ಸೋಮವಾರ, ಏಪ್ರಿಲ್ 28, 2025
HomeSportsCricketNathan Lyon : ಸಹ ಆಟಗಾರನ ಮಾಜಿ ಪ್ರೇಯಸಿಯನ್ನೇ ಮದುವೆಯಾದ ಆಸೀಸ್ ಕ್ರಿಕೆಟರ್ ನೇಥಲ್ ಲಯಾನ್

Nathan Lyon : ಸಹ ಆಟಗಾರನ ಮಾಜಿ ಪ್ರೇಯಸಿಯನ್ನೇ ಮದುವೆಯಾದ ಆಸೀಸ್ ಕ್ರಿಕೆಟರ್ ನೇಥಲ್ ಲಯಾನ್

- Advertisement -

ಸಿಡ್ನಿ: ಆಸ್ಟ್ರೇಲಿಯಾ ಟೆಸ್ಟ್ ತಂಡದ ಪ್ರಮುಖ ಸ್ಪಿನ್ನರ್ ನೇಥಲ್ ಲಯಾನ್ (Nathan Lyon), ತನ್ನ ಸಹ ಆಟಗಾರನ ಮಾಜಿ ಪ್ರೇಯಸಿಯನ್ನೇ ಮದುವೆಯಾಗಿ ಸುದ್ದಿಯಲ್ಲಿದ್ದಾರೆ. ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್ ನೇಥನ್ ಲಯಾನ್ ತಮ್ಮ ದೀರ್ಘಕಾಲದ ಗರ್ಲ್ಫ್ರೆಂಡ್ ಎಮ್ಮಾ ಮೆಕಾರ್ಥಿಯನ್ನು (Emma McCarthy) ಭಾನುವಾರ ವಿವಾಹವಾಗಿದ್ದಾರೆ. ಮದುವೆಯ ಫೋಟೋವನ್ನು ಸ್ವತಃ ಲಯಾನ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ನೇಥನ್ ಲಯಾನ್-ಎಮ್ಮಾ ಮೆಕಾರ್ಥಿ ವಿವಾಹ ಸಮಾರಂಭಕ್ಕೆ ಆಸ್ಟ್ರೇಲಿಯಾದ ಕ್ರಿಕೆಟಿಗರಾದ ಜೋಶ್ ಇಂಗ್ಲಿಸ್, ಶಾನ್ ಅಬೋಟ್, ಪೀಟರ್ ಸಿಡ್ಲ್, ಅಲೆಕ್ಸ್ ಕ್ಯಾರಿ, ಕ್ರಿಸ್ ಗ್ರೀನ್, ಮಿಚೆಲ್ ಸ್ವೀಪ್ಸನ್ ಸಾಕ್ಷಿಯಾಗಿದ್ದರು, 34 ವರ್ಷದ ನೇಥನ್ ಲಯಾನ್ ಅವರನ್ನು ವರಿಸಿಲುವ ಎಮ್ಮಾ ಮೆಕಾರ್ಥಿ ಆಸ್ಟ್ರೇಲಿಯಾದ ಮತ್ತೊಬ್ಬ ಆಟಗಾರ, 2021ರ ಐಸಿಸಿ ಟಿ20 ವಿಶ್ವಕಪ್ ಹೀರೋ ಮಿಚೆಲ್ ಮಾರ್ಷ್ (Mitchell Marsh) ಅವರ ಮಾಜಿ ಗೆಳತಿ. ಮಾರ್ಷ್ ಜೊತೆ ಲವ್ ಬ್ರೇಕ್ ಅಪ್ ನಂತರ್ ಎಮ್ಮಾ ಮೆಕಾರ್ಥಿ, ನೇಥನ್ ಲಯಾನ್ ಜೊತೆ ಡೇಟಿಂಗ್ ಆರಂಭಿಸಿದ್ದರು. ಇದೀಗ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನೇಥನ್ ಲಯಾನ್ ಅವರಿಗೆ ಇದು 2ನೇ ಎರಡನೇ ಮದುವೆ. ಇದಕ್ಕೂ ಮೊದಲು ಮೆಲ್ ವಾರಿಂಗ್ ಎಂಬವರನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೆ ಕೆಲ ವರ್ಷಗಳ ದಾಂಪತ್ಯ ಜೀವನದ ನಂತರ ಮೊದಲ ಪತ್ನಿಗೆ ಲಯಾನ್ ವಿಚ್ಚೇಧನ ನೀಡಿದ್ದರು. ನಂತರ 2017ರಿಂದ ನೇಥನ್ ಲಯಾನ್, ಆಸ್ಟ್ರೇಲಿಯಾ ಮಾಡೆಲ್ ಎಮ್ಮಾ ಮೆಕರ್ಥಿ ಜೊತೆ ಡೇಟಿಂಗ್ ಆರಂಭಿಸಿದ್ದರು.

ಆಸ್ಟ್ರೇಲಿಯಾ ಟೆಸ್ಟ್ ತಂಡದ ಪ್ರೀಮಿಯರ್ ಸ್ಪಿನ್ನರ್ ಆಗಿರುವ ನೇಥನ್ ಲಯಾನ್, 110 ಟೆಸ್ಟ್ ಪಂದ್ಯಗಳಿಂದ 438 ವಿಕೆಟ್ ಕಬಳಿಸಿದ್ದಾರೆ. 20 ಬಾರಿ ಇನ್ನಿಂಗ್ಸ್ ಒಂದರಲ್ಲಿ 5 ಅಥವಾ ಐದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದು, 50 ರನ್ನಿಗೆ 8 ವಿಕೆಟ್ ಕಬಳಿಸಿರುವುದು ಬೆಸ್ಟ್ ಬೌಲಿಂಗ್ ಪರ್ಫಾಮೆನ್ಸ್. ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ವಿಕೆಟ್”ಗಳನ್ನು ಪಡೆದವರ ಸಾಲಿನಲ್ಲಿ ಲಯಾನ್ 3ನೇ ಸ್ಥಾನದಲ್ಲಿದ್ದಾರೆ. ಸ್ಪಿನ್ ಮಾಂತ್ರಿಕ ದಿವಂಗತ ಶೇನ್ ವಾರ್ನ್ (708 ವಿಕೆಟ್ಸ್) ಮತ್ತು ಮಾಜಿ ವೇಗಿ ಗ್ಲೆನ್ ಮೆಗ್ರಾತ್ (563 ವಿಕೆಟ್ಸ್) ಮೊದಲೆರಡು ಸ್ಥಾನಗಳಲ್ಲಿದ್ದಾರೆ. ಆಸೀಸ್ ಪರ 29 ಏಕದಿನ ಪಂದ್ಯಗಳನ್ನೂ ಆಡಿರುವ ನೇಥನ್ ಲಯಾನ್ 29 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ : Most Consecutive ODI Series WIN : ಪಾಕ್ ವಿಶ್ವದಾಖಲೆ ಪೀಸ್ ಪೀಸ್, ವಿಂಡೀಸ್”ನಲ್ಲಿ ಅದ್ವಿತೀಯ ವಿಶ್ವದಾಖಲೆ ಬರೆದ ಯಂಗ್ ಇಂಡಿಯಾ

ಇದನ್ನೂ ಓದಿ : Rohit Sharma : ಲಂಡನ್‌ನಲ್ಲಿ ಹಾಲಿ ಡೇ ಜಾಲಿ ಡೇ ಮುಗಿಸಿ ವಿಂಡೀಸ್‌ಗೆ ತೆರಳಿದ ರೋಹಿತ್ ಶರ್ಮಾ & ಟೀಮ್

Nathan Lyon ties the knot with Mitchel Emma McCarthy

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular