ಭಾನುವಾರ, ಏಪ್ರಿಲ್ 27, 2025
HomeSportsCricketಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಆಡ್ತಾರೆ RCB ಮಾಜಿ ಆಟಗಾರ ಹರ್ಷಲ್ ಪಟೇಲ್

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಆಡ್ತಾರೆ RCB ಮಾಜಿ ಆಟಗಾರ ಹರ್ಷಲ್ ಪಟೇಲ್

- Advertisement -

ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ಮುಂದಿನ ವರ್ಷದ ಮೆಗಾ ಹರಾಜಿಗೆ ಸಜ್ಜಾಗುತ್ತಿದೆ. ಹಾಲಿ ಚಾಂಪಿಯನ್ಸ್‌ ಸಿಎಸ್‌ಕೆ ತಂಡವನ್ನು ಸೇರಲು ಸಾಕಷ್ಟು ಆಟಗಾರರು ತುದಿಗಾಲಲ್ಲಿ ನಿಂತಿದ್ದಾರೆ. ಇದೀಗ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ಆಟಗಾರ ಹರ್ಷಲ್‌ ಪಟೇಲ್‌ ( Harshal Patel) ಮುಂಬರುವ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಆಡುವುದಾಗಿ ಬಹಿರಂಗ ಪಡಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಆಟಗಾರರ ಹರಾಜು ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ರವೀಂದ್ರ ಜಡೇಜಾ (16 ಕೋಟಿ, ಎಂಎಸ್ ಧೋನಿ (12 ಕೋಟಿ), ಮೊಯಿನ್ ಅಲಿ (8 ಕೋಟಿ) ಮತ್ತು ರುತುರಾಜ್ ಗಾಯಕ್ವಾಡ್ (6 ಕೋಟಿ) ಅವರನ್ನು ಉಳಿಸಿಕೊಂಡಿದೆ. ಬ್ಯಾಟಿಂಗ್‌ ವಿಭಾಗದಲ್ಲಿ ರುತುರಾಜ್‌ ಗಾಯಕ್ವಾಡ್‌, ಕೀಪಿಂಗ್‌ನಲ್ಲಿ ಎಂ.ಎಸ್.ಧೋನಿ ಹಾಗೂ ಆಲ್‌ರೌಂಡರ್‌ ಕೋಟಾದಲ್ಲಿ ರವೀಂದ್ರ ಜಡೇಜಾ ಹಾಗೂ ಮೊಯಿನ್‌ ಆಲಿ ಅವರನ್ನು ತಂಡ ಉಳಿಸಿಕೊಂಡಿದೆ.

ಕಳೆದ ಬಾರಿಯ ಐಪಿಎಲ್‌ ಆವೃತ್ತಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಹರ್ಷಲ್‌ ಪಟೇಲ್‌ ಅದ್ಬುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಆದರೂ ಕೂಡ ಆರ್‌ಸಿಬಿ ತಂಡ ಹರ್ಷಲ್‌ ಪಟೇಲ್‌ ಅವರನ್ನು ತಂಡದಲ್ಲಿ ಉಳಿಸಿಕೊಂಡಿಲ್ಲ. ಆರ್‌ಸಿಬಿ ಕೇವಲ ವಿರಾಟ್‌ ಕೊಹ್ಲಿ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಮೊಹಮ್ಮದ್‌ ಸಿರಾಜ್‌ ಅವರನ್ನ ಮಾತ್ರವೇ ತಂಡದಲ್ಲಿ ಉಳಿಸಿಕೊಂಡಿದೆ. ಕಳೆದ ಆವೃತ್ತಿಯಲ್ಲಿ ಹೀರೋ ಆಗಿ ಮಿಂಚಿದ್ದ ಹರ್ಷಲ್‌ ಪಟೇಲ್‌ ಈ ಬಾರಿಯ ಮೆಗಾ ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ಸೇಲ್‌ ಆಗುವ ಸಾಧ್ಯತೆಯಿದೆ.

31 ವರ್ಷದ ಹರ್ಷಲ್‌ ಪಟೇಲ್‌ ಅವರು ಮೆಗಾ ಹರಾಜಿನಲ್ಲಿ ತಮ್ಮ ಮೂಲ ಬೆಲೆಯನ್ನು 2 ಕೋಟಿ ರೂಪಾಯಿ ಘೋಷಿಸಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಅತ್ಯುತ್ತಮ ತಂಡಗಳಲ್ಲಿ ಒಂದಾಗಿದೆ. ಅದ್ರಲ್ಲೂ ಭಾರತದ ಮಾಜಿ ನಾಯಕ ಎಂಎಸ್ ಧೋನಿ ನಾಯಕತ್ವದಲ್ಲಿ ತಾನು ಆಡಲು ಬಯಸುವುದಾಗಿ ಹರ್ಷಲ್ ಪಟೇಲ್‌ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ನಾನು ಐಪಿಎಲ್‌ನಲ್ಲಿ ಆಡಲು ಬಯಸುವ ಅತ್ಯುತ್ತಮ ತಂಡ ಸಿಎಸ್‌ಕೆ ಮತ್ತು ಎಂಎಸ್ ಧೋನಿ ವಿಶ್ವದ ಅತ್ಯುತ್ತಮ ನಾಯಕ ಎಂದು ಹರ್ಷಲ್ ಹೇಳಿದ್ದಾರೆ.

ಹರ್ಷಲ್ ಅವರನ್ನು ಕೈಬಿಡಲು ಆರ್‌ಸಿಬಿ ನಿರ್ಧಾರದ ಹಿಂದಿನ ಕಾರಣವನ್ನು ಸಹ ಉಲ್ಲೇಖಿಸಿದೆ. ನನ್ನನ್ನು ಉಳಿಸಿಕೊಳ್ಳದಿದ್ದಾಗ, ಮೈಕ್ ಹೆಸ್ಸನ್ ನನಗೆ ಕರೆ ಮಾಡಿ, ಇದು ಮುಖ್ಯವಾಗಿ ಪರ್ಸ್ ನಿರ್ವಹಣೆ ಎಂದು ಹೇಳಿದ್ದರು. ಅಲ್ಲದೇ ತನ್ನನ್ನು ಮತ್ತೆ ತಂಡಕ್ಕೆ ಹಿಂದಿರುಗಿಸಲು ಇಷ್ಟಪಡುತ್ತಾರೆ. ನಾನು ಕೂಡ ಆರ್‌ಸಿಬಿ ತಂಡದ ಪರ ಆಡಲು ಇಷ್ಟಪಡುತ್ತೇನೆ. ಕಳೆದ 2021ರ ಋತುವಿನಲ್ಲಿ, ನನ್ನ ಸಂಪೂರ್ಣ ವೃತ್ತಿಜೀವನವನ್ನೇ ಬದಲಾಗಿದೆ. ನಾನು ಇದುವರೆಗೂ ಯಾವುದೇ ಪ್ರಾಂಚೈಸಿಯನ್ನು ಸಂಪರ್ಕಿಸಿಲ್ಲ ಎಂದಿದ್ದಾರೆ.

1214 ಆಟಗಾರರು IPL 2022 ಹರಾಜಿಗೆ ನೋಂದಾಯಿಸಿದ್ದಾರೆ. ಇವರಲ್ಲಿ 896 ಕ್ರಿಕೆಟಿಗರು ಭಾರತೀಯರಾಗಿದ್ದರೆ, 318 ಮಂದಿ ಸಾಗರೋತ್ತರ ಆಟಗಾರರಾಗಿದ್ದಾರೆ. 270 ಕ್ಯಾಪ್ಡ್ ಆಟಗಾರರು, 903 ಅನ್‌ಕ್ಯಾಪ್ಡ್ ಆಟಗಾರರು ಮತ್ತು 41 ಅಸೋಸಿಯೇಟ್ ಆಟಗಾರರನ್ನು ಒಳಗೊಂಡಿದೆ. ಒಟ್ಟು ಕ್ರಿಕೆಟಿಗರಲ್ಲಿ 61 ಮಂದಿ ಭಾರತೀಯರಾಗಿದ್ದರೆ, 209 ಮಂದಿ ಅಂತಾರಾಷ್ಟ್ರೀಯ ಆಟಗಾರರಾಗಿದ್ದಾರೆ. ಒಟ್ಟು 903 ಅನ್‌ಕ್ಯಾಪ್ಡ್ ಆಟಗಾರರ ಪೈಕಿ 692 ಭಾರತೀಯರು, 62 ಅಂತಾರಾಷ್ಟ್ರೀಯ ಆಟಗಾರರು. ಹೆಚ್ಚುವರಿಯಾಗಿ, 143 ಅನ್‌ಕ್ಯಾಪ್ಡ್ ಇಂಡಿಯನ್ಸ್ ಮತ್ತು 6 ಅನ್‌ಕ್ಯಾಪ್ಡ್ ಅಂತರಾಷ್ಟ್ರೀಯ ಆಟಗಾರರು ಹಿಂದಿನ IPL ಋತುವಿನ ಭಾಗವಾಗಿದ್ದರು.

ಇದನ್ನೂ ಓದಿ : ಸನ್‌ರೈಸಸ್‌ ಹೈದ್ರಬಾದ್‌ ತಂಡದ ಖ್ಯಾತ ಆಟಗಾರನಿಗೆ 3 ವರ್ಷ ಕ್ರಿಕೆಟ್‌ನಿಂದ ನಿಷೇಧ ಹೇರಿದ ಐಸಿಸಿ

ಇದನ್ನೂ ಓದಿ : Ishan Kishan : IPL 2022 ರಲ್ಲಿ RCB ಪರ ಆಡುತ್ತಾರೆ ಇಶಾನ್ ಕಿಶನ್

( RCB former player Harshal Patel Play for CSK in IPL 2022)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular