ಬೆಂಗಳೂರು: (Prithvi Shaw meets Kiccha Sudeep) ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಅವರಿಗೆ ಕ್ರಿಕೆಟ್ ನಂಟು ಇವತ್ತು ನಿನ್ನೆಯದ್ದಲ್ಲ. ಸೆಲೆಬ್ರಿಟಿ ಕ್ರಿಕೆಟ್ ಲೀಗ್’ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಕಟ್ಟಿ ಬೆಳೆಸಿರುವ ಕಿಚ್ಚ ಸುದೀಪ್, ಕನ್ನಡ ಚಲನಚಿತ್ರ ಕಪ್ (KCC) ಟೂರ್ನಿಯನ್ನು ಆಯೋಜಿಸಿ ಅಂತರಾಷ್ಟ್ರೀಯ ಆಟಗಾರರನ್ನು ಕರೆಸಿ ಸೈ ಎನಿಸಿಕೊಂಡವರು. ಇತ್ತೀಚೆಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೆಸಿಸಿ 3ನೇ ಆವೃತ್ತಿಯ ಟೂರ್ನಿಯಲ್ಲಿ ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್, ವೆಸ್ಟ್ ಇಂಡೀಸ್ ದಿಗ್ಗಜ ಬ್ರಯಾನ್ ಲಾರಾ, ಭಾರತದ ಸುರೇಶ್ ರೈನಾ, ಸುಬ್ರಮಣ್ಯಮ್ ಬದ್ರಿನಾಥ್, ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ ಮತ್ತು ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಪಾಲ್ಗೊಂಡಿದ್ದರು.
ಸಿನಿಮಾ ಜೊತೆ ಕ್ರಿಕೆಟ್’ನಲ್ಲೂ ಸದ್ದು ಮಾಡುತ್ತಿರುವ ಕಿಚ್ಚ ಸುದೀಪ್ ಇತ್ತೀಚೆಗೆ ಅಂತರಾಷ್ಟ್ರೀಯ ಕ್ರಿಕೆಟಿಗರನ್ನು ಭೇಟಿಯಾಗುತ್ತಿದ್ದಾರೆ. ಕೆಲ ವಾರಗಳ ಹಿಂದೆ ಟೀಮ್ ಇಂಡಿಯಾದ ಮಾಜಿ ಓಪನರ್, ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಮತ್ತು ಕೇರಳದ ವಿಕೆಟ್ ಕೀಪರ್ ಬ್ಯಾಟ್’ಮನ್, ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್, ಕಿಚ್ಚ ಸುದೀಪ್ ಅವರನ್ನು ಅವರ ಮನೆಯಲ್ಲೇ ಭೇಟಿ ಮಾಡಿದ್ದರು. ಇದೀಗ ಟೀಮ್ ಇಂಡಿಯಾದ ಮತ್ತೊಬ್ಬ ಕ್ರಿಕೆಟಿಗ ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ. ಅವರು ಬೇರಾರೂ ಅಲ್ಲ, 2018ರ ಐಸಿಸಿ ಅಂಡರ್-19 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಪೃಥ್ವಿ ಶಾ (Prithvi Shaw).
ನಟ ಸುದೀಪ್ ಅವರ ಜೊತೆಗಿನ ಭೇಟಿಯ ಚಿತ್ರಗಳನ್ನು ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಪೃಥ್ವಿ ಶಾ, ಕಿಚ್ಚನ ಭೇಟಿಯ ಸಂತಸವನ್ನು ನಾಲ್ಕು ಸಾಲುಗಳಲ್ಲಿ ಹಂಚಿಕೊಂಡಿದ್ದಾರೆ. “ಈ ದಿಗ್ಗಜನ ಜೊತೆ ಸ್ವಲ್ಪ ಸಮಯ ಕಳೆದದ್ದು ತುಂಬಾ ಸಂತಸ ತಂದಿದೆ. ಕಿಚ್ಚ ಸುದೀಪ್ ಅವರೊಂದಿಗೆ ಮೌಲ್ಯಯುತ ಮತ್ತು ಹೃದಯಸ್ಪರ್ಶಿ ಮಾತುಕತೆ ನಡೆದಿದೆ. ಅವರೊಬ್ಬ ಅದ್ಭುತ ಮನುಷ್ಯ” ಎಂದು ಪೃಥ್ವಿ ಶಾ ಇನ್’ಸ್ಟಾಗ್ರಾಮ್’ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸರುವ ಕಿಚ್ಚ ಸುದೀಪ್, “ನಿಮಗೆ ನನ್ನ ಕಡೆಯಿಂದ ಇನ್ನೂ ಹೆಚ್ಚಿನ ಪ್ರೀತಿಯನ್ನು ಕಳುಹಿಸುತ್ತಿದ್ದೇನೆ” ಎಂದು ಇನ್’ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : MS Dhoni : ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಕ್ಯಾಪ್ಟನ್ ಕೂಲ್ ಧೋನಿ ಹವಾ, ಮಹಿಳಾ ಮಣಿಗಳಿಗೆ ಮಾಹಿಯೇ ದ್ರೋಣಾಚಾರ್ಯ
ಇದನ್ನೂ ಓದಿ : DRS in IPL: ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಸಕ್ಸಸ್, ಐಪಿಎಲ್‌ಗೂ ಬರಲಿದೆ ಹೊಸ ರೂಲ್ಸ್
ಇದನ್ನೂ ಓದಿ : Ellyse Perry : ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲೂ ಆಡಿದ್ದಾಳೆ ರಾಯಲ್ ಚಾಲೆಂಜರ್ಸ್ ತಂಡದ ಈ ಮೋಹಕ ಚೆಲುವೆ
Prithvi Shaw meets Kiccha Sudeep: Prithvi Shaw met Kiccha Sudeep, a Mumbaikar shared his happiness on Instagram.