Rahul Dravid: “ರಾಹುಲ್ ದ್ರಾವಿಡ್ ಅಲ್ಲ ರಾಹುಲ್ ‘ಡೇವಿಡ್’..” ದಿ ಗ್ರೇಟ್ ವಾಲ್ ಬಿಚ್ಚಿಟ್ಟ “ಹೆಸರು” ರಹಸ್ಯ

ಬೆಂಗಳೂರು: (Rahul David not Rahul Dravid) ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್ (Rahul Dravid) ಕ್ರಿಕೆಟ್ ಜಗತ್ತಿನ ಜಂಟಲ್’ಮ್ಯಾನ್ ಕ್ರಿಕೆಟರ್. ಟೀಮ್ ಇಂಡಿಯಾದ ಹಾಲಿ ಕೋಚ್ ಕೂಡ ಆಗಿರುವ ದ್ರಾವಿಡ್ ಭಾರತದಲ್ಲಷ್ಟೇ ಅಲ್ಲದೆ, ಕ್ರಿಕೆಟ್ ಜಗತ್ತಿನಾದ್ಯಂತ ಗೌರವವನ್ನು ಸಂಪಾದಿಸಿದ ದಿಗ್ಗಜ ಆಟಗಾರ. ಭಾರತ ತಂಡದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್’ಮನ್ ಆಗಿದ್ದ ದ್ರಾವಿಡ್, ನಿವೃತ್ತಿಯ ನಂತರ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಟೀಮ್ ಇಂಡಿಯಾಗೆ ಯುವ ಆಟಗಾರರನ್ನು ಸಿದ್ಧ ಪಡಿಸುವ ಜವಾಬ್ದಾರಿ ವಹಿಸಿಕೊಂಡಿದ್ದರು.

ಅತ್ಯಂತ ಸಭ್ಯ, ಸಂಭಾವಿತ ಹಾಗೂ ಸರಳ ವ್ಯಕ್ತಿತ್ವದ ದ್ರಾವಿಡ್, ತಮ್ಮ ಶಾಲಾ ದಿನಗಳಲ್ಲಿ ನಡೆದ ಕುತೂಹಲಕಾರಿ ಘಟನೆಯೊಂದನ್ನು ಒಲಿಂಪಿಕ್ ಚಿನ್ನದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ ಜೊತೆಗಿನ In the Zone ಪಾಡ್’ಕಾಸ್ಟ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ (podcast In the Zone with Olympic gold medal-winning shooter Abhinav Bindra). ಶಾಲಾ ಟೂರ್ನಿಯೊಂದರಲ್ಲಿ ದ್ರಾವಿಡ್ ಶತಕ ಬಾರಿಸಿದ್ದಾಗ, ಪತ್ರಿಕೆಯೊಂದು ದ್ರಾವಿಡ್ ಅವರ ಹೆಸರನ್ನು “ಡೇವಿಡ್“ ಎಂದು ತಪ್ಪಾಗಿ ಪ್ರಕಟಿಸಿತ್ತಂತೆ.

“ಈ ಸುದ್ದಿ ಪತ್ರಿಕೆಯ ಸಂಪಾದಕ ನನ್ನ ಹೆಸರಿನಲ್ಲಿ ಖಚಿಕವಾಗಿ ಸ್ಪೆಲ್ಲಿಂಗ್ ಮಿಸ್ಟೇಕ್ ಇರಬಹುದೆಂದು ಭಾವಿಸಿದ್ದಿರಬೇಕು. “ದ್ರಾವಿಡ್” ಎಂಬ ಹೆಸರಿನಲ್ಲಿ ಯಾರೂ ಇರಲಾರರು, ಹೀಗಾಗಿ ಇದು “ಡೇವಿಡ್” ಇರಬೇಕೆಂದು ಭಾವಿಸಿ, ನನ್ನ ಹೆಸರನ್ನು “ರಾಹುಲ್ ದ್ರಾವಿಡ್” ಬದಲಾಗಿ “ರಾಹುಲ್ ಡೇವಿಡ್” ಎಂಬುದಾಗಿ ಪ್ರಕಟಿಸಿದ್ದರು. ನನ್ನ ಹೆಸರು ದ್ರಾವಿಡ್ ಎಂದು ನಂಬಲು ಅವರು ತಯಾರಿರಲಿಲ್ಲ, ಹೀಗಾಗಿ ಡೇವಿಡ್ ಎಂದು ಬದಲಿಸಿದರು” ಎಂದು ದ್ರಾವಿಡ್ ಶಾಲಾ ದಿನಗಳ ಘಟನೆಯನ್ನು ಮೆಲುಕು ಹಾಕಿದ್ದಾರೆ. ಈ ಇಂಟ್ರೆಸ್ಟಿಂಗ್ ಪಾಡ್’ಕಾಸ್ಟ್ ಸಂಭಾಷಣೆಯನ್ನ ಸ್ವತಃ ಅಭಿನವ್ ಬಿಂದ್ರಾ ಅವರೇ ತಮ್ಮ ಟ್ವಿಟರ್”ನಲ್ಲಿ ಹಂಚಿಕೊಂಡಿದ್ದಾರೆ.

“ಆ ಘಟನೆ ನನಗೆ ದೊಡ್ಡ ಪಾಠ ಕಲಿಸಿತು. ನಾನು ಶಾಲಾ ಟೂರ್ನಿಯಲ್ಲಿ ಶತಕ ಬಾರಿಸಿದರೂ ನನ್ನ ಹೆಸರೇನು ಎಂಬುದು ಜನರಿಗೇ ಗೊತ್ತೇ ಇರಲಿಲ್ಲ. ಇದು ನಾನು ಆ ಘಟನೆಯಿಂದ ಕಲಿತ ಪಾಠ” ಎಂದು ದ್ರಾವಿಡ್ ಹೇಳಿದ್ದಾರೆ.

ರಾಹುಲ್ ದ್ರಾವಿಡ್ ಭಾರತ ಪರ ಟೆಸ್ಟ್ ಕ್ರಿಕೆಟ್”ನಲ್ಲಿ 2ನೇ ಅತೀ ಹೆಚ್ಚು ರನ್”ಗಳ ಸರದಾರನಾಗಿ ಕ್ರಿಕೆಟ್’ನಿಂದ ನಿವೃತ್ತಿಯಾಗಿದ್ದರು. ಏಕದಿನ ಕ್ರಿಕೆಟ್’ನಲ್ಲೂ ದ್ರಾವಿಡ್ 10,000+ ರನ್’ಗಳ ಅಮೋಘ ಸಾಧನೆ ಮಾಡಿದ್ದರು. ಟೆಸ್ಟ್ ಹಾಗೂ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್”ನಲ್ಲಿ 10 ಸಾವಿರ ಕ್ಲಬ್ ಸೇರಿದ ಜಗತ್ತಿನ ಕೆಲವೇ ಕೆಲವು ಕ್ರಿಕೆಟಿಗರಲ್ಲಿ ರಾಹುಲ್ ದ್ರಾವಿಡ್ ಕೂಡ ಒಬ್ಬರು.

ಇದನ್ನೂ ಓದಿ : MS Dhoni Issued Notice ಎಂ.ಎಸ್​ ಧೋನಿಗೆ ‘ಸುಪ್ರೀಂ’ನಿಂದ ನೋಟಿಸ್​ : ಏನಿದು ಆಮ್ರಪಾಲಿ ಪ್ರಕರಣ, ಇಲ್ಲಿದೆ ಮಾಹಿತಿ

ಇದನ್ನೂ ಓದಿ : Exclusive : KL Rahul out of West Indies T20s : ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಿಂದ ಕೆ.ಎಲ್ ರಾಹುಲ್ ಔಟ್

Rahul David not Rahul Dravid, Name mystery revealed by The Great Wall

Comments are closed.