“ಕಬ್ಜ” ಬಿಡುಗಡೆಗೂ ಮುನ್ನವೇ ಪಾರ್ಟ್‌ 2 ಬಗ್ಗೆ ಕನ್ಫರ್ಮ್ ಮಾಡಿದ ಆರ್‌ ಚಂದ್ರು

(Kabza part-2) ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಪ್ಯಾನ್‌ ಇಂಡಿಯಾ ಸಿನಿಮಾದೇ ಹಾವಳಿ ಎದ್ದಿದೆ. ಕಳೆದ ವರ್ಷ ಭಾರತೀಯ ಸಿನಿರಂಗವೇ ತಿರುಗಿ ನೋಡುವಂತೆ ಸ್ಯಾಂಡಲ್‌ವುಡ್‌ನಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾ ಬಿಡುಗಡೆಯಾಗಿ ಅಬ್ಬರಿಸಿದೆ. ಕಳೆದ ವರ್ಷ ಪ್ರಾರಂಭದಲ್ಲಿ “ಕೆಜಿಎಫ್ 2”, ‘777 ಚಾರ್ಲಿ’, ‘ವಿಕ್ರಾಂತ್ ರೋಣ’ ಹಾಗೂ ಕಾಂತರದಂತಹ ಸಿನಿಮಾಗಳು ಕನ್ನಡ ಸಿನಿರಂಗದ ಬಾಕ್ಸ್‌ ಆಫೀಸ್‌ನಲ್ಲಿ ಸಖತ್‌ ಸದ್ದು ಮಾಡಿರುತ್ತದೆ. ಕಳೆದ ವರ್ಷದಂತೆ ಈ ವರ್ಷ ಕೂಡ ಸ್ಯಾಂಡಲ್‌ವುಡ್‌ಗೆ ಅದೃಷ್ಟ ತಂದು ಕೊಡಬಹುದೇ ಎನ್ನುವುದು ವಿಮರ್ಶಕರ ವಿಮರ್ಶೆ ಆಗಿರುತ್ತದೆ. ಇದರ ಬೆನ್ನಲ್ಲೇ ಈ ವರ್ಷದ ಮೊದಲ ಪ್ಯಾನ್‌ ಇಂಡಿಯಾ ಸಿನಿಮಾವಾಗಿ ನಟ ಉಪೇಂದ್ರ ಅಭಿನಯದ “ಕಬ್ಜ” ರಿಲೀಸ್‌ಗೆ ರೆಡಿಯಾಗಿದೆ. ಅದಕ್ಕೂ ಮುನ್ನವೇ ನಿರ್ದೇಶಕ ಆರ್‌. ಚಂದ್ರು ‘ಕಬ್ಜ 2’ಗೆ ತಯಾರಿ ನಡೆಸಿದ್ದಾರೆ ಎನ್ನುವ ಗುಸು ಗುಸು ಹರಿದಾಡುತ್ತಿದೆ.

ಹೌದು ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ “ಕಬ್ಜ” ರಿಲೀಸ್‌ ದಿನಕ್ಕಾಗಿ ಅಭಿಮಾನಿಗಳು ಜಾತಕಪಕ್ಷಿಯಂತೆ ಕಾತುರದಿಂದ ಕಾದಿದ್ದಾರೆ. ಈ ಬೆನ್ನಲ್ಲೇ ಶಿವರಾಜ್‌ಕುಮಾರ್ ಸಿನಿಮಾದ ಡಬ್ಬಿಂಗ್ ವೇಳೆ, ಕಬ್ಜ 2 ಬಗ್ಗೆ ಮಾಧ್ಯಮಗಳಿಗೆ ರಿವೀಲ್ ಮಾಡಿದ್ದರು. ‘ಕಬ್ಜ’ ಪಾರ್ಟ್ 2ನಲ್ಲಿ ಶಿವಣ್ಣನ ಪಾತ್ರವೇ ಕಥೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತೆ ಎಂದಿದ್ದಾರೆ. ” ನನ್ನ ಪಾತ್ರದ ಮೂಲಕವೇ ಕಥೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕು ಅಂತ ನಿರ್ದೇಶಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆದರೆ, ಇದು ಹೇಗೆ ಅನ್ನೋದು ಇನ್ನೂ ಚರ್ಚೆಯಾಗಬೇಕಿದೆ.” ಎಂದು ಶಿವಣ್ಣ ಪ್ರತಿಕ್ರಿಯೆ ನೀಡಿದ್ದರು. ಹೀಗಾಗಿ ‘ಕಬ್ಜ 2’ ಸೆಟ್ಟೇರುವುದಂತೂ ‘ಕಬ್ಜ’ ಬಿಡುಗಡೆಗೂ ಮುನ್ನವೇ ಕನ್ಫರ್ಮ್ ಆಗಿದೆ.

ಹಾಗಿದ್ದರೆ, ಉಪೇಂದ್ರ, ಕಿಚ್ಚ ಸುದೀಪ್, ಶಿವರಾಜ್‌ಕುಮಾರ್ ಮೂವರು ದಿಗ್ಗಜರು ‘ಕಬ್ಜ 2’ನಲ್ಲಿ ಇರುತ್ತಾರಾ? ಅಥವಾ ಇಲ್ವಾ? ಅನ್ನೋ ಪ್ರಶ್ನೆ ಸಹಜವಾಗಿಯೇ ಎದ್ದಿದೆ. ಈ ಪ್ರಶ್ನೆಗೆ ‘ಕಬ್ಜ’ ಸಿನಿಮಾದ ಕ್ಲೈಮ್ಯಾಕ್ಸ್ ಉತ್ತರ ಕೊಡಲಿದೆ. ಮೂವರ ಪಾತ್ರ ಕ್ಲೈಮ್ಯಾಕ್ಸ್‌ನಲ್ಲಿ ಏನಾಗುತ್ತೆ? ಅನ್ನೋದು ಮುಂದಿನ ಕತೆಗೆ ನಾಂದಿ ಹಾಡಲಿದೆ. ಅಷ್ಟಕ್ಕೂ ಆರ್‌ ಚಂದ್ರು, ಬಾಲಿವುಡ್‌ ಸೂಪರ್‌ಸ್ಟಾರ್ ಜೊತೆ ಮಾತುಕತೆ ನಡೆಸುತ್ತಿರೋದು ಸತ್ಯ ಅನ್ನೋ ಮಾತು ಬಲ್ಲ ಮೂಲಗಳೇ ತಿಳಿಸಿವೆ. ಎಲ್ಲದಕ್ಕೂ ಮೊದಲು ಆರ್ ಚಂದ್ರು ‘ಕಬ್ಜ 2’ನಲ್ಲಿ ಯಾವ ಬಾಲಿವುಡ್‌ ನಟನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ರಿವೀಲ್ ಮಾಡಬೇಕಿದೆ.

ಇದನ್ನೂ ಓದಿ : “ಕಬ್ಜ” ಸಿನಿಮಾ ಟ್ರೈಲರ್‌ : ಡಬ್ಬಲ್‌ ಶೇಡ್‌ನಲ್ಲಿ ಕಾಣಿಸಿಕೊಂಡ ರಿಯಲ್‌ ಸ್ಟಾರ್

Kabza part-2: R Chandru confirmed about the part 2 of “Kabza” before its release.

Comments are closed.