ಕೆಜಿಎಫ್-2 ರಿಲೀಸ್ ಗೂ ಮುನ್ನ ಬಸ್ರೂರಿನಲ್ಲಿ ಕ್ರಿಕೆಟ್‌ ಆಡಿದ ಯಶ್ : ಹೇಗಿತ್ತು ಗೊತ್ತಾ ರಾಕಿಂಗ್‌ ಸ್ಟಾರ್‌ ಬ್ಯಾಟಿಂಗ್‌

ಕೆಜಿಎಫ್ ರಿಲೀಸ್ ಡೇಟ್ ಅಂತಿಮವಾಗಿದೆ. ಇನ್ನೇನು ಪ್ರಮೋಶನ್ ಕೂಡಾ ಆರಂಭವಾಗಿದೆ. ಆದರೆ ಇದಕ್ಕೂ ಮುನ್ನವೇ ರಾಕಿಂಗ್ ಸ್ಟಾರ್ ಯಶ್ ಫುಲ್ ರಿಲ್ಯಾಕ್ಸ್ ಆಗಿದ್ದು, ಕೆಜಿಎಫ್-2 ರಿಲೀಸ್ ಗೂ ಮುನ್ನವೇ ಬ್ಯಾಟ್ ಹಿಡಿದಿದ್ದಾರೆ. ಬ್ಯಾಟ್ ಹಿಡಿದು ಹೊಸ ಸಿನಿಮಾ ಶೂಟಿಂಗ್ ಯಶ್ ಹಾಜರಾಗಿದ್ದಾರೆ ಅಂತ ಅಂದುಕೊಂಡ್ರಾ. ಖಂಡಿತ ಇಲ್ಲ. ಯಶ್ ಬ್ಯಾಟ್ ಹಿಡಿದಿರೋದು‌ (Yash play cricket) ಕ್ರಿಕೆಟ್ ಆಡಿ ಸಮಯ ಕಳೆಯೋದಿಕ್ಕೆ.

ಸದ್ಯ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡ್ತಿರೋ ಸಿನಿಮಾ ಕೆಜಿಎಫ್-2. ಬಾಲಿವುಡ್ ಸೇರಿದಂತೆ ಎಲ್ಲ ಚಿತ್ರರಂಗವೂ ಕಾಯ್ತಿರೋ ಈ ಸಿನಿಮಾ ಏಪ್ರಿಲ್ 14 ರಂದು ತೆರೆ ಕಾಣಲಿದೆ ಎನ್ನಲಾಗ್ತಿದೆ. ಈ ಮಧ್ಯೆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಜೋರಾಗಿ ನಡೆದಿದೆ. ಸದ್ಯ ಸಿನಿಮಾದ ಸಂಗೀತಕ್ಕೆ ಅಂತಿಮ ಸ್ಪರ್ಶ ನೀಡುವ ಕಾರ್ಯ ತುರ್ತಾಗಿ‌‌ ನಡೆದಿದೆ.

ಕೆಜಿಎಫ್ ಗೆ ರವಿ ಬಸ್ರೂರು ಸಂಗೀತ‌ ನೀಡಿದ್ದಾರೆ. ಇನ್ನೇನು ಸಿನಿಮಾ ರಿಲೀಸ್ ಗೆ ಸಿದ್ಧವಾಗಿರೋದರಿಂದ ಮ್ಯೂಸಿಕ್ ಫೈನ್ ಟ್ಯೂನ್ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ ರವಿ ಬಸ್ರೂರು. ಸದ್ಯ ರವಿ ಬಸ್ರೂರು ಸಂಗೀತಕ್ಕೆ ಫೈನಲ್ ಟಚ್ ನೀಡೋಕೆ ಕುಂದಾಪುರದ ಬಸ್ರೂರಿನಲ್ಲಿ ಟೆಂಟ್ ಹಾಕಿದ್ದಾರೆ. ರವಿ ಬಸ್ರೂರು ತಮ್ಮ ಊರಿನಲ್ಲೇ ಕುಳಿತು ಮ್ಯೂಸಿಕ್ ವರ್ಕ್ ಮಾಡ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ಯಶ್ ಕೂಡ ಬಸ್ರೂರಿಗೆ ಭೇಟಿ ನೀಡಿದ್ದು, ಅಲ್ಲಿ ರವಿ ಬಸ್ರೂರು ಜೊತೆ ಸಿನಿಮಾದ ಮ್ಯೂಸಿಕ್ ಎಡಿಟ್ ಗೆ ಜೊತೆಯಾಗಿದ್ದಾರೆ.

ಅಷ್ಟೇ ಅಲ್ಲ ರವಿ ಬಸ್ರೂರು ಮನೆಯಲ್ಲೇ ವಾಸ್ತವ್ಯ ಹೂಡಿರುವ ಯಶ್ ಎಡಿಟಿಂಗ್ ಬಿಡುವಿನ ವೇಳೆಯಲ್ಲಿ ಸ್ಥಳೀಯರೊಂದಿಗೆ ಬೆರೆತು ಕ್ರಿಕೆಟ್ ಆಡಿದ್ದಾರೆ. ತಮ್ಮ ಉದ್ದನೆಯ ಕೂದಲಿಗೆ ರಬ್ಬರ್ ಬ್ಯಾಂಡ್ ಹಾಕಿ, ಶಾರ್ಟ್ ಹಾಗೂ ಟೀ ಶರ್ಟ್ ಹಾಕಿ ಬ್ಯಾಟ್ ಹಿಡಿದು ಬ್ಯಾಟಿಂಗ್ ನಿಂತಿರೋ ಯಶ್ ಭರ್ಜರಿ ಆಟ ಆಡಿ ಗಮನ ಸೆಳೆದಿದ್ದಾರೆ.

https://www.youtube.com/watch?v=2n1ybdMZOJc

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸ್ಥಳೀಯರೊಂದಿಗೆ ಬೆರೆತು ಯಾವುದೇ ಸ್ಟಾರ್ ಗಿರಿ ಇಲ್ಲದೇ ಯಶ್ ಕ್ರಿಕೆಟ್ ಆಡಿರೋ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇತ್ತೀಚಿಗಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿರೋ ಯಶ್ ಸದ್ಯ ಯಾವುದೇ ಹೊಸ ಸಿನಿಮಾ ಘೋಷಿಸಿಲ್ಲ. ಆದರೆ ಕಿರಾತಕ ನಿರ್ದೇಶಕರ ಜೊತೆ ನಟಿಸಲಿದ್ದಾರೆ ಅನ್ನೋ ಮಾಹಿತಿ ಕೂಡ ಹೊರಬಿದ್ದಿದೆ.

ಇದನ್ನೂ ಓದಿ : ಅನೀರಿಕ್ಷಿತವಾದ ಅವಕಾಶವೊಂದು ಒದಗಿ ಬಂತು : ಮನದಾಳದ ಮಾತು ಹಂಚಿಕೊಂಡ ಮೇಘನಾ ಸರ್ಜಾ

ಇದನ್ನೂ ಓದಿ : ತಾಯವ್ವನಿಂದ ವಿಕ್ರಾಂತ್ ರೋಣದವರೆಗೆ, ಸುದೀಪ್ ಸಿನಿ ಜರ್ನಿಗೆ 26 ರ ಸಂಭ್ರಮ : ಹೃದಯಸ್ಪರ್ಶಿ ಮೆಸೆಜ್ ನೀಡಿದ ಪ್ರಿಯಾ

(Rocking Star Yash play cricket before release KGF-2 in Music Director Ravi Basrur House)

Comments are closed.