Dravid to resign as India’s coach: ಭಾರತ ತಂಡದ ಕೋಚ್ ಸ್ಥಾನಕ್ಕೆ ಗುಡ್ ಬೈ ಹೇಳಲಿದ್ದಾರೆ ರಾಹುಲ್ ದ್ರಾವಿಡ್, ಮುಹೂರ್ತ ಫಿಕ್ಸ್!

Indian cricket team coach Rahul Dravid: ಬೆಂಗಳೂರು: 2021ರಲ್ಲಿ ಭಾರತ ತಂಡದ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದ “ದಿ ಗ್ರೇಟ್ ವಾಲ್ ಆಫ್ ಇಂಡಿಯಾ” ಖ್ಯಾತಿಯ ರಾಹುಲ್ ದ್ರಾವಿಡ್ (Rahul Dravid), ಸದ್ಯದಲ್ಲೇ ಟೀಮ್ ಇಂಡಿಯಾ ಕೋಚ್ ಹುದ್ದೆ ತೊರೆಯಲಿದ್ದಾರೆ.

Indian cricket team coach Rahul Dravid: ಬೆಂಗಳೂರು: 2021ರಲ್ಲಿ ಭಾರತ ತಂಡದ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದ “ದಿ ಗ್ರೇಟ್ ವಾಲ್ ಆಫ್ ಇಂಡಿಯಾ” ಖ್ಯಾತಿಯ ರಾಹುಲ್ ದ್ರಾವಿಡ್ (Rahul Dravid), ಸದ್ಯದಲ್ಲೇ ಟೀಮ್ ಇಂಡಿಯಾ ಕೋಚ್ ಹುದ್ದೆ ತೊರೆಯಲಿದ್ದಾರೆ. ಭಾರತ ತಂಡದ ಹೆಡ್ ಕೋಚ್ ಹುದ್ದೆಗೆ ದ್ರಾವಿಡ್ ಗುಡ್ ಬೈ ಹೇಳಲು ಮುಹೂರ್ತ ಫಿಕ್ಸ್ ಆಗಿದೆ.

Rahul dravid to resign as indian cricket team coach
Image credit to original source

51 ವರ್ಷದ ದ್ರಾವಿಡ್ 2021ರ ಐಸಿಸಿ ಟಿ20 ವಿಶ್ವಕಪ್ ಸೋಲಿನ ನಂತರ ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು. ದ್ರಾವಿಡ್ ಅವರ ಗರಡಿಯಲ್ಲಿ ಭಾರತ ತಂಡ 2023ರ ಐಸಿಸಿ ಏಕದಿನ ವಿಶ್ವಕಪ್ ಹಾಗೂ ಐಸಿಸಿ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಫೈನಲ್ ತಲುಪಿತ್ತು. ಆದರೆ ಫೈನಲ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು.

ಇದನ್ನೂ ಓದಿ :  Ganguly And Virat Kohli: ಮುನಿಸು ಮರೆತ ದಾದಾ, ಕಿಂಗ್: ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದ ಚಿನ್ನಸ್ವಾಮಿ !

ದ್ರಾವಿಡ್ ಕೇವಲ 2 ವರ್ಷಗಳ ಅವಧಿಗಷ್ಟೇ ಟೀಮ್ ಇಂಡಿಯಾ ಕೋಚ್ ಆಗಿ ನೇಮಗೊಂಡಿದ್ದರು. ಹೀಗಾಗಿ ಅವರ ಅವಧಿ ಕಳೆದ ವರ್ಷವೇ ಅಂತ್ಯಗೊಂಡಿತ್ತು. ಆದರೆ ಐಸಿಸಿ ಟಿ20 ವಿಶ್ವಕಪ್’ವರೆಗೆ ಭಾರತ ತಂಡದ ಕೋಚ್ ಆಗಿ ಮುಂದುವರಿಯುವಂತೆ ದ್ರಾವಿಡ್ ಅವರಲ್ಲಿ ಬಿಸಿಸಿಐ ಮನವಿ ಮಾಡಿತ್ತು.

ಇದನ್ನೂ ಓದಿ : Rohit Sharma Out Of Mumbai Indians: ಮುಂಬೈ ತಂಡದಿಂದ ರೋಹಿತ್ ಶರ್ಮಾಗೆ ಗೇಟ್ ಪಾಸ್ ಪಕ್ಕಾ? ಸೆಹ್ವಾಗ್ ಕೊಟ್ಟರಲ್ಲ “ದೊಡ್ಡ” ಸಂದೇಶ !

ಐಸಿಸಿ ಟಿ20 ವಿಶ್ವಕಪ್ (ICC T20 World Cup 2024) ಮುಗಿದ ಬೆನ್ನಲ್ಲೇ ದ್ರಾವಿಡ್ ಭಾರತ ತಂಡದ ಕೋಚ್ ಹುದ್ದೆ ತೊರೆಯಲಿದ್ದಾರೆ. ದ್ರಾವಿಡ್ ಅವರು ಕೋಚ್ ಆಗಿ ಪುನರಾಯ್ಕೆ ಬಯಸುವುದಾದರೆ ಅರ್ಜಿ ಸಲ್ಲಿಸಬಹುದು ಎಂದು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. ಆದರೆ ಮತ್ತೆ ಕೋಚ್ ಆಗಲು ದ್ರಾವಿಡ್ ಅವರಿಗೆ ಮನಸ್ಸಿಲ್ಲದ ಕಾರಣ ಅವರು ಅರ್ಜಿ ಸಲ್ಲಿಸುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ.

Rahul dravid to resign as indian cricket team coach
Image credit to original source

2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಭಾರತ ತಂಡ ನಿರಂತರ 11 ವರ್ಷಗಳಿಂದ ಐಸಿಸಿ ಟ್ರೋಫಿ ಗೆಲ್ಲಲು ವಿಫಲ ವಾಗುತ್ತಾ ಬಂದಿದೆ. ಹೀಗಾಗಿ ಈ ಬಾರಿಯ ಟಿ20 ವಿಶ್ವಕಪ್’ನಲ್ಲಿ ನಿರೀಕ್ಷೆಗಳು ಮತ್ತೆ ಗರಿಗೆದರಿದ್ದು, ದ್ರಾವಿಡ್ ತಮ್ಮ ಕೊನೆಯ ಅಸೈನ್ಮೆಂಟ್’ನಲ್ಲಿ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಲಿದ್ದಾರೆಯೇ ಎಂಬುದು ಕುತೂಹಲ ಕೆರಳಿಸಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಜೂನ್ 2ರಂದು ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಆರಂಭವಾಗಲಿದ್ದು, ಫೈನಲ್ ಪಂದ್ಯ ಜೂನ್ 29ರಂದು ನಡೆಯಲಿದೆ.

ಇದನ್ನೂ ಓದಿ :RCB Big Offer To KL Rahul: ಎಲ್ಲಾ ನಿನ್ನವರೇ.. ಇಲ್ಲಿ ಯಾರೂ ನಿನ್ನನ್ನು ಬೈಯುವವರಿಲ್ಲ.. ರಾಹುಲ್’ಗೆ ಹೀಗೊಂದು RCB ಆಫರ್..!

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಟಿ20 ವಿಶ್ವಕಪ್’ನಲ್ಲಿ ಜೂನ್ 5ರಂದು ತನ್ನ ಅಭಿಯಾನ ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಜೂನ್ 9ರಂದು ನ್ಯೂಯಾರ್ಕ್’ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ, ಕೆನಡಾ, ಅಮೆರಿಕ ಮತ್ತು ಐರ್ಲೆಂಡ್ ತಂಡಗಳ ಜೊತೆ ಗ್ರೂಪ್ ’ಎ’ನಲ್ಲಿ ಸ್ಥಾನ ಪಡೆದಿದೆ.

Rahul Dravid to resign as Indian cricket team coach

Comments are closed.