ಭಾನುವಾರ, ಏಪ್ರಿಲ್ 27, 2025
HomeSportsCricketರಣಜಿ ಸೆಮಿಫೈನಲ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಪಾನಿಪುರಿ ಹುಡುಗ

ರಣಜಿ ಸೆಮಿಫೈನಲ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಪಾನಿಪುರಿ ಹುಡುಗ

- Advertisement -

ಬೆಂಗಳೂರು : ಭಾರತ ತಂಡದ (Indian Cricket Team) ಪರ ಆಡುವುದು ಎಲ್ಲಾ ಕ್ರಿಕೆಟಿಗರ ಜೀವನದ ದೊಡ್ಡ ಕನಸು. ಸದ್ಯಕ್ಕಂತೂ ಟೀಮ್ ಇಂಡಿಯಾದ ಆಡಲು ಯುವ ಕ್ರಿಕೆಟಿಗರ ಮಧ್ಯೆ ದೊಡ್ಡ ಸ್ಪರ್ಧೆಯೇ ಇದೆ. ಅದರಲ್ಲೂ ಆರಂಭಿಕ ಆಟಗಾರರ ಸ್ಥಾನಕ್ಕೆ ಇರುವ ಪೈಪೋಟಿ ಅಷ್ಟಿಷ್ಟಲ್ಲ. ಆ ಸ್ಪರ್ಧೆಗೆ ಹೊಸ ಸೇರ್ಪಡೆ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದ ಎರಡೂ ಇನ್ನಿಂಗ್ಸ್”ಗಳಲ್ಲಿ ಶತಕ ಬಾರಿಸಿರುವ ಮುಂಬೈನ ಯುವ ಎಡಗೈ ಓಪನರ್ ಯಶಸ್ವಿ ಜೈಸ್ವಾಲ್ ( Yashasvi Jaiswal ).

ಬೆಂಗಳೂರಿನ ಹೊರವಲಯದಲ್ಲಿರುವ ಆಲೂರು ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಉತ್ತರ ಪ್ರದೇಶ ವಿರುದ್ಧದ ರಣಜಿ ಸೆಮಿಫೈನಲ್ (Ranji Trophy Semifinal) ಪಂದ್ಯದ 2ನೇ ಇನ್ನಿಂಗ್ಸ್”ನಲ್ಲೂ ಯಶಸ್ವಿ ಜೈಸ್ವಾಲ್ ಅಮೋಘ ಶತಕ ಬಾರಿಸಿದ್ದಾರೆ. ಮೊದಲ ಇನ್ನಿಂಗ್’ನಲ್ಲಿ 227 ಎಸೆತಗಳಲ್ಲಿ 15 ಬೌಂಡರಿಗಳ ನೆರವಿನಿಂದ 100 ರನ್ ಬಾರಿಸಿದ್ದ ಜೈಸ್ವಾಲ್, 2ನೇ ಇನ್ನಿಂಗ್ಸ್”ನಲ್ಲೂ ಭರ್ಜರಿ ಶತಕ ಸಿಡಿಸಿದ್ದಾರೆ.

ಯುವ ಎಡಗೈ ಬ್ಯಾಟ್ಸ್’ಮನ್ ಜೈಸ್ವಾಲ್, ಭಾರತ ಅಂಡರ್-19 ತಂಡವನ್ನೂ ಪ್ರತಿನಿಧಿಸಿದ್ದಾರೆ. 2020ರಲ್ಲಿ U-19 ಟೂರ್ನಿಯಲ್ಲಿ ಭಾರತ ಫೈನಲ್ ತಲುಪುವಲ್ಲಿ ಜೈಸ್ವಾಲ್ ಪಾತ್ರ ಮಹತ್ವದ್ದಾಗಿತ್ತು. ಪಾಕಿಸ್ತಾನ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ್ದ ಜೈಸ್ವಾಲ್, ಭಾರತವನ್ನು ಫೈನಲ್”ಗೆ ಮುನ್ನಡೆಸಿದ್ದರು. ಐಪಿಎಲ್-2022 ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಮಿಂಚಿದ್ದ ಯಶಸ್ವಿ ಜೈಸ್ವಾಲ್, 10 ಪಂದ್ಯಗಳಿಂದ 258 ರನ್ ಗಳಿಸಿದ್ದರು.

ಮುಂಬೈನಲ್ಲಿ ಪಾನಿಪೂರಿ ಮಾಡುತ್ತಿದ್ದ ಹುಡುಗ Yashasvi Jaiswal

ಯಶಸ್ವಿ ಜೈಸ್ವಾಲ್ ಕಷ್ಟವನ್ನೇ ತನ್ನ ಮೆಟ್ಟಿಲಾಗಿ ಬಳಸಿಕೊಂಡು ಮೇಲೇರಿದ ಹುಡುಗ. ಜೈಸ್ವಾಲ್ ಮೂಲತಃ ಉತ್ತರ ಪ್ರದೇಶದ ಭದೋಹಿಯವನು. ಅಪ್ಪ ಪಾನಿಪುರಿ ವ್ಯಾಪಾರಿ. ಮಗನಿಗೆ ಭಾರತ ಕ್ರಿಕೆಟ್ ತಂಡದ ಪರ ಆಡಬೇಕು ಎಂಬ ಕನಸು. ಆ ಕನಸನ್ನು ನನಸಾಗಿಸಿಕೊಳ್ಳಲು ಮುಂಬೈಗೆ ಬರ್ತಾನೆ ಜೈಸ್ವಾಲ್. ಆಝಾದ್ ಮೈದಾನದ ಪಕ್ಕದಲ್ಲಿರುವ ಹಾಲಿನ ಬೂತಿನಲ್ಲಿ ವಾಸ್ತವ್ಯ.

ಅಝಾದ್ ಮೈದಾನದಲ್ಲಿ ಪಾನಿಪುರಿ ಮಾರುತ್ತಿದ್ದ ಜೈಸ್ವಾಲ್ ಅಲ್ಲೇ ಕ್ರಿಕೆಟ್ ಅಭ್ಯಾಸವನ್ನು ಶುರು ಮಾಡ್ತಾನೆ. ಲೋಕಲ್ ಕ್ರಿಕೆಟ್ ಮ್ಯಾಚ್”ಗಳಲ್ಲಿ ಆಡ್ತಾನೆ. ಒಂದು ಸೆಂಚುರಿಗೆ 200 ರೂಪಾಯಿ. ಪಾನಿಪುರಿ ಮಾರಿಕೊಂಡು ಹುಡುಗ ಆಡುತ್ತಿದ್ದ ಜೈಸ್ವಾಲ್, ಸ್ಥಳೀಯ ಕ್ರಿಕೆಟ್ ಕೋಚ್ ಜ್ವಾಲಾ‌ ಸಿಂಗ್ ಕಣ್ಣಿಗೆ ಬೀಳ್ತಾನೆ. ಜ್ವಾಲಾ‌ ಸಿಂಗ್ ಕೂಡ ಉತ್ತರಪ್ರದೇಶದವರೇ. ಹುಡುಗನಿಗೆ ಕ್ರಿಕೆಟ್ ಪಾಠಗಳನ್ನು ಹೇಳಿ ಕೊಡ್ತಾರೆ.

ನಂತ್ರ ಯಶಸ್ವಿ ಜೈಸ್ವಾಲ್ ಮುಂಬೈ ಅಂಡರ್-19 ಕೋಚ್ ಸಂತೋಷ್ ಸಾಮಂತ್ ಕಣ್ಣಿಗೆ ಬೀಳ್ತಾನೆ. ಅಲ್ಲಿಂದ ಶುರುವಾದ ಜೈಸ್ವಾಲ್ ಕ್ರಿಕೆಟ್ ಪಯಣ ಈಗ ರಣಜಿ ಟ್ರೋಫಿ ಸೆಮಿಫೈನಲ್” ನ ಎರಡೂ ಇನ್ನಿಂಗ್ಸ್”ಗಳಲ್ಲಿ ಶತಕ ಬಾರಿಸುವಲ್ಲಿಗೆ ಬಂದಿದೆ. ಮುಂದಿನ ಟಾರ್ಗೆಟ್ ಟೀಮ್ ಇಂಡಿಯಾ ಪರ ಆಡುವುದು.

ಇದನ್ನೂ ಓದಿ : ವಿರಾಟ್ ಕೊಹ್ಲಿ ಬಗ್ಗೆ ಶಾಹಿದ್ ಅಫ್ರಿದಿ ಬಾಯಿಂದ ಇದೆಂಥಾ ಮಾತು ?

ಇದನ್ನೂ ಓದಿ : Missing Rohit Sharma : ಲಂಡನ್ ತಲುಪಿದ ಟೀಂ ಇಂಡಿಯಾದಲ್ಲಿ ನಾಯಕ ರೋಹಿತ್ ಶರ್ಮಾ ಮಿಸ್ಸಿಂಗ್ !

Ranji is a Panipuri boy Yashasvi Jaiswal who has scored a century in both innings of a semifinal

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular