ರಾಂಚಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪ್ರಥಮ ಟಿ20 (India Vs New Zeeland T20 seires) ಪಂದ್ಯದ ವೇಳೆ ವಿಶೇಷ ಅತಿಥಿಯೊಬ್ಬರು ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತ Vs ಕಿವೀಸ್ ಮೊದಲ ಟಿ20 ಪಂದ್ಯಕ್ಕೆ ರಾಂಚಿಯಲ್ಲಿರುವ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣ ಆತಿಥ್ಯ (Mahendra Singh Dhoni) ವಹಿಸಿತ್ತು. ಪಂದ್ಯದಲ್ಲಿ 21 ರನ್’ಗಳಿಂದ ಭಾರತವನ್ನು ಬಗ್ಗು ಬಡಿದ ನ್ಯೂಜಿಲೆಂಡ್ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಪಂದ್ಯದ ವೇಳೆ ರಾಂಚಿ ರಾಂಬೊ ಖ್ಯಾತಿಯ ಟೀಮ್ ಇಂಡಿಯಾದ ದಿಗ್ಗಜ ನಾಯಕ, ಲೋಕಲ್ ಹೀರೊ ಮಹೇಂದ್ರ ಸಿಂಗ್ ಧೋನಿ (MS Dhoni) ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರು. ಪತ್ನಿ ಸಾಕ್ಷಿ ಜೊತೆ ಧೋನಿ ಪೆವಿಲಿಯನ್ ಎಂಡ್’ನಲ್ಲಿ ಕುಳಿತು ಧೋನಿ ಪಂದ್ಯ ವೀಕ್ಷಿಸಿದ್ದಾರೆ. ಧೋನಿ ಅವರನ್ನು ಮೈದಾನದ ಬಿಗ್ ಸ್ಕ್ರೀನ್’ನಲ್ಲಿ ತೋರಿಸುತ್ತಿದ್ದಂತೆ ಕ್ರೀಡಾಂಗಣದಲ್ಲಿದ್ದ ಕ್ರಿಕೆಟ್ ಪ್ರಿಯರ ಸಂಭ್ರಮ ಮುಗಿಲು ಮುಟ್ಟಿತ್ತು.
The craze for MS Dhoni 🔥pic.twitter.com/StIZcCg5WJ
— Johns. (@CricCrazyJohns) January 27, 2023
ಪಂದ್ಯದ ಹಿಂದಿನ ದಿನ, ಅಂದ್ರೆ ಗುರುವಾರ ಎಂ.ಎಸ್ ಧೋನಿ ಟೀಮ್ ಇಂಡಿಯಾ ಆಟಗಾರರನ್ನು ಡ್ರೆಸ್ಸಿಂಗ್ ರೂಮ್’ನಲ್ಲಿ ಭೇಟಿ ಮಾಡಿದ್ದರು. ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಮ್ ಇಂಡಿಯಾದಲ್ಲಿರುವ ಯುವ ಆಟಗಾರರು ದಿಗ್ಗಜ ನಾಯಕನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದರು. ಇನ್ನು ಕೆಲ ಆಟಗಾರರು ಧೋನಿ ಅವರಿಂದ ಕ್ರಿಕೆಟ್ ಪಾಠಗಳನ್ನು ಹೇಳಿಸಿಕೊಂಡಿದ್ದಾರೆ.
GOAT MS Dhoni meet the Indian team.pic.twitter.com/n2tlsGkKI6
— Johns. (@CricCrazyJohns) January 26, 2023
ಧೋನಿ ಅವರ ಜೊತೆಗಿನ ಪೋಟೋವನ್ನು ಟ್ವೀಟ್ ಮಾಡಿರುವ ಟೀಮ್ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ “ನಿಮ್ಮ ಪಕ್ಕದಲ್ಲಿ ಇಂತಹ ನಾಯಕ ನಿಂತಿದ್ದಾಗ ಕಲಿಯುವಿಕೆಗೆ ಅಂತ್ಯವೆಂಬುದೇ ಇರುವುದಿಲ್ಲ. ಮಾಹಿ ಭಾಯ್ ಜೊತೆ ಅದ್ಭುತ ಕ್ಷಣಗಳನ್ನು ಕಳೆದೆ” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : KL Rahul wedding photos : ಮದುವೆ ಮಹೋತ್ಸವದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ರಾಹುಲ್
ಇದನ್ನೂ ಓದಿ : ಜನವರಿ 31ರಿಂದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ಸ್ : ಮನೆಯಂಗಳದಲ್ಲಿ ಕರ್ನಾಟಕಕ್ಕೆ ಉತ್ತರಾಖಂಡ್ ಎದುರಾಳಿ
ಇದನ್ನೂ ಓದಿ : ICC Women’s Under-19 World Cup: ಕಿವೀಸ್ ವಿರುದ್ಧ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟ ಭಾರತದ ವನಿತೆಯರು
41 ವರ್ಷದ ಎಂ.ಎಸ್ ಧೋನಿ 2020ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಗುಡ್ ಬೈ ಹೇಳಿದ್ದರು. ಈ ವರ್ಷದ ಐಪಿಎಲ್ ನಂತರ ಧೋನಿ ಕ್ರಿಕೆಟ್’ನ ಎಲ್ಲಾ ಪ್ರಕಾರಗಳಿಗೆ ನಿವೃತ್ತಿ ಘೋಷಿಸಲಿದ್ದಾರೆ. ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕನಾಗಿರುವ ಧೋನಿ ಐಸಿಸಿ ಟಿ20 ವಿಶ್ವಕಪ್, ಐಸಿಸಿ ಏಕದಿನ ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ಜಗತ್ತಿನ ಮೊದಲ ಮತ್ತು ಏಕೈಕ ನಾಯಕನೆಂಬ ವಿಶ್ವದಾಖಲೆ ಹೊಂದಿದ್ದಾರೆ.
Mahendra Singh Dhoni : Special guest who appeared at the stadium during the India Vs New Zealand T20 match