MS Dhoni – Ravichandran Ashwin : “ಟ್ರ್ಯಾಕ್ಟರ್” ಓಡಿಸುತ್ತಿದ್ದ ಧೋನಿ ಸಿಕ್ಸರ್ ಬಾರಿಸುತ್ತಿರುವುದನ್ನು ನೋಡಿ ದಂಗಾದ ಅಶ್ವಿನ್

ಬೆಂಗಳೂರು : 3 ವರ್ಷಗಳಿಂದ ಅಂತರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ. ಕ್ವಾಲಿಟಿ ಬೌಲರ್’ಗಳನ್ನು ಎದುರಿಸಿಲ್ಲ. ಕೆಲ ತಿಂಗಳ ಹಿಂದೆ ತನ್ನ ಹೊಲದಲ್ಲಿ ಟ್ರ್ಯಾಕ್ಟರ್ ಓಡಿಸುತ್ತಿದ್ದ ಆಟಗಾರ ಐಪಿಎಲ್’ನಲ್ಲಿ ಸಿಕ್ಸರ್’ಗಳ ಮೇಲೆ ಸಿಕ್ಸರ್’ಗಳನ್ನು ಬಾರಿಸುತ್ತಿದ್ದಾರೆ. ಇದನ್ನು ನೋಡಿ ಒಬ್ಬ ಆಟಗಾರ ದಂಗಾಗಿ ಹೋಗಿದ್ದಾನೆ. ಸಿಕ್ಸರ್’ಗಳನ್ನು ಬಾರಿಸುತ್ತಿರುವುದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ. ಧೋನಿ ಆಟವನ್ನು ನೋಡಿ ದಂಗಾಗಿ (MS Dhoni – Ravichandran Ashwin) ಹೋಗಿರುವುದು ರಾಜಸ್ಥಾನ್ ರಾಯಲ್ಸ್ ತಂಡದ ಆಲ್ರೌಂಡರ್ ರವಿಚಂದ್ರನ್ ಅಶ್ವಿನ್.

ಏಪ್ರಿಲ್ 12ರಂದು ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಎಂ.ಎಸ್ ಧೋನಿ 17 ಎಸೆತಗಳಲ್ಲಿ 3 ಸಿಕ್ಸರ್’ಗಳ ನೆರವಿನಿಂದ ಸ್ಫೋಟಕ ಅಜೇಯ 32 ರನ್ ಸಿಡಿಸಿದ್ದರು. ಇದನ್ನು ನೋಡಿ ಅಶ್ವಿನ್ ಅವರಿಗೆ ಅಚ್ಚರಿಯಾಗಿದೆಯಂತೆ. ತಮ್ಮ ಅಚ್ಚರಿಗೆ ಅಶ್ವಿನ್ ಕಾರಣವನ್ನೂ ನೀಡಿದ್ದಾರೆ.

“ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಆಡುತ್ತಿಲ್ಲ. ಅಂತರಾಷ್ಟ್ರೀಯ ಕ್ವಾಲಿಟಿ ಬೌಲರ್’ಗಳನ್ನು ಎದುರಿಸುತ್ತಿಲ್ಲ. ಹೀಗಾಗಿ ಬ್ಯಾಟಿಂಗ್’ನಲ್ಲಿ ಧೋನಿ ಅವರ ರಿಯಾಕ್ಷನ್ ಟೈಮ್ ಕಡಿಮೆಯಾಗಿದೆ ಎಂದು ಭಾವಿಸಿದ್ದೆ. ಇದರ ಜೊತೆಗೆ ಐಪಿಎಲ್ ಇಲ್ಲದಿದ್ದಾಗ ಧೋನಿ ಟ್ರ್ಯಾಕ್ಟರ್ ಓಡಿಸುತ್ತಿರುವುದನ್ನು ನೋಡಿದ್ದೆ. ಈಗ ನೋಡಿದ್ರೆ ಐಪಿಎಲ್’ಗೆ ವಾಪಸ್ಸಾಗಿ ಸಿಕ್ಸರ್’ಗಳ ಮೇಲೆ ಸಿಕ್ಸರ್’ಗಳನ್ನು ಬಾರಿಸುತ್ತಿದ್ದಾರೆ. ಇದನ್ನು ನೋಡಿ ನನಗೆ ನಿಜಕ್ಕೂ ರೋಮಾಂಚನವಾಗಿದೆ” ಎಂದು ಅಶ್ವಿನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

42 ವರ್ಷದ ಎಂ.ಎಸ್ ಧೋನಿ ಐಪಿಎಲ್-2023 ಟೂರ್ನಿಯಲ್ಲಿ 5 ಪಂದ್ಯಗಳ ಪೈಕಿ ನಾಲ್ಕು ಇನ್ನಿಂಗ್ಸ್’ಗಳಲ್ಲಿ ಬ್ಯಾಟಿಂಗ್’ಗೆ ಇಳಿದಿದ್ದು, 28 ಎಸೆತಗಳನ್ನೆದುರಿಸಿ 59 ರನ್ ಬಾರಿಸಿದ್ದಾರೆ. 210.71ರ ಅಮೋಘ ಸ್ಟ್ರೈಕ್’ರೇಟ್’ನಲ್ಲಿ ಬ್ಯಾಟ್ ಬೀಸುತ್ತಿರುವ ಧೋನಿ, 2 ಬೌಂಡರಿ ಹಾಗೂ 6 ಸಿಕ್ಸರ್’ಗಳನ್ನು ಸಿಡಿಸಿದ್ದಾರೆ. ಈ ಮೂಲಕ 42ನೇ ವಯಸ್ಸಲ್ಲೂ ತಮ್ಮ ತಾಕತ್ತು ಕುಂದಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಇದನ್ನೂ ಓದಿ : Kohli RCB love : ಕಿಂಗ್ ಕೊಹ್ಲಿ ಗಾಳ ಹಾಕಿತ್ತು ಆ ಫ್ರಾಂಚೈಸಿ, No ಅಂದಿದ್ದರು ವಿರಾಟ್, ಕೊಹ್ಲಿಗೆ ಆರ್‌ಸಿಬಿ ಮೇಲಿರುವ ಅಭಿಮಾನ ಎಂಥದ್ದು ಗೊತ್ತಾ?

ಇದನ್ನೂ ಓದಿ : RCB Vs CSK: ಚಿನ್ನಸ್ವಾಮಿಯಲ್ಲಿ ಧೋನಿ ಹವಾ, ಈ ಸಲ ಕಪ್ ನಮ್ದೇ ಅಂದ ಸಿಎಸ್‌ಕೆ; ಹಳದಿ+ಕೆಂಪು= ಇಂಡಿಯಾ ಅಂದ್ರು ಕಿಂಗ್ ಕೊಹ್ಲಿ

2020ರಲ್ಲಿ ಅಂತರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್’ಗೆ ಗುಡ್ ಬೈ ಹೇಳಿದ್ದ ಧೋನಿ, ಕಳೆದ 3 ವರ್ಷಗಳಿಂದ ಐಪಿಎಲ್ ಟೂರ್ನಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಐಪಿಎಲ್ ಇಲ್ಲದಿದ್ದಾಗ ಬಿಡುವಿನ ವೇಳೆಯಲ್ಲಿ ಧೋನಿ ಮಣ್ಣಿನ ಮಗನಾಗಿ ಕಾಣಿಸಿಕೊಳ್ಳುತ್ತಾರೆ. ಜಾರ್ಖಂಡ್’ನ ರಾಂಚಿಯಲ್ಲಿರುವ ತಮ್ಮ ಹೊಲದಲ್ಲಿ ಟ್ರ್ಯಾಕ್ಟರ್ ಓಡಿಸುತ್ತಾ “ರೈತ”ನಾಗುತ್ತಾರೆ. ಸ್ಟ್ರಾಬೆರಿ ಸೇರಿದಂತೆ ಹಲವು ಹಣ್ಣಿನ ಗಿಡಗಳನ್ನು ತಮ್ಮ ಕೈಯಾರೆ ಬೆಳೆಸಿದ್ದಾರೆ.

MS Dhoni – Ravichandran Ashwin : Ashwin rioted after seeing Dhoni hitting a six while driving a “tractor”.

Comments are closed.