ಸೋಮವಾರ, ಏಪ್ರಿಲ್ 28, 2025
HomeSportsCricketMS Dhoni Menton CSA T20 League : ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಸಿಎಸ್‌ಕೆ...

MS Dhoni Menton CSA T20 League : ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಸಿಎಸ್‌ಕೆ ತಂಡಕ್ಕೆ ಎಂ.ಎಸ್ ಧೋನಿ ಮೆಂಟರ್

- Advertisement -

ಜೊಹಾನ್ಸ್’ಬರ್ಗ್: (MS Dhoni Menton CSA T20 League) ಎರಡು ವಿಶ್ವಕಪ್ ವಿಜೇತ ಟೀಮ್ ಇಂಡಿಯಾದ ನಾಯಕ, ಚೆನ್ನೈ ಸೂಪರ್ ಕಿಂಗ್ಸ್’ನ ಲೆಜೆಂಡ್ರಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ದಕ್ಷಿಣ ಆಫ್ರಿಕಾ ಟಿ20 ಲೀಗ್’ನಲ್ಲಿ ತಂಡವೊಂದರ ಮೆಂಟರ್ ಆಗಲಿದ್ದಾರೆ.

ಐಪಿಎಲ್’ನಲ್ಲಿ ಆಡುತ್ತಿರುವ ಎಂ.ಎಸ್ ಧೋನಿ ದಕ್ಷಿಣ ಆಫ್ರಿಕಾ ಟಿ20 ಲೀಗ್’ನಲ್ಲಿ ತಂಡವೊಂದರ ಮಾರ್ಗದರ್ಶಕರಾಗಲು ಹೇಗೆ ಸಾಧ್ಯ? ಇದಕ್ಕೆ ಧೋನಿ ಒಪ್ಪಿಕೊಂಡಿದ್ದಾರಾ? ಈ ಪ್ರಶ್ನೆಗಳ ಮಧ್ಯೆ ಇರುವ ಸೇತುವೆ ಚೆನ್ನೈ ಸೂಪರ್ ಕಿಂಗ್ಸ್. ಹೌದು. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ದಕ್ಷಿಣ ಆಫ್ರಿಕಾ ಟಿ20 ಲೀಗ್’ನಲ್ಲಿ ಜೊಹಾನ್ಸ್’ಬರ್ಗ್ ಫ್ರಾಂಚೈಸಿಯನ್ನು ತನ್ನದಾಗಿಸಿಕೊಂಡಿದೆ. ಹೀಗಾಗಿ ಜೊಹಾನ್ಸ್’ಬರ್ಗ್ ತಂಡಕ್ಕೆ ಎಂ.ಎಸ್ ಧೋನಿ ಮೆಂಟರ್ (ಮಾರ್ಗದರ್ಶಕ) ಆಗಲಿದ್ದಾರಂತೆ.

ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು’ಪ್ಲೆಸಿಸ್ ಅವರನ್ನು ಜೊಹಾನ್ಸ್’ಬರ್ಗ್ ತಂಡದ ಐಕಾನ್ ಆಟಗಾರ ನಾಗಿಸಲು (Marquee Player) ತಂಡದ ಮಾಲೀಕತ್ವ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಯೋಚಿಸುತ್ತಿದೆ. ಫಾಫ್ ಡು’ಪ್ಲೆಸಿಸ್ ಕಳೆದ ಐಪಿಎಲ್ ಸಾಲಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ಪರ ಸುದೀರ್ಘ 9 ವರ್ಷಗಳ ಕಾಲ ಆಡಿದ್ದಾರೆ. 2011ರಿಂದ 2021ರವರೆಗೆ CSK ತಂಡ ಮೂರು ಬಾರಿ ಐಪಿಎಲ್ ಚಾಂಪಿಯನ್ ಆದಾಗ ಡು’ಪ್ಲೆಸಿಸ್ ತಂಡದಲ್ಲಿದ್ದರು. CSK ಜೊತೆ ಆತ್ಮೀಯ ಸಂಬಂಧ ಹೊಂದಿರುವ ಫಾಫ್ ಡು’ಪ್ಲೆಸಿಸ್ ಅವರನ್ನೇ ಜೊಹಾನ್ಸ್’ಬರ್ಗ್ ತಂಡದ ಐಕಾನ್ ಆಟಗಾರನನ್ನಾಗಿ ಆಯ್ಕೆ ಮಾಡಲು CSK ಪ್ಲಾನ್ ಮಾಡುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ವಿದೇಶೀ ಆಟಗಾರರನ್ನೇ ದಕ್ಷಿಣ ಆಫ್ರಿಕಾ ಟಿ20 ಲೀಗ್’ನಲ್ಲೂ ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮುಂದಾಗಿದೆ ಎನ್ನಲಾಗ್ತಿದೆ.

ದಕ್ಷಿಣ ಆಫ್ರಿಕಾ ಟಿ20 ಲೀಗ್ ಮುಂದಿನ ವರ್ಷದ ಜನವರಿಯಲ್ಲಿ ನಡೆಯಲಿದ್ದು, ಆರು ತಂಡಗಳನ್ನು ಐಪಿಎಲ್ ಫ್ರಾಂಚೈಸಿಗಳೇ ಖರೀದಿಸಿವೆ. ಜೊಹಾನ್ಸ್’ಬರ್ಗ್ ಫ್ರಾಂಚೈಸಿಯನ್ನು ಚೆನ್ನೈ ಸೂಪರ್ ಕಿಂಗ್ಸ್, ಕೇಪ್ ಟೌನ್ ತಂಡವನ್ನು ಮುಂಬೈ ಇಂಡಿಯನ್ಸ್, ಪೋರ್ಟ್ ಎಲಿಜಬೆತ್ ತಂಡದ ಫ್ರಾಂಚೈಸಿಯನ್ನು ಸನ್’ರೈಸರ್ಸ್ ಹೈದರಾಬಾದ್, ಡರ್ಬನ್ ಫ್ರಾಂಚೈಸಿಯನ್ನು ಲಕ್ನೋ ಸೂಪರ್ ಜೈಂಟ್ಸ್, ಪಾರ್ಲ್ ತಂಡ ಫ್ರಾಂಚೈಸಿಯನ್ನು ರಾಜಸ್ಥಾನ್ ರಾಯಲ್ಸ್ ಮತ್ತು ಪ್ರಿಟೋರಿಯಾ ಫ್ರಾಂಚೈಸಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದದ ಮಾಲೀಕರು ಖರೀದಿ ಮಾಡಿದ್ದಾರೆ.

ಇದನ್ನೂ ಓದಿ : Two Champions for Ranji Trophy : ಇನ್ನು ಮುಂದೆ ರಣಜಿ ಟ್ರೋಫಿಗೆ ಇಬ್ಬರು ಚಾಂಪಿಯನ್ಸ್, ಏನಿದು ಬಿಸಿಸಿಐನ ಹೊಸ ಪ್ಲಾನ್‌ ?

ಇದನ್ನೂ ಓದಿ : Mukesh Ambani Ravi Shastri : ರವಿಶಾಸ್ತ್ರಿ ಜೊತೆ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡ ಮುಕೇಶ್ ಅಂಬಾನಿ, ಏನಿದರ ಗುಟ್ಟು?

MS Dhoni Menton CSA T20 League In South Africa

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular