ಸೋಮವಾರ, ಏಪ್ರಿಲ್ 28, 2025
HomeSportsCricketRishabh Pant First Reaction: “ನಿಮ್ಮ ಸಹಾಯವನ್ನು ಜೀವನ ಪರ್ಯಂತ ಮರೆಯಲ್ಲ” ಪ್ರಾಣ ಕಾಪಾಡಿದ ಹುಡುಗರಿಗೆ...

Rishabh Pant First Reaction: “ನಿಮ್ಮ ಸಹಾಯವನ್ನು ಜೀವನ ಪರ್ಯಂತ ಮರೆಯಲ್ಲ” ಪ್ರಾಣ ಕಾಪಾಡಿದ ಹುಡುಗರಿಗೆ ರಿಷಭ್ ಪಂತ್ ಥ್ಯಾಂಕ್ಸ್

- Advertisement -

ಮುಂಬೈ: Rishabh Pant First Reaction : ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಅಪಘಾತದ ನಂತರ ಇದೇ ಮೊದಲ ಬಾರಿ ಟ್ಟೀಟ್ ಮಾಡಿದ್ದಾರೆ. ಕಾರು ಅಪಘಾತದ ನಂತರ ಮೊದಲ ಬಾರಿ ರಿಷಭ್ ಪಂತ್ ಭಾವುಕ ಸಂದೇಶ ರವಾನಿಸಿದ್ದಾರೆ. ಮುಂಬೈನ ಕೋಕಿಲಾ ಬೆನ್ ಧೀರೂಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಷಭ್ ಪಂತ್ ತಾಯಿ ಮತ್ತು ಇಬ್ಬರು ಹುಡುಗರ ಚಿತ್ರವನ್ನು ಟ್ವಿಟರ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಹುಡುಗರ ಹೆಸರು ರಜತ್ ಕುಮಾರ್ ಮತ್ತು ನಿಶು ಕುಮಾರ್. ಅಪಘಾತದಲ್ಲಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ರಿಷಭ್ ಪಂತ್ ಅವರನ್ನು ಸಕಾಲದಲ್ಲಿ ಆಸ್ಪತ್ರೆಗೆ ಸೇರಿಸಿದ್ದು ಇದೇ ಹುಡುಗರು. ತಮ್ಮ ಪ್ರಾಣ ಕಾಪಾಡಿದವರನ್ನು ಜಗತ್ತಿಗೆ ಪರಿಚಯಿಸಿರುವ ಪಂತ್ ಟ್ವಿಟರ್ ಮೂಲಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

“ಎಲ್ಲರಿಗೂ ವೈಯಕ್ತಿಕವಾಗಿ ಕೃತಜ್ಞತೆಗಳನ್ನು ಅರ್ಪಿಸಲು ಸಾಧ್ಯವಾಗುತ್ತಿಲ್ಲ. ಆದರೆ ಅಪಘಾತದ ಸಮಯದಲ್ಲಿ ನನಗೆ ಸಹಾಯ ಮಾಡಿ ಸುರಕ್ಷಿತವಾಗಿ ಆಸ್ಪತ್ರೆಗೆ ಸೇರಿಸಿ ಈ ಇಬ್ಬರು ಹೀರೊಗಳಿಗೆ ನಾನು ಸದಾ ಚಿರಋಣಿ. ರಜತ್ ಕುಮಾರ್ ಮತ್ತು ನಿಶು ಕುಮಾರ್, ಥ್ಯಾಂಕ್ಯೂ. ಜೀವನಪರ್ಯಂತ ನಾನು ನಿಮಗೆ ಋಣಿಯಾಗಿರುತ್ತೇನೆ” ಎಂದು ಟ್ವಿಟರ್’ನಲ್ಲಿ ರಿಷಭ್ ಪಂತ್ ಬರೆದುಕೊಂಡಿದ್ದಾರೆ.

“ನನ್ನ ಕಷ್ಟಕಾಲದಲ್ಲಿ ನನಗಾಗಿ ಪ್ರಾರ್ಥಿಸಿದ ನನ್ನ ಅಭಿಮಾನಿಗಳು, ಟೀಮ್ ಮೇಟ್ಸ್, ನನಗೆ ಚಿಕಿತ್ಸೆ ನೀಡಿದ ಡಾಕ್ಟರ್’ಗಳು, ಫಿಸಿಯೊಗಳಿಗೆ ಥ್ಯಾಂಕ್ಸ್. ನಿಮ್ಮನ್ನೆಲ್ಲಾ ಆದಷ್ಟು ಬೇಗ ಮತ್ತೆ ಮೈದಾನದಲ್ಲಿ ನೋಡಲಿದ್ದೇನೆ” ಎಂದು ರಿಷಭ್ ಪಂತ್ ಟ್ವೀಟ್ ಮಾಡಿದ್ದಾರೆ.

“ನನಾನ ಚೇತರಿಕೆಗೆ ಹಾರೈಸಿ ಬಂದ ಸಂದೇಶಗಳನ್ನು ನೋಡಿ ನನ್ನ ಹೃದಯ ತುಂಬಿ ಬಂದಿದೆ. ನನ್ನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂಬುದನ್ನು ನಿಮಗೆ ತಿಳಿಸಲು ನನಗೆ ಸಂತೋಷವಾಗುತ್ತಿದೆ. ಚೇಚರಿಕೆಯ ಪ್ರಕ್ರಿಯೆ ಶುರುವಾಗಿದ್ದು ಮುಂದಿನ ಸವಾಲುಗಳಿಗೆ ಸಿದ್ಧನಾಗಲಿದ್ದೇನೆ. ನನಗೆ ಬೆಂಬಲವಾಗಿ ನಿಂತ ಬಿಸಿಸಿಐ, ಜಯ್ ಶಾ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಬಿಗ್ ಥ್ಯಾಂಕ್ಸ್” ಎಂದು ಟ್ವಿಟರ್’ನಲ್ಲಿ ರಿಷಭ್ ಪಂತ್ ಬರೆದುಕೊಂಡಿದ್ದಾರೆ.

25 ವರ್ಷದ ರಿಷಭ್ ಪಂತ್ ಡಿಸೆಂಬರ್ 30ರಂದು ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ರೊರ್ಕಿ ಎಂಬಲ್ಲಿ ಅಪಘಾತಕ್ಕೀಡಾಗಿದ್ದರು (Rishabh Pant car accident). ಡಿಸೆಂಬರ್ 30ರ ಬೆಳಗ್ಗೆ 5.30ಕ್ಕೆ ಈ ಅಪಘಾತ ಸಂಭವಿಸಿತ್ತು. ಬೆಳ್ಳಂ ಬೆಳಗ್ಗೆ ರೊರ್ಕಿಯಿಂದ ಉತ್ತರಾಖಂಡ್’ನಲ್ಲಿರುವ ತನ್ನ ಗೆಳತಿಯನ್ನ ನೋಡಲು ಹೊರಟಿದ್ದ ರಿಷಬ್ ಪಂತ್ ಸ್ವತಃ ತಾವೇ ತಮ್ಮ ಮರ್ಸಿಡಿಸ್ ಬೆಂಜ್ ಕಾರು ಚಲಾಯಿಸುತ್ತಿದ್ದರು. ಪಂತ್ ನಿದ್ದೆಯ ಮಂಪರಿನಲ್ಲಿದ್ದ ಕಾರಣ ರೊರ್ಕಿ ಬಳಿ ಕಾರು ರಸ್ತೆ ಡಿವೈಡರ್’ಗೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿಪಂತ್ ಅವರ ಮುಖ, ಬೆನ್ನು, ಮೊಣಕಾಲು ಮತ್ತು ಪಾದಕ್ಕೆ ಗಂಭೀರ ಗಾಯವಾಗಿತ್ತು.

ಅಪಘಾತದ ರಭಸಕ್ಕೆ ರಿಷಬ್ ಪಂತ್ ಅವರ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಸ್ಥಳಕ್ಕೆ ಧಾವಿಸಿದ್ದ ಹರ್ಯಾಣ ಮೂಲಕ ಟ್ರಕ್ ಡ್ರೈವರ್ ಒಬ್ಬರು ಪಂತ್ ಅವರನ್ನು ಉರಿಯುತ್ತಿದ್ದ ಕಾರಿನಿಂದ ಹೊರಗೆಳೆದು ಪ್ರಾಣ ಕಾಪಾಡಿ ಆಸ್ಪತ್ರೆಗೆ ದಾಖಲಿಸಿದ್ದರು. ರಿಷಭ್ ಪಂತ್’ಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಹೇಳುವ ಪ್ರಕಾರ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಕ್ರಿಕೆಟ್ ಮೈದಾನಕ್ಕೆ ಮರಳಲು ಇನ್ನೂ ನಾಲ್ಕರಿಂದ ಐದು ತಿಂಗಳು ಹಿಡಿಯಲಿದೆ. ಹೀಗಾಗಿ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಹಾಗೂ ಐಪಿಎಲ್’ನಿಂದ ರಿಷಬ್ ಪಂತ್ ಹೊರಗುಳಿಯಲಿದ್ದಾರೆ. ಆದರೆ ಆಕ್ಟೋಬರ್-ನವೆಂಬರ್ ತಿಂಗಳಲ್ಲಿ ಭಾರತದಲ್ಲೇ ನಡೆಯುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಹೊತ್ತಿಗೆ ರಿಷಭ್ ಪಂತ್ ಚೇತರಿಸಿಕೊಳ್ಳಲಿದ್ದಾರೆಯೇ ಎಂಬುದು ಸದ್ಯದ ಕುತೂಹಲ.

ಇದನ್ನೂ ಓದಿ : India No1 in ODI: ಕಿವೀಸ್ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರೆ ಟೀಮ್ ಇಂಡಿಯಾ ವರ್ಲ್ಡ್ ನಂ.1

ಇದನ್ನೂ ಓದಿ : KL Rahul Athiya Shetty marriage : ಕೆ.ಎಲ್ ರಾಹುಲ್-ಆತಿಯಾ ಶೆಟ್ಟಿ ಮದುವೆಗೆ ಬಾಲಿವುಡ್ ಸ್ಟಾರ್ಸ್‌ಗೆ ಆಹ್ವಾನ ಇಲ್ಲ!

Rishabh Pant First Reaction After Accident

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular