people test HIV positive : ಕಡಿಮೆ ಖರ್ಚಿನಲ್ಲಿ ಟ್ಯಾಟೂ ಹಾಕಿಸಲು ಹೋಗಿ ಯಡವಟ್ಟು : ಇಬ್ಬರಿಗೆ ಹೆಚ್​ಐವಿ ಸೋಂಕು ದೃಢ

ವಾರಣಾಸಿ : people test HIV positive : ಈಗೆಲ್ಲ ಮೈಮೇಲೆ ಟ್ಯಾಟೂಗಳನ್ನು ಹಾಕಿಸಿಕೊಳ್ಳುವುದು ಯುವ ಜನತೆಯಲ್ಲಿ ಕ್ರೇಜ್​ ಆಗಬಿಟ್ಟಿದೆ. ಹಿಂದೆಲ್ಲ ಸತ್ತ ಮೇಲೆ ದೇಹದ ಮೇಲೆ ನಮ್ಮದು ಅಂತಾ ಒಂದು ಗುರುತಿರಬೇಕೆಂದು ಹಚ್ಚೆ ಹಾಕಿಸಿಕೊಳ್ತಿದ್ರು. ಆದರೆ ಈಗ ಟ್ರೆಂಡ್​ಗಾಗಿ ಟ್ಯಾಟೂ ಹಾಕಿಸಿಕೊಳ್ಳುವ ಕಾಲ ಬಂದಿದೆ. ದೊಡ್ಡ ದೊಡ್ಡ ಶೋರೂಂಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳಬೇಕು ಅಂದರೆ ಸಾವಿರಗಟ್ಟಲೇ ಹಣ ಖರ್ಚು ಮಾಡಬೇಕು. ಹೀಗಾಗಿ ಕಡಿಮೆ ಖರ್ಚಿನಲ್ಲಿ ಗ್ರಾಮದಲ್ಲಿ ನಡೆದ ಜಾತ್ರೆಯಲ್ಲಿ ಟ್ಯಾಟೂ ಹಾಕಿಸಿಕೊಂಡ 20 ವರ್ಷದ ಯುವಕನ ಬಾಳೇ ನರಕವಾದ ಘಟನೆಯೊಂದು ವಾರಣಾಸಿಯ ಬರಗಾಂವ್​ ಪ್ರದೇಶದಲ್ಲಿ ಸಂಭವಿಸಿದೆ. ಟ್ಯಾಟೂ ಹಾಕಿಸಿಕೊಂಡ ಕೆಲವೇ ದಿನಗಳಲ್ಲಿ ಯುವಕನ ಆರೋಗ್ಯದಲ್ಲಿ ಗಣನೀಯವಾದ ಬದಲಾವಣೆಗಳು ಉಂಟಾದವು. ತೀವ್ರ ಜ್ವರ ಕಾಣಿಸಿಕೊಂಡು ಆತ ಸಂಪೂರ್ಣ ಬಲ ಹೀನನಾಗಿದ್ದನು. ಎಷ್ಟೇ ಚಿಕಿತ್ಸೆ ನೀಡಿದರೂ ಯುವಕ ಸರಿಯಾಗದ್ದನ್ನು ಕಂಡ ವೈದ್ಯರು ಹೆಚ್​ಐವಿ ಪರೀಕ್ಷೆ ಮಾಡಲು ಹೇಳಿದ್ದು ವರದಿಯಲ್ಲಿ ಈತನಿಗೆ ಹೆಚ್​ಐವಿ ಸೋಂಕಿರುವ ವಿಚಾರ ದೃಢಪಟ್ಟಿದೆ.


ವರದಿ ಬಳಿಕ ವೈದ್ಯರು ಕೌನ್ಸೆಲಿಂಗ್​ ನಡೆಸಿದ ಸಂದರ್ಭದಲ್ಲಿ ಯುವಕ ತಾನು ಯಾರೊಂದಿಗೂ ಈವರೆಗೆ ಲೈಂಗಿಕ ಕ್ರಿಯೆ ನಡೆಸಿಲ್ಲ ಎಂದು ಹೇಳಿದ್ದಾನೆ. ಅಲ್ಲದೇ ತಾನು ಯಾರಿಂದಲೂ ರಕ್ತವನ್ನು ಕೂಡ ಪಡೆದಿಲ್ಲ ಎಂದೂ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ವೈದ್ಯರಿಗೆ ಈತನಿಗೆ ಟ್ಯಾಟೂ ಹಾಕಿಸಿಕೊಂಡ ಸೂಜಿಯಿಂದ ಹೆಚ್​ಐವಿ ಬಂದಿದೆ ಎಂಬ ವಿಚಾರ ತಿಳಿದು ಬಂದಿದೆ.


ಇದೇ ರೀತಿಯ ಇನ್ನೊಂದು ಘಟನೆಯು ನಾಗ್ವಾನ್​ನಲ್ಲಿ ಸಂಭವಿಸಿದೆ. ಅಂಗಡಿಯಲ್ಲಿ ಟ್ಯಾಟೂ ಹಾಕಿಸಿಕೊಂಡ ಕೆಲವೇ ದಿನಗಳಲ್ಲಿ ಮಹಿಳೆಯು ಅಸ್ವಸ್ಥರಾಗಿದ್ದಾರೆ. ವೈದ್ಯಕೀಯ ಪರೀಕ್ಷೆಯ ಸಂದರ್ಭದಲ್ಲಿ ಈಕೆಗೂ ಹೆಚ್​ಐವಿ ಸೋಂಕು ಇರುವುದು ದೃಢಪಟ್ಟಿದೆ.

ಮಹಿಳೆಯು ಯಾವುದೇ ರೀತಿಯಲ್ಲಿ ಅಸುರಕ್ಷಿತ ಲೈಂಗಿಕ ಕ್ರಿಯೆಯನ್ನು ನಡೆಸಿಲ್ಲ ಅಥವಾ ಸೋಂಕಿತ ವ್ಯಕ್ತಿಯ ರಕ್ತ ಕೂಡ ಮಹಿಳೆಯ ದೇಹಕ್ಕೆ ವರ್ಗಾವಣೆಯಾಗಿಲ್ಲ. ರೋಗಿಯೊಂದಿಗೆ ಆಪ್ತ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಈಕೆಗೆ ಟ್ಯಾಟೂವಿನಿಂದ ಹೆಚ್​ಐವಿ ಬಂದಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.


ಟ್ಯಾಟೂವನ್ನು ಹಾಕಲು ಬಳಕೆ ಮಾಡುವ ಸೂಜಿಗಳು ದುಬಾರಿಯಾಗಿರುತ್ತದೆ. ಆದರೂ ಸಹ ಒಬ್ಬರಿಗೆ ಬಳಕೆ ಮಾಡಿದ ಸೂಜಿಯನ್ನು ಮತ್ತೊಬ್ಬರಿಗೆ ಬಳಕೆ ಮಾಡುವಂತಿಲ್ಲ . ಆದರೆ ಈ ಪ್ರಕರಣಗಳಲ್ಲಿ ಹೆಚ್ಚು ಹಣ ಗಳಿಸುವ ದುರಾಸೆಯಿಂದ ಅಂಗಡಿ ಮಾಲೀಕರು ಈ ರೀತಿ ಒಬ್ಬರಿಗೆ ಬಳಸಿದ ಸೂಜಿಯನ್ನೇ ಮತ್ತೊಬ್ಬರಿಗೆ ಬಳಕೆ ಮಾಡಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಇದನ್ನು ಓದಿ : independence Freedom Struggle : ಭಾರತದ ಸ್ವಾತಂತ್ರ್ಯ ಹೋರಾಟದ 10 ಪ್ರಮುಖ ವಿಚಾರಗಳು ಇಲ್ಲಿದೆ ನೋಡಿ

ಇದನ್ನೂ ಓದಿ : woman commits suicide : ಅವಳಿ ಮಕ್ಕಳೊಂದಿಗೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

Two people test HIV positive in Varanasi after getting tattoos, know what happened

Comments are closed.