IPL 2023 Retention: ಮುಂಬೈನಿಂದ ಪೊಲ್ಲಾರ್ಡ್ ರಿಲೀಸ್, ಚೆನ್ನೈನಲ್ಲೇ ಉಳಿದ ರವೀಂದ್ರ ಜಡೇಜಾ


ಬೆಂಗಳೂರು:(IPL 2023 Retention) ಐಪಿಎಲ್ 2023ರ ಟೂರ್ನಿಗೆ ಆಟಗಾರರ ರೀಟೇನ್ ಮತ್ತು ರಿಲೀಸ್ ಪ್ರಕ್ರಿಯೆ ಅಂತಿಮ ಘಟ್ಟ ತಲುಪಿದ್ದು ಮುಂಬೈ ಇಂಡಿಯನ್ಸ್ (Mumbai Indians) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡಗಳು ರಿಟೇನ್ ಮಾಡಲಾಗಿರುವ ಆಟಗಾರರ ತಮ್ಮ ಅಂತಿಮ ಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿಗೆ ಸಲ್ಲಿಸಿವೆ.

(IPL 2023 Retention)ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಅನುಭವಿ ಆಲ್ರೌಂಡರ್ ಕೀರನ್ ಪೊಲ್ಲಾರ್ಡ್ ಅವರನ್ನು ತಂಡದಿಂದ ರಿಲೀಸ್ ಮಾಡಿದೆ. 35 ವರ್ಷದ ಕೆರಿಬಿಯನ್ ಆಲ್ರೌಂಡರ್ ಪೊಲ್ಲಾರ್ಡ್ 2010ರಿಂದ ಸತತ 12 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಮುಂಬೈ ತಂಡ ಐದು ಬಾರಿ ಐಪಿಎಲ್ ಚಾಂಪಿಯನ್ ಆಗುವಲ್ಲಿ ಪೊಲ್ಲಾರ್ಡ್ ಪಾತ್ರ ಮಹತ್ವದ್ದಾಗಿತ್ತು.

ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೊತೆಗಿನ ನಂಟು ಕಡಿದುಕೊಳ್ಳುವ ಸೂಚನೆ ನೀಡಿದ್ದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು CSK ಫ್ರಾಂಚೈಸಿ ತನ್ನಲ್ಲೇ ಉಳಿಸಿಕೊಂಡಿದೆ. ಆದರೆ ಇಂಗ್ಲೆಂಡ್ ವೇಗಿ ಕ್ರಿಸ್ ಜೋರ್ಡನ್, ನ್ಯೂಜಿಲೆಂಡ್ ವೇಗಿ ಆಡಂ ಮಿಲ್ನ್ ಮತ್ತು ಕಿವೀಸ್’ನ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಅವರನ್ನು ತಂಡದಿಂದ ಕೈಬಿಡಲು ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿರ್ಧರಿಸಿದೆ.

ಇದನ್ನೂ ಓದಿ:Meghna Raj Sarja tour : ಚಿರು ನೆನಪುಗಳ ಜೊತೆಯೇ ಮೇಘನಾ ರಾಜ್‌ ಸರ್ಜಾ ಪ್ರಯಾಣ : ಸ್ಪೆಶಲ್ ಪೋಟೋ ಶೇರ್ ಮಾಡಿದ ಕುಟ್ಟಿಮಾ

ಇದನ್ನೂ ಓದಿ:Ben Stokes : 2016ರ ದುಸ್ವಪ್ನ.., 2019ರಲ್ಲಿ ವಿಶ್ವಕಪ್, ಆಷಸ್, 2022ರಲ್ಲಿ ಮತ್ತೊಂದು ವಿಶ್ವಕಪ್; ಇಂಗ್ಲೆಂಡ್‌ನ ಗ್ರೇಟೆಸ್ಟ್ ವಿಶ್ವಕಪ್ ಹೀರೊ

ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ತಂಡ ಕೀರನ್ ಪೊಲ್ಲಾರ್ಡ್ ಅವರ ಜೊತೆ ವೆಸ್ಟ್ ಇಂಡೀಸ್ ಆಲ್ರೌಂಡರ್ ಫ್ಯಾಬಿಯೆನ್ ಅಲೆನ್ ಮತ್ತು ಇಂಗ್ಲೆಂಡ್’ನ ಎಡಗೈ ವೇಗದ ಬೌಲರ್ ತೈಮಾಲ್ ಮಿಲ್ಸ್, ಲೆಗ್ ಸ್ಪಿನ್ನರ್ ಮಯಾಂಕ್ ಮಾರ್ಕಂಡೆ, ಹೃತಿಕ್ ಶೋಕಿನ್ ಅವರನ್ನು ತಂಡದಿಂದ ರಿಲೀಸ್ ಮಾಡಿದೆ. ತೈಮಾಲ್ ಮಿಲ್ಸ್ ಅವರ ಬದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಜೇಸನ್ ಬೆಹ್ರೆನ್’ಡ್ರೊಫ್ ಅವರನ್ನು ಮುಂಬೈ ಇತ್ತೀಚೆಗಷ್ಟೇ ತನ್ನ ತಂಡಕ್ಕೆ ಸೇರಿಸಿಕೊಂಡಿತ್ತು.

ಮುಂಬೈ ಇಂಡಿಯನ್ಸ್ ಒಟ್ಟು 10 ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದ್ದು, ಐವರನ್ನು ರಿಲೀಸ್ ಮಾಡಿದೆ. ಚೆನ್ನೈ ಸೂಪರ್ ಕಿಂಗ್ಸ್ 9 ಆಟಗಾರರನ್ನು ರೀಟೇನ್ ಮಾಡಿದ್ದು, ನಾಲ್ವರನ್ನು ರಿಲೀಸ್ ಮಾಡಿದೆ.

ಐಪಿಎಲ್ ತಂಡಗಳು ರೀಟೇನ್ ಮತ್ತು ರಿಲೀಸ್ ಮಾಡಲಾಗಿರುವ ಆಟಗಾರರ ಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿಗೆ ಸಲ್ಲಿಸಲು ಮಂಗಳವಾರ (ನವೆಂಬರ್ 15) ಕೊನೆಯ ದಿನವಾಗಿದೆ.

ಮುಂಬೈ ಇಂಡಿಯನ್ಸ್: ರೀಟೇನ್ ಆಟಗಾರರು
ರೋಹಿತ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಡೇನಿಯೆಲ್ ಸ್ಯಾಮ್ಸ್, ಟಿಮ್ ಡೇವಿಡ್, ಜೋಫ್ರಾ ಆರ್ಚರ್, ಜಸ್ಪ್ರೀತ್ ಬುಮ್ರಾ, ಟ್ರಿಸ್ಟನ್ ಸ್ಟಬ್ಸ್, ತಿಲಕ್ ವರ್ಮಾ.

ಮುಂಬೈ ಇಂಡಿಯನ್ಸ್: ರಿಲೀಸ್ ಮಾಡಲಾಗಿರುವ ಆಟಗಾರರು
ಕೀರನ್ ಪೊಲ್ಲಾರ್ಡ್, ಫ್ಯಾಬಿಯೆನ್ ಅಲೆನ್, ತೈಮಾಲ್ ಮಿಲ್ಸ್, ಮಯಾಂಕ್ ಮಾರ್ಕಂಡೆ, ಹೃತಿಕ್ ಶೋಕಿನ್.

ಇದನ್ನೂ ಓದಿ:Ben Stokes : 2016ರ ದುಸ್ವಪ್ನ.., 2019ರಲ್ಲಿ ವಿಶ್ವಕಪ್, ಆಷಸ್, 2022ರಲ್ಲಿ ಮತ್ತೊಂದು ವಿಶ್ವಕಪ್; ಇಂಗ್ಲೆಂಡ್‌ನ ಗ್ರೇಟೆಸ್ಟ್ ವಿಶ್ವಕಪ್ ಹೀರೊ

ಇದನ್ನೂ ಓದಿ:Tamil Thalaivas vs Bengaluru Bulls : ತಮಿಳ್ ತಲೈವಾಸ್ ಕೊಬ್ಬಿಳಿಸಿ ಅಗ್ರಸ್ಥಾನಕ್ಕೇರಿದ ಕೆಂಪು ಗೂಳಿಗಳು

ಚೆನ್ನೈ ಸೂಪರ್ ಕಿಂಗ್ಸ್: ರೀಟೇನ್ ಆಟಗಾರರು
ಎಂ.ಎಸ್ ಧೋನಿ, ರವೀಂದ್ರ ಜಡೇಜ, ಮೊಯೀನ್ ಅಲಿ, ಶಿವಂ ದುಬೆ, ಋತುರಾಜ್ ಗಾಯಕ್ವಾಡ್, ಡೆವೋನ್ ಕಾನ್ವೇ, ಮುಕೇಶ್ ಚೌಧರಿ, ಡ್ವೇನ್ ಪ್ರಿಟೋರಿಯಸ್, ದೀಪಕ್ ಚಹರ್.

ಚೆನ್ನೈ ಸೂಪರ್ ಕಿಂಗ್ಸ್: ರಿಲೀಸ್ ಮಾಡಲಾಗಿರುವ ಆಟಗಾರರು
ಕ್ರಿಸ್ ಜೋರ್ಡನ್, ಆಡಂ ಮಿಲ್ನ್, ಮಿಚೆಲ್ ಸ್ಯಾಂಟ್ನರ್, ಎನ್.ಜಗದೀಶನ್.

Pollard released from Mumbai, Ravindra Jadeja remaining in Chennai

Comments are closed.