Ranji Trophy quarter final : ರಣಜಿ ಕ್ವಾರ್ಟರ್ ಫೈನಲ್ ನಲ್ಲಿ ಶ್ರೇಯಸ್ ಗೋಪಾಲ್ ಶತಕ, ಟಾಪ್-4 ಅರ್ಧಶತಕ; ಕರ್ನಾಟಕಕ್ಕೆ 358 ರನ್ ಮುನ್ನಡೆ

ಬೆಂಗಳೂರು: ಆಲ್ರೌಂಡರ್ ಶ್ರೇಯಸ್ ಗೋಪಾಲ್ ಅವರ ಅಜೇಯ ಶತಕ ಹಾಗೂ ಟಾಪ್-4 ದಾಂಡಿಗರ ಅರ್ಧಶತಕಗಳ ನೆರವಿನಿಂದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ (Ranji Trophy quarter final) ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡ ಉತ್ತರಾಖಂಡ್ ವಿರುದ್ಧ 2ನೇ ದಿನದಂತ್ಯಕ್ಕೆ 358 ರನ್’ಗಳ ಭಾರೀ ಮುನ್ನಡೆ ಸಂಪಾದಿಸಿದೆ.

ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವಿಕೆಟ್ ನಷ್ಟವಿಲ್ಲದೆ 123 ರನ್’ಗಳಿಂದ ದ್ವಿತೀಯ ದಿನದಾಟ ಆರಂಭಿಸಿದ ಕರ್ನಾಟಕ 2ನೇ ದಿನದಾಟದಲ್ಲಿ 351 ರನ್ ಕಲೆ ಹಾಕಿತು. ಅರ್ಧಶತಕಗಳೊಂದಿಗೆ ಅಜೇಯರಾಗುಳಿದಿದ್ದ ನಾಯಕ ಮಯಾಂಕ್ ಅಗರ್ವಾಲ್ ಮತ್ತು ಉಪನಾಯಕ ಆರ್.ಸಮರ್ಥ್ ಪ್ರಥಮ ವಿಕೆಟ್’ಗೆ 159 ರನ್ ಸೇರಿಸಿ ಶತಕದ ಹೊಸ್ತಿಲಲ್ಲಿ ಎಡವಿದರು. ಮಯಾಂಕ್ 83 ರನ್ನಿಗೆ ಔಟಾದ್ರೆ, ಸಮರ್ಥ್ 82 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆರಂಭಿಕರಿಬ್ಬರೂ ಔಟಾದ ನಂತರ ಜೊತೆಯಾದ ದೇವದತ್ತ್ ಪಡಿಕ್ಕಲ್ ಮತ್ತು ನಿಕಿನ್ ಜೋಸ್ 3ನೇ ವಿಕೆಟ್’ಗೆ 118 ರನ್’ಗಳ ಜೊತೆಯಾಟವಾಡಿದ್ರು. ಪಡಿಕ್ಕಲ್ 69 ರನ್ ಗಳಿಸಿ ಔಟಾದ್ರೆ 4ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ನಿಕಿನ್ ಜೋಸ್ 62ರಲ್ಲಿ ಔಟಾದ್ರು.

5ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಮಾಜಿ ನಾಯಕ ಮನೀಶ್ ಪಾಂಡೆಯವರ ಆಟ 39 ರನ್ನಿಗೆ ಸೀಮಿತಗೊಂಡಿತು. ಆದ್ರೆ 6ನೇ ಕ್ರಮಾಂಕದ ಬ್ಯಾಟ್ಸ್’ಮನ್ ಶ್ರೇಯಸ್ ಗೋಪಾಲ್ ಅಮೋಘ ಶತಕ ಬಾರಿಸಿ ಕರ್ನಾಟಕದ ಮುನ್ನಡೆಯನ್ನು 300ರ ಗಡಿ ದಾಟಿಸಿದರು. ಪ್ರಥಮದರ್ಜೆ ಕ್ರಿಕೆಟ್’ನಲ್ಲಿ 5ನೇ ಶತಕ ಬಾರಿಸಿದ ಶ್ರೇಯಸ್ ಗೋಪಾಲ್ ಮುರಿಯದ 5ನೇ ವಿಕೆಟ್’ಗೆ ವಿಕೆಟ್ ಕೀಪರ್ ಬಿ.ಆರ್ ಶರತ್ ಜೊತೆ 59 ರನ್’ಗಳ ಜೊತೆಯಾಟವಾಡಿದ್ದಾರೆ.

ಬ್ಯಾಟ್ಸ್’ಮನ್’ಗಳ ಭರ್ಜರಿ ಆಟದ ಪರಿಣಾಮ ಕರ್ನಾಟಕ ತಂಡ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ 2ನೇ ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 474 ರನ್ ಗಳಿಸಿದ್ದು, 358 ರನ್’ಗಳ ಬೃಹತ್ ಮುನ್ನಡೆ ಸಾಧಿಸಿದೆ. ಶತಕವೀರ ಶ್ರೇಯಸ್ ಗೋಪಾಲ್ ಅಜೇಯ 103 ಮತ್ತು ಬಿ.ಆರ್ ಶರತ್ ಅಜೇಯ 23 ರನ್’ಗಳೊಂದಿಗೆ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಉತ್ತರಾಖಂಡ್ ತಂಡ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ ಕೇವಲ 116 ರನ್’ ಗಳಿಗೆ ಆಲೌಟಾಗಿತ್ತು.

ಇದನ್ನೂ ಓದಿ : Sports Budget 2023 : ಬಜೆಟ್‌ನಲ್ಲಿ ಕ್ರೀಡೆಗೆ ದಾಖಲೆಯ ಮೊತ್ತ 3397.32 ಕೋಟಿ

ಇದನ್ನೂ ಓದಿ : Ajinkya Rahane county cricket : ಟೆಸ್ಟ್ ಕಂಬ್ಯಾಕ್‌ಗೆ ಕಸರತ್ತು, ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡಲಿದ್ದಾರೆ ಅಜಿಂಕ್ಯ ರಹಾನೆ

English News Visit : newsnext.live

Ranji Trophy quarter final Shreyas Gopal century top-4 fifties Karnataka lead by 358 runs

Comments are closed.