡವಟ್ಟು : ಇಬ್ಬರಿಗೆ ಹೆಚ್​ಐವಿ ಸೋಂಕು ದೃಢ

ಇದನ್ನೂ ಓದಿ : Maharaja Trophy T20 : ಕರುನಾಡ ಕ್ರಿಕೆಟ್ ಹಬ್ಬ ಮೈಸೂರಿನಲ್ಲಿ ನಾಳೆ ಶುರು: ಹುಬ್ಬಳ್ಳಿVs ಮಂಗಳೂರು ಮಧ್ಯೆ ಆರಂಭಿಕ ಪಂದ್ಯ

Vice-Presidential Poll : NDA candidate Jagdeep Dhankhar wins V-P election with 528 votes

Comments are closed.