Mukesh Ambani Ravi Shastri : ರವಿಶಾಸ್ತ್ರಿ ಜೊತೆ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡ ಮುಕೇಶ್ ಅಂಬಾನಿ, ಏನಿದರ ಗುಟ್ಟು?

ಲಂಡನ್: (Mukesh Ambani Ravi Shastri) ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಟ್ವಿಟರ್’ನಲ್ಲಿ ಒಂದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಆ ಫೋಟೋದಲ್ಲಿ ರವಿಶಾಸ್ತ್ರಿ ಜೊತೆ ನಿಂತಿರುವವರು ಸಾಮಾನ್ಯರಲ್ಲ. ಒಬ್ಬರು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ, ಮತ್ತೊಬ್ಬ ಗೂಗಲ್’ನ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಸುಂದರ್ ಪಿಚ್ಚೈ. ಇದು ಲಾರ್ಡ್ ಕ್ರಿಕೆಟ್ ಮೈದಾನದಲ್ಲಿ ತೆಗೆಯಲಾಗಿರುವ ಚಿತ್ರ.

ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ “ದಿ ಹಂಡ್ರೆಡ್ ಕಪ್” ಟಿ20 ಟೂರ್ನಿಯ ಪಂದ್ಯವನ್ನು ಭಾರತದ ಈ ಮೂವರು ದಿಗ್ಗಜರು ವೀಕ್ಷಿಸಿದ್ದಾರೆ. ಮುಕೇಶ್ ಅಂಬಾನಿ ಇಂಗ್ಲೆಂಡ್’ನ “ದಿ ಹಂಡ್ರೆಡ್ ಕಪ್” ಟೂರ್ನಿಯ ಪಂದ್ಯವನ್ನು ವೀಕ್ಷಿಸಿದ ನಂತರ, ಅಲ್ಲೂ ರಿಲಯನ್ಸ್ ಬಾಸ್ ತಂಡವೊಂದರ ಫ್ರಾಂಚೈಸಿಯನ್ನು ಖರೀದಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇಂಗ್ಲಿಷ್ ಕ್ರಿಕೆಟ್ ಲೀಗ್’ನಲ್ಲಿ ಮುಕೇಶ್ ಅಂಬಾನಿ ಹೂಡಿಕೆ ಮಾಡಲಾಗಿದ್ದಾರೆ ಎಂದು ಹೇಳಲಾಗ್ತಿದೆ.

ಮುಕೇಶ್ ಅಂಬಾನಿಯವರ ರಿಲಯನ್ಸ್ ಗ್ರೂಪ್ ಈಗಾಗ್ಲೇ ಐಪಿಎಲ್’ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಫ್ರಾಂಚೈಸಿ ಹೊಂದಿದೆ. ಅಂಬಾನಿ ಮಾಲೀಕತ್ವದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್’ನಲ್ಲಿ ದಾಖಲೆಯ ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. 2013ರಲ್ಲಿ ಮೊದಲ ಬಾರಿ ಚಾಂಪಿಯನ್ ಆಗಿದ್ದ ಮುಂಬೈ ಇಂಡಿಯನ್ಸ್ ನಂತರ 2015, 2017, 2019 ಮತ್ತು 2020ರಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು.

ಐಪಿಎಲ್ ನಂತರ ಮುಖೇಶ್ ಅಂಬಾನಿಯ ರಿಲಯನ್ಸ್ ಗ್ರೂಪ್ ದಕ್ಷಿಣ ಆಫ್ರಿಕಾ ಮತ್ತು ಯುಎಇಯಲ್ಲಿ ಟಿ20 ಲೀಗ್’ನಲ್ಲೂ ತಂಡಗಳನ್ನುಖರೀಸಿದಿಸಿದೆ. ದಕ್ಷಿಣ ಆಫ್ರಿಕಾ ಟಿ20 ಲೀಗ್”ನಲ್ಲಿ ಮುಕೇಶ್ ಅಂಬಾನಿ, ಕೇಪ್ ಟೌನ್ ತಂಡದ ಫ್ರಾಂಚೈಸಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಹೀಗೆ ಭಾರತ, ದಕ್ಷಿಣ ಆಫ್ರಿಕಾ, ಯುಎಇ ಟಿ20 ಲೀಗ್’ಗಳಲ್ಲಿ ತಂಡಗಳನ್ನು ಹೊಂದಿರುವ ಮುಕೇಶ್ ಅಂಬಾನಿಯವರ ಮುಂದಿನ ಟಾರ್ಗೆಟ್ ಇಂಗ್ಲಿಷ್ ಕ್ರಿಕೆಟ್ ಲೀಗ್ ಅಂತ ಹೇಳಲಾಗ್ತಿದೆ. ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ವೀಕ್ಷಿಸುವ ಸಂದರ್ಭದಲ್ಲಿ ಇಂಗ್ಲಿಷ್ ಕ್ರಿಕೆಟ್ ಲೀಗ್ ಟೂರ್ನಿಯ ಬಗ್ಗೆ ಮುಕೇಶ್ ಅಂಬಾನಿ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ : ICC Umpire Rudi Koertzen Death in Car Crash : ಕಾರು ಅಪಘಾತದಲ್ಲಿ ಐಸಿಸಿ ಕ್ರಿಕೆಟ್ ಅಂಪೈರ್ ರುಡಿ ಕುರ್ಟ್ಜನ್ ದುರ್ಮರಣ

ಇದನ್ನೂ ಓದಿ : Two Champions for Ranji Trophy : ಇನ್ನು ಮುಂದೆ ರಣಜಿ ಟ್ರೋಫಿಗೆ ಇಬ್ಬರು ಚಾಂಪಿಯನ್ಸ್, ಏನಿದು ಬಿಸಿಸಿಐನ ಹೊಸ ಪ್ಲಾನ್‌ ?

Mukesh Ambani Ravi Shastri, Ambani Outrage at the Lord’s cricket ground with Ravi Shastri

Comments are closed.