children are being victimized : ಶಿವಮೊಗ್ಗದ ಪ್ರತಿಷ್ಠಿತ ಕಾಲೇಜಿನಲ್ಲಿ ನಶೆಯಲ್ಲಿ ತೇಲಾಡಿದ ವಿದ್ಯಾರ್ಥಿಗಳು

ಶಿವಮೊಗ್ಗ : children are being victimized : ಕೆಲ ದಿನಗಳ ಹಿಂದಷ್ಟೇ ಮಂಗಳೂರಿನ ಪ್ರತಿಷ್ಠಿತ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕಿಸ್ಸಿಂಗ್​ ಆಟವಾಡಿದ ವಿಡಿಯೋವೊಂದು ವೈರಲ್​ ಆಗಿತ್ತು. ಈ ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ವಿದ್ಯಾರ್ಥಿಗಳ ಸೆಕ್ಸ್​ ವಿಡಿಯೋ ಕೂಡ ದೊರಕಿದ್ದವು. ಈ ಘಟನೆ ಮಾಸುವ ಮುನ್ನವೇ ಇದೀಗ ಶಿವಮೊಗ್ಗದ ಪ್ರತಿಷ್ಠಿತ ಕಾಲೇಜಿನಲ್ಲಿ ವಿದ್ಯಾರ್ಥಿಗಳು ನಶೆಯಲ್ಲಿ ತೇಲಾಡಿದ ವಿಡಿಯೋವೊಂದು ವೈರಲ್​ ಆಗಿದ್ದು ಇಂದಿನ ಯುವ ಪೀಳಿಗೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಅನುಮಾನ ಪಡುವಂತಾಗಿದೆ.

ಕಾಲೇಜು ಕ್ಯಾಂಪಸ್​ನ ಮುಂಭಾಗದಲ್ಲಿ ವಿದ್ಯಾರ್ಥಿಗಳು ನಿಂತಿಕೊಳ್ಳಲು ಆಗದ ಪರಿಸ್ಥಿತಿಯಲ್ಲಿ ನಶೆಯಲ್ಲಿ ತೇಲಾಡಿದ್ದಾರೆ. ಮೇಲ್ನೋಟಕ್ಕೆ ವಿದ್ಯಾರ್ಥಿಗಳು ಗಾಂಜಾ ಸೇವನೆ ಮಾಡಿರಬಹುದೇ ಎಂಬ ಅನುಮಾನ ಮೂಡಿದೆ. ವಿದ್ಯಾರ್ಥಿಗಳು ನಿಂತುಕೊಳ್ಳುವ ಸಾಮರ್ಥ್ಯವೂ ಇಲ್ಲದಂತೆ ತೇಲಾಡಿದ್ದಾರೆ. ಓರ್ವ ವಿದ್ಯಾರ್ಥಿಯಂತು ಫುಟ್​ಪಾತ್​ನಲ್ಲಿ ಮಕಾಡೆ ಮಲಗಿದ್ದಾನೆ.

57 ಸೆಕೆಂಡುಗಳ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಎರಡು ಹೆಜ್ಜೆ ಸಾಗುವುದರೊಳಗಾಗಿ ವಿದ್ಯಾರ್ಥಿ ಬೀಳುತ್ತಾನೆ. ಈತನನ್ನು ಹಿಡಿದುಕೊಳ್ಳಲು ಬಂದ ಸಹಪಾಠಿಯ ಮಾತುಗಳನ್ನೂ ಕೇಳದೇ ಆತ ನಡೆದುಕೊಂಡು ಹೋಗುತ್ತಾನೆ. ಕಾಲೇಜು ಗೇಟಿನ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು ಈ ವಿಡಿಯೋದಲ್ಲಿ ಖಾಸಗಿ ಕಾಲೇಜಿನ ಟ್ಯಾಗ್​ಲೈನ್​ ಕಾಣುತ್ತಿದೆ.

ಈ ಸಂಬಂಧ ಪೊಲೀಸ್​ ಇಲಾಖೆ ಪ್ರಕಟಣೆಯನ್ನು ಹೊರಡಿಸಿದ್ದು ವಿದ್ಯಾರ್ಥಿಗಳು ಸಾಗರ ರಸ್ತೆಯ ಬಾರ್​ನಲ್ಲಿ ಮದ್ಯ ಸೇವನೆ ಮಾಡಿದ್ದಾರೆ. ವಿದ್ಯಾರ್ಥಿಗಳು ಬಸ್​ ಹತ್ತಲು ಬಂದ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಹಿಡಿಯಲಾಗಿದೆ. ವಿದ್ಯಾರ್ಥಿಗಳ ಪೋಷಕರು ಹಾಗೂ ಕಾಲೇಜು ಆಡಳಿತ ಮಂಡಳಿ ಈ ಸಂಬಂಧ ಚರ್ಚೆ ನಡೆಸಲಿದ್ದಾರೆ ಎಂದು ಪೊಲೀಸ್​ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.

ಇದನ್ನು ಓದಿ : Rishabh Pant helped Cricket Australia : ರಿಷಭ್ ಪಂತ್ ಕಾರಣದಿಂದ ಕ್ರಿಕೆಟ್ ಆಸ್ಟ್ರೇಲಿಯಾ ಖಜಾನೆಗೆ ಕೋಟಿ ಕೋಟಿ ದುಡ್ಡು.. ಹೇಗೆ ಗೊತ್ತಾ?

ಇದನ್ನೂ ಓದಿ : BS Yediyurappa Return : ರಾಜಾಹುಲಿ ರಿಟರ್ನ್ಸ್ ಗೆ ಶಾಸಕರ ಕಸರತ್ತು: ಬಿಜೆಪಿಯಲ್ಲಿ ಸಹಿ ಸಂಗ್ರಹ ಅಭಿಯಾನ

ಇದನ್ನೂ ಓದಿ : Katrina Kaif : ಕತ್ರಿನಾ ಕೈಫ್​ಗೆ ಬೆದರಿಕೆಯೊಡ್ಡಿದ್ದ ಆರೋಪಿ ಬಂಧನ: ಕತ್ರಿನಾರನ್ನು ಮದುವೆಯಾಗೋದು ನನ್ನಾಸೆ ಎಂದ ಆರೋಪಿ

children are being victimized by the drug world video goes viral

Comments are closed.