ರಣಜಿ ಕ್ವಾರ್ಟರ್ ಫೈನಲ್ : ಉತ್ತರಾಖಂಡ್ ವಿರುದ್ಧ ಮೊದಲ ದಿನವೇ ಕನ್ನಡಿಗರ ಆರ್ಭಟ

ಬೆಂಗಳೂರು: ಆತಿಥೇಯ ಕರ್ನಾಟಕ ತಂಡ ಉತ್ತರಾಖಂಡ್ ವಿರುದ್ಧದ ರಣಜಿ ಕ್ವಾರ್ಟರ್ ಫೈನಲ್ (Ranji Trophy quarter final) ಪಂದ್ಯದಲ್ಲಿ ಮೊದಲ ದಿನವೇ ಅಬ್ಬರಿಸಿದೆ. ಚೊಚ್ಚಲ ರಣಜಿ ಪಂದ್ಯವಾಡಿದ ಬಲಗೈ ಮಧ್ಯಮ ವೇಗಿ ಎಂ.ವೆಂಕಟೇಶ್ ದಾಳಿಗೆ ತತ್ತರಿಸಿದ ಉತ್ತರಾಖಂಡ್ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ ಕೇವಲ 116 ರನ್ನಿಗೆ ಆಲೌಟಾಗಿದೆ. ಇದಕ್ಕೆ ಪ್ರತಿಯಾಗಿ ಕರ್ನಾಟಕ ತಂಡ ಮೊದಲ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 123 ರನ್ ಗಳಿಸಿದ್ದು 7 ರನ್’ಗಳ ಮುನ್ನಡೆ ಸಾಧಿಸಿದೆ.

ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಕರ್ನಾಟಕದ ತ್ರಿವಳಿ ಮಧ್ಯಮ ವೇಗಿಗಳಾದ ವಿದ್ವತ್ ಕಾವೇರಪ್ಪ, ವೈಶಾಕ್ ವಿಜಯ್ ಕುಮಾರ್ ಮತ್ತು ಎಂ.ವೆಂಕಟೇಶ್ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಬೌಲಿಂಗ್ ದಾಳಿ ಸಂಘಟಿಸಿದರು.

ಸ್ವಿಂಗ್ ಬೌಲರ್ ವಿದ್ವತ್ ಕಾವೇರಪ್ಪ, ಇನ್ನಿಂಗ್’ನ 5ನೇ ಓವರ್’ನಲ್ಲಿ ಉತ್ತರಾಖಂಡ್ ತಂಡದ ನಾಯಕ ಜೀವನ್’ಜ್ಯೋತ್ ಸಿಂಗ್ ಅವರನ್ನು ಪೆವಿಲಿಯನ್’ಗಟ್ಟಿ ಕರ್ನಾಟಕಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ನಂತರ ದಾಳಿಗಿಳಿದ ಎಂ.ವೆಂಕಟೇಶ್ ಪದಾರ್ಪಣೆಯ ಪಂದ್ಯದಲ್ಲಿ ಮಿಂಚಿದರು. ಉತ್ತರಾಖಂಡ್ ತಂಡದ ಮಧ್ಯಮ ಕ್ರಮಾಂಕದ ಮೇಲೆ ಮಾರಕವಾಗಿ ಎರಗಿದ ವೆಂಕಟೇಶ್ 5 ವಿಕೆಟ್ ಪಡೆಯುವ ಮೂಲಕ ಚೊಚ್ಚಲ ರಣಜಿ ಪಂದ್ಯವನ್ನೇ ಸ್ಮರಣೀಯವಾಗಿಸಿಕೊಂಡರು. ಮಾರಕ ದಾಳಿ ಸಂಘಟಿಸಿದ ವೆಂಕಟೇಶ್ 36 ರನ್ನಿತ್ತು 5 ವಿಕೆಟ್ ಪಡೆದರೆ, ವಿದ್ವತ್ ಕಾವೇರಪ್ಪ (2/17) ಮತ್ತು ಆಫ್’ಸ್ಪಿನ್ನರ್ ಕೃಷ್ಣಪ್ಪ ಗೌತಮ್ (2/22) ತಲಾ ಎರಡು ವಿಕೆಟ್ ಉರುಳಿಸಿದರು. ಮತ್ತೊಂದು ವಿಕೆಟ್ ವೈಶಾಕ್ ವಿಜಯ್ ಕುಮಾರ್ (1/25) ಪಾಲಾಯಿತು.

ಇದನ್ನೂ ಓದಿ : ಋಷಿಕೇಶದ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ಕೊಟ್ಟ ವಿರಾಟ್ ಕೊಹ್ಲಿ ದಂಪತಿ

ಇದನ್ನೂ ಓದಿ : KL Rahul : ಕಾಂಗರೂ ಬೇಟೆಗೆ ಕನ್ನಡಿಗನ ಭರ್ಜರಿ ಸಮರಾಭ್ಯಾಸ; ಮುಂಬೈನಲ್ಲಿ 3 ದಿನ ಅಭ್ಯಾಸ ನಡೆಸಿದ ರಾಹುಲ್

ಇದನ್ನೂ ಓದಿ : Murali Vijay retirement: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಟೀಮ್ ಇಂಡಿಯಾದ ಮಾಜಿ ಓಪನರ್ ಮುರಳಿ ವಿಜಯ್

ನಂತರ ತನ್ನ ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕಕ್ಕೆ ನಾಯಕ ಮಯಾಂಕ್ ಅಗರ್ವಾಲ್ ಮತ್ತು ಉಪನಾಯಕ ಆರ್.ಸಮರ್ಥ್ ಭದ್ರ ಅಡಿಪಾಯ ಹಾಕಿಕೊಟ್ಟರು. ಈ ಜೋಡಿ ಮುರಿಯದ ಮೊದಲ ವಿಕೆಟ್’ಗೆ 123 ರನ್’ಗಳ ಜೊತೆಯಾಟವಾಡಿ ತಂಡಕ್ಕೆ ಪ್ರಥಮ ದಿನವೇ ಮೇಲುಗೈ ತಂದುಕೊಟ್ಟಿದೆ. ನಾಯಕ ಮಯಾಂಕ್ 86 ಎಸೆತಗಳಲ್ಲಿ 9 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ ಅಜೇಯ 65 ರನ್ ಗಳಿಸಿದ್ರೆ, ಉಪನಾಯಕ ಸಮರ್ಥ್ 74 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ ಅಜೇಯ 54 ರನ್’ಗಳೊಂದಿಗೆ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

Ranji Trophy quarter final: Ranji quarter final: Against Uttarakhand on the first day, Kannadigar’s uproar

Comments are closed.