ಸೋಮವಾರ, ಏಪ್ರಿಲ್ 28, 2025
HomeSportsCricketಅಜಿಂಕ್ಯ ರಹಾನೆಗೆ ಟೀಮ್ ಇಂಡಿಯಾ ಟಿಕೆಟ್ ಕೊಡಿಸಿತು ಧೋನಿ ಜೊತೆಗಿನ ಅದೊಂದು ಫೋನ್ ಕಾಲ್

ಅಜಿಂಕ್ಯ ರಹಾನೆಗೆ ಟೀಮ್ ಇಂಡಿಯಾ ಟಿಕೆಟ್ ಕೊಡಿಸಿತು ಧೋನಿ ಜೊತೆಗಿನ ಅದೊಂದು ಫೋನ್ ಕಾಲ್

- Advertisement -

ಬೆಂಗಳೂರು : ಭಾರತದ ಎಷ್ಟೋ ಕ್ರಿಕೆಟಿಗರಿಗೆ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ (MS Dhoni) ಗಾಡ್ ಫಾದರ್ ಇದ್ದ ಹಾಗೆ. ಟೀಮ್ ಇಂಡಿಯಾದಿಂದ ಹೊರ ಬಿದ್ದ ಆಟಗಾರರು, ಫಾರ್ಮ್ ಕಳೆದುಕೊಂಡು ಪರದಾಡುತ್ತಿರುವ ಆಟಗಾರರು ಒಮ್ಮೆ ಧೋನಿ ಗರಡಿಗೆ (MS Dhoni – Ajinky Rahane) ಬಂದ್ರೆ ಸಾಕು, ಪುಟಿದೆದ್ದು ನಿಲ್ಲುತ್ತಾರೆ. ಇದಕ್ಕೆ ಲೇಟೆಸ್ಟ್ ಎಕ್ಸಾಂಪಲ್ ಮುಂಬೈ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ. ಐಪಿಎಲ್-2023 ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅಬ್ಬರಿಸುತ್ತಿರುವ ಅಜಿಂಕ್ಯ ರಹಾನೆ ಅಚ್ಚರಿಯ ರೀತಿಯಲ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ.

ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ (ICC World Test Championship Final 2023) ಪಂದ್ಯದಲ್ಲಿಆಡಲಿರುವ ಟೀಮ್ ಇಂಡಿಯಾದಲ್ಲಿ ರಹಾನೆ (Ajinky Rahane comeback) ಸ್ಥಾನ ಪಡೆದಿದ್ದಾರೆ. ಶ್ರೇಯಸ್ ಅಯ್ಯರ್ ಗಾಯಗೊಂಡಿರುವ ಕಾರಣ ಅವರ ಬದಲು ರಹಾನೆಯವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ಅಜಿಂಕ್ಯ ರಹಾನೆಯವರ ಟೆಸ್ಟ್ ಕಂಬ್ಯಾಕ್ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್ ಧೋನಿ ಅವರ ಪಾತ್ರವಿದೆ.

ಟೆಸ್ಟ್ ತಂಡದ ಆಯ್ಕೆಗೂ ಮುನ್ನ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್, ಸಿಎಸ್’ಕೆ ನಾಯಕ ಧೋನಿಯವರಿಗೊಂದು ಫೋನ್ ಕಾಲ್ ಮಾಡಿದ್ದಾರೆ. ರಹಾನೆ ಬಗ್ಗೆ ವಿಚಾರಿಸಲು ಧೋನಿಗೆ ದ್ರಾವಿಡ್ ದೂರವಾಣಿ ಕರೆ ಮಾಡಿದ್ದರು. ಸಿಎಸ್‌ಕೆ ಕ್ಯಾಂಪ್‌ನಲ್ಲಿ ರಹಾನೆ ಹೇಗೆ ಆಡುತ್ತಿದ್ದಾರೆ. ಅವರ ಮನಸ್ಥಿತಿ ಹೇಗಿದೆ ಎಂಬ ಬಗ್ಗೆ ಧೋನಿಯವರಿಂದ ದ್ರಾವಿಡ್ ಮಾಹಿತಿ ಪಡೆದಿದ್ದಾರೆ. ದ್ರಾವಿಡ್ ಪ್ರಶ್ನೆಗೆ ಧೋನಿ ಹೀಗೆ ಉತ್ತರಿಸಿದ್ದಾರೆ.

“ನಾವು ಅಜಿಂಕ್ಯ ರಹಾನೆಯ ಸಾಮರ್ಥ್ಯವನ್ನು ಅರ್ಥೈಸಿಕೊಂಡು ಆಟದಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಅವರಿಗೆ ಬೇಕಾದ ಬ್ಯಾಟಿಂಗ್ ಕ್ರಮಾಂಕವನ್ನು ಒದಗಿಸಿದ್ದೇವೆ. ಅದರ ಪರಿಣಾಮ ಆಟದಲ್ಲಿ ಕಂಡು ಬರುತ್ತಿದೆ” ಎಂದು ದ್ರಾವಿಡ್ ಅವರಿಗೆ ಧೋನಿ ಹೇಳಿದ್ದಾರೆ. ಇದಾದ ನಂತರ ರಹಾನೆ ಅವರನ್ನು WTC ಫೈನಲ್ ಪಂದ್ಯಕ್ಕೆ ಆಯ್ಕೆ ಮಾಡಲು ದ್ರಾವಿಡ್ ನಿರ್ಧರಿಸಿದ್ದಾರೆ.

ರಹಾನೆ ಕಂಬ್ಯಾಕ್ ಮಾಡಿರುವ ಕಾರಣ ಮುಂಬೈನ ಮತ್ತೊಬ್ಬ ಬ್ಯಾಟ್ಸ್’ಮನ್ ಸೂರ್ಯಕುಮಾರ್ ಯಾದವ್ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. 2022ರ ಜನವರಿಯಲ್ಲಿ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಅಜಿಂಕ್ಯ ರಹಾನೆ, ಕಳೆದ ರಣಜಿ ಟ್ರೋಫಿಯಲ್ಲಿ 7 ಪಂದ್ಯಗಳಿಂದ ಒಂದು ದ್ವಿಶತಕ ಸಹಿತ 600ಕ್ಕೂ ಹೆಚ್ಚು ರನ್ ಗಳಿಸಿ ಬಿಸಿಸಿಐ ಆಯ್ಕೆ ಸಮಿತಿಯ ಗಮನ ಸೆಳೆದಿದ್ದರು. ಐಪಿಎಲ್’ನಲ್ಲೂ ಮಿಂಚುತ್ತಿರುವ ರಹಾನೆಯವರ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಪಂದ್ಯ ಜೂನ್ 7ರಂದು ಲಂಡನ್’ನಲ್ಲಿರುವ ಓವಲ್ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿದ್ದು, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ.

ಇದನ್ನೂ ಓದಿ : ಮಹಿಳಾ ಕ್ರಿಕೆಟ್ ತಂಡದ ಕಾಂಟ್ರಾಕ್ಟ್ ಲಿಸ್ಟ್ ಪ್ರಕಟಿಸಿದ ಬಿಸಿಸಿಐ, ಯಾರಿಗೆಷ್ಟು ಲಕ್ಷ? ಪಟ್ಟಿಯಲ್ಲಿ ಕರ್ನಾಟಕದ ಆಟಗಾರ್ತಿಯರೆಷ್ಟು?

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಪಂದ್ಯಕ್ಕೆ ಭಾರತ ತಂಡ ಹೀಗಿದೆ (ICC World Test Championship Final):
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಲ್ ರಾಹುಲ್, ಕೆ.ಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ರವೀಂದ್ರ ಜಡೇಜ, ಜೈದೇವ್ ಉನಾದ್ಕಟ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್.

MS Dhoni – Ajinky Rahane : Dhoni’s part behind Rahane’s test comeback

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular