ಬೆಂಗಳೂರು: RCB New sponsor : ರಾಯಲ್ ಚಾಲೆಂಜರ್ಸ್ ಬೆಂಗಳೂರು ( Royal Challengers Bangalore) ಇಂಡಿಯನ್ ಪ್ರೀಮಿಯರ್ ಲೀಗ್- ಐಪಿಎಲ್’ನ (IPL) ಅತ್ಯಂತ ಜನಪ್ರಿಯ ತಂಡ. ಕಳೆದ 15 ವರ್ಷಗಳಲ್ಲಿ ಒಮ್ಮೆಯೂ ಕಪ್ ಗೆಲ್ಲದೇ ಇದ್ದರೂ, ರಾಯಲ್ ಚಾಲೆಂಜರ್ಸ್’ನ ಜನಪ್ರಿಯತೆ ಕೊಂಚವೂ ಕಮ್ಮಿಯಾಗಿಲ್ಲ. ದಿಗ್ಗಜ ಆಟಗಾರರನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್’ನ ಹೆವಿವೇಟ್ ತಂಡಗಳಲ್ಲೊಂದು . ಇಂತಹ ಹೆವಿವೇಟ್ ತಂಡ ಇದೀಗ 75 ಕೋಟಿಗಳ ಮೆಗಾ ಡೀಲ್’ಗೆ ಸಹಿ ಹಾಕಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ಟೈಟಲ್ ಸ್ಪಾನ್ಸರ್ ಸಿಕ್ಕಿದ್ದು, ಆ ಸ್ಪಾನ್ಸರ್’ಷಿಪ್ ಮೂಲಕ ಬರೋಬ್ಬರಿ 75 ಕೋಟಿ ರೂಪಾಯಿ ಆರ್’ಸಿಬಿ ಬೊಕ್ಕಸ ಸೇರಲಿದೆ. ಇದು ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿ ಇತಿಹಾಸದಲ್ಲೇ ಅತ್ಯಂತ ದೊಡ್ಡ ಡೀಲ್. ಅಂದ ಹಾಗೆ RCB ತಂಡದ ಹೊಸ ಟೈಟಲ್ ಸ್ಪಾನ್ಸರ್ (RCB New sponsor) ಆಗಲಿರುವುಗು ಕತಾರ್ ಏರ್ ವೇಸ್ (Qatar Airways).
ಕತಾರ್ ಏರ್ ವೇಸ್ ಜೊತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 3 ವರ್ಷಗಳಿಂದ ಒಟ್ಟು 75 ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿದೆ. ಈ ಮೂರು ವರ್ಷ ಗಳಲ್ಲಿ ಕತಾರ್ ಏಲ್ ವೇಸ್ RCB ತಂಡದ ಮುಖ್ಯ ಪ್ರಾಯೋಜಕತ್ವ ಹೊಂದಲಿದೆ. ಕತಾರ್ ಏರ್ ವೇಸ್ (Qatar Airways) ಈಗಾಗಲೇ ಜಗತ್ತಿನ ಅತ್ಯಂತ ಜನಪ್ರಿಯ ಫುಟ್ಬಾಲ್ ಕ್ಲಬ್ ತಂಡವಾಗಿರುವ FC ಬಾರ್ಸಿಲೋನ ತಂಡದ ಟೈಟಲ್ ಸ್ಪಾನ್ಸರ್’ಷಿಪ್ ಹೊಂದಿದೆ. ಅಷ್ಟೇ ಅಲ್ಲ, ಅರ್ಜೆಂಟೀನಾದ ಫುಟ್ಬಾಲ್ ಸೂಪರ್ ಸ್ಟಾರ್ ಲಯನಲ್ ಮೆಸ್ಸಿ ಪ್ರತಿನಿಧಿಸುವ PSG ತಂಡಕ್ಕೂ ಪ್ರಾಯೋಜಕತ್ವ ಹೊಂದಿತ್ತು. ಇದೀಗ ಕ್ರಿಕೆಟ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಪ್ರತಿನಿಧಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಕತಾರ್ ಏರ್ ವೇಸ್ ಟೈಟಲ್ ಸ್ಟಾನ್ಸರ್ ಆಗಿರುವುದು ವಿಶೇಷ.
ಐಪಿಎಲ್’ನಲ್ಲಿ ಅತೀ ಹೆಚ್ಚಿನ ಸ್ಪಾನ್ಸರ್’ಷಿಪ್ ಮೊತ್ತದ ದಾಖಲೆ ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡದ ಹೆಸರಲ್ಲಿದೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸ್ಲೈಸ್ (Slice) ಜೊತೆ ಈ ಹಿಂದೆ 90 ಕೋಟಿ ಮೊತ್ತದ ಒಪ್ಪಂದ ಮಾಡಿಕೊಂಡಿತ್ತು.
ಇದನ್ನೂ ಓದಿ : Japrit Bumrah : ವೇಗಿ ಜಸ್‌ಪ್ರೀತ್ ಬುಮ್ರಾಗೆ ನ್ಯೂಜಿಲೆಂಡ್‌ನಲ್ಲಿ ಶಸ್ತ್ರಚಿಕಿತ್ಸೆ, ಏಳು ತಿಂಗಳು ಕ್ರಿಕೆಟ್‌ನಿಂದ ಔಟ್