Department of Health GuideLines: ನೀರು ಕುಡಿಯಿರಿ, ಅನಗತ್ಯ ಓಡಾಟ ತಪ್ಪಿಸಿ: ಬಿಸಿಗಾಳಿ ಎಫೆಕ್ಟ್ ತಡೆಯಲು ಆರೋಗ್ಯ ಇಲಾಖೆ ಗೈಡ್ ಲೈನ್ಸ್

ಬೆಂಗಳೂರು: (Department of Health GuideLines) ರಾಜ್ಯ ಹಾಗೂ ರಾಜ್ಯಧಾನಿಯಲ್ಲಿ ಬಿರುಬೇಸಿಗೆ ತನ್ನ ಪ್ರತಾಪ ತೋರಲಾರಂಭಿಸಿದೆ. ಕೇವಲ ಬೇಸಿಗೆ ಮಾತ್ರವಲ್ಲದೇ ಬಿಸಿಗಾಳಿ ಪ್ರಭಾವವೂ ಹೆಚ್ಚಿದ್ದು, ಬೇಸಿಗೆ ಕಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಗೈಡಲೈನ್ಸ್ ಹೊರಡಿಸಿದ್ದು ಉಷ್ಣಾಂಶದಿಂದ ನಾನಾ ರೀತಿಯ ಅನಾರೋಗ್ಯಕ್ಕೆ ತುತ್ತಾಗುವ ಸಂಭವವಿರೋದರಿಂದ ಎಚ್ಚರಿಕೆ ವಹಿಸುವಂತೆ ಬೇಸಿಗೆ ಗೈಡ್ ಲೈನ್ಸ್ ನಲ್ಲಿ ಸೂಚಿಸಲಾಗಿದೆ.

ಹಾಗಿದ್ದರೇ ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿದ ಬೇಸಿಗೆ ಮುನ್ನೆಚ್ಚರಿಕೆ ಅಂಶಗಳಲ್ಲಿ ಏನಿದೆ ಅನ್ನೋದನ್ನು ಗಮನಿಸೋದಾದರೇ,

• ಬಾಯಾರಿಕೆ ಇಲ್ಲದಿದ್ದರೂ ಪದೇ ಪದೇ ನೀರು ಕುಡಿಯಬೇಕು
• ಪ್ರಯಾಣ ಸಮಯದಲ್ಲೂ ನೀರು ತೆಗೆದುಕೊಂಡು ಹೋಗಬೇಕು
• ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಬೇಕು
• ಕಾಟನ್ ಬಟ್ಟೆ ಧರಿಸುವುದು ಉತ್ತಮ
• ಮಧ್ಯಾಹ್ನ 12 ರಿಂದ 3ರ ವರೆಗಿನ ಬಿಸಿಲಿಗೆ ಹೊರಗಡೆ ಓಡಾಡಬಾರದು
• ಸಾಧ್ಯವಾದಷ್ಟು ಮನೆಯ ಕಿಟಕಿಗಳನ್ನು ಓಪನ್ ಮಾಡಿಡಿ
• ಅಡುಗೆ ಕೋಣೆಗೆ ವೆಂಟಿಲೇಷನ್ ಖಚಿತಪಡಿಸಿಕೊಳ್ಳಿ
• ಹೊರಗಡೆ ಕೆಲಸ ಮಾಡುವವರು ಪ್ರತಿ 20 ನಿಮಿಷಕ್ಕೊಮ್ಮೆ ಬಾಯಾರಿಕೆ ಇಲ್ಲದಿದ್ದರೂ ನೀರು ಕುಡಿಯಬೇಕು
• ಮಕ್ಕಳು, ವೃದ್ಧರು, ಸಾಕು ಪ್ರಾಣಿಗಳನ್ನು ಕಾರಿನ ಒಳಗೆ ಕೂರಿಸಿ ಹೊರಗಿಂದ ಲಾಕ್ ಮಾಡಬಾರದು
• ಟೀ, ಕಾಫಿ, ಮಧ್ಯ ಸೇವಿಸುವುದನ್ನು ಅವಾಯ್ಡ್ ಮಾಡಿ
• ಗರ್ಭಿಣಿ ಮಹಿಳೆಯರು, ಮಕ್ಕಳು, ಬಿಸಿಲಿಗೆ ಕೆಲಸ ಮಾಡುವ ಕಾರ್ಮಿಕರು, ಕಾರು ಚಾಲಕರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಲಾಗಿದೆ.

ಬೇಸಿಗೆ ಎಫೆಕ್ಟ್ ನಿಂದ ಜನರಿಗೆ ನಿರ್ಜಲೀಕರಣದಂತಹ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ‌‌. ಮಾತ್ರವಲ್ಲದೇ ಜನರು ಜ್ವರ,ಗಂಟಲುನೋವು,ಅತಿಸಾರದಂತಹ ಸಮಸ್ಯೆಗಳನ್ನು ಎದುರಿಸುವ ಸ್ಥಿತಿ ಇರೋದರಿಂದ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಮಾತ್ರವಲ್ಲದೇ ದೇಶ ಹಾಗೂ ರಾಜ್ಯಕ್ಕೆ H3N2 ಭೀತಿಯೂ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯಗೊಳಿಸಿ ಸರ್ಕಾರ ಆದೇಶಿಸಿದೆ‌ ‌ ಅಲ್ಲದೇ, ಜನರು ಕೂಡ ಮಾಸ್ಕ್ ಧರಿಸುವುದು, ಬಿಸಿನೀರಿನ ಸೇವನೆ ಅಭ್ಯಾಸ ಬೆಳೆಸಿಕೊಳ್ಳುವಂತೆಯೂ ಆರೋಗ್ಯ ಇಲಾಖೆ ಸೂಚಿಸಿದೆ.

ಇದನ್ನೂ ಓದಿ : Weather update: ಕರಾವಳಿಯಲ್ಲಿ ತಾಪಮಾನ ಹೆಚ್ಚಳ : ಮಂಗಳೂರಲ್ಲಿ ಬೀಸಿದ ಬಿಸಿಗಾಳಿ

ಇದನ್ನೂ ಓದಿ : Ticket apps on tourist place: ಉತ್ತರ ಕನ್ನಡ ಪ್ರವಾಸಿ ತಾಣಗಳ ಟಿಕೆಟ್‌ ಸಮಸ್ಯೆ ಬಗೆಹರಿಸಲು ಹೊಸ ಪ್ಲ್ಯಾನ್‌

ಇದನ್ನೂ ಓದಿ : H3N2 guideline: H3N2 ಮಾಹಾಮಾರಿ ಆತಂಕ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

Department of Health GuideLines: Drink Water, Avoid Unnecessary Movement: Health Department Guidelines to Avoid Heatstroke Effect

Comments are closed.