Cooker bomb blast case: ಸರಕಾರದಿಂದ ಪರಿಹಾರ ಸಿಗದಿದ್ರೆ ದೇವರೇ ನಮ್ಮನ್ನು ಕಾಪಾಡಬೇಕು ಎಂದ ಆಟೋ ಚಾಲಕ

ಮಂಗಳೂರು: (Cooker bomb blast case) ಕಳೆದ ವರ್ಷ ನವೆಂಬರ್‌ ನಲ್ಲಿ ಮಂಗಳೂರಿನಲ್ಲಿ ನಡೆದ ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ ಪ್ರಕರಣದಲ್ಲಿ ಗಾಯಗೊಂಡು ಎರಡು ದಿನಗಳ ಹಿಂದೆ ಆಸ್ಪತ್ರೆಯಿಂದ ಹೊರಬಂದಿದ್ದ ಆಟೋ ಚಾಲಕ ತಮ್ಮ ಅಸಾಹಯಕತೆಯನ್ನು ಹೇಳಿಕೊಂಡಿದ್ದು, ಸರಕಾರ ನಮಗೆ ಪರಿಹಾರ ನೀಡದೇ ಇದ್ದರೆ ದೇವರೇ ನಮ್ಮನ್ನು ಕಾಪಾಡಬೇಕು ಎಂದಿದ್ದಾರೆ.

ಮಂಗಳೂರಿನ ನಾಗೂರಿಯಲ್ಲಿ ಕಳೆದ ವರ್ಷ ನವೆಂಬರ್‌ ನಲ್ಲಿ ಬಾಂಬ್‌ ಬ್ಲಾಸ್ಟ್‌ (Cooker bomb blast case) ನಡೆದಿರುವುದು ಎಲ್ಲರಿಗೂ ತಿಳಿದೆ ಇದೆ. ಇದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ ಪ್ರಕರಣದಲ್ಲಿ ಗಾಯಗೊಂಡಿದ್ದ ಆಟೋ ಚಾಲಕ ಪುರುಷೋತ್ತಮ ಪೂಜಾರಿ (61) ಎರಡು ದಿನಗಳ ಹಿಂದೆ ಆಸ್ಪತ್ರೆಯಿಂದ ಗುಣಮುಖರಾಗಿ ಹೊರಬಂದಿದ್ದು, ಆಟೋ ರಿಕ್ಷಾ ಓಡಿಸುವ ಮೂಲಕ ಜೀವನ ಕಟ್ಟಿಕೊಂಡಿದ್ದಾರೆ. ಡಿಸ್ಚಾರ್ಜ್ ಆಗಿದ್ದರೂ ಕೂಡ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ದೇಹಕ್ಕೆ ಆಗಿರುವ ಗಾಯಗಳು ಸಂಪೂರ್ಣವಾಗಿ ವಾಸಿಯಾಗದ ಕಾರಣ ಅವರು ಜೀವನ ನಡೆಸುವುದು ಕಷ್ಟಕರವಾಗಿದೆ.

ಪುರುಷೋತ್ತಮ್‌ ಅವರು ತುಂಬಾ ಬಡವರಾಗಿದ್ದು, ಮಗಳ ಮದುವೆಯ ನಿಮಿತ್ತ ಅವರ ಮನೆ ದುರಸ್ತಿ ಕಾರ್ಯ ನಡೆಯುತ್ತಿದೆ. ಈ ಹಿನ್ನಲೆ ಅವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮನೆಗೆ ಇವರೊಬ್ಬರದೇ ದುಡಿಯುವ ಕೈ ಆಗಿದ್ದರಿಂದ ಕುಟುಂಬದವರು ತುಂಬಾ ಕಷ್ಟಪಡುವಂತಾಗಿದೆ. ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಪುರುಷೋತ್ತಮ್‌ ಅವರಲ್ಲಿ ವರದಿ ಮಾಧ್ಯಮಗಳು ಹೇಳಿಕೆಯನ್ನು ಪಡೆದುಕೊಂಡಿದ್ದು, ಪುರುಷೋತ್ತಮ ಅವರು ತಮ್ಮ ವೇದನೆಯನ್ನು ಹೇಳಿಕೊಂಡಿದ್ದಾರೆ.

ಬಾಂಬ್‌ ಬ್ಲಾಸ್ಟ್‌ ಪ್ರಕರಣದಲ್ಲಿ ಗಾಯಗೊಂಡಿದ್ದ ಪರಿಣಾಮದಿಂದ ಇನ್ನೂ ಒಂದು ತಿಂಗಳು ಮನೆಯಿಂದ ಹೊರಬರುವಂತಿಲ್ಲ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಇನ್ನೂ ಒಂದು ವರ್ಷದ ವರೆಗೆ ನಾನು ಕೆಲಸ ಮಾಡಲು ಸಾಧ್ಯವಿಲ್ಲ. ಇದುವರೆಗೆ ಚಿಕಿತ್ಸೆಗೆ ಬೇಕಾದ ಹಣವನ್ನು ಇಎಸ್‌ ಐ ಮೂಲಕ ನಿರ್ವಹಣೆ ಮಾಡಲಾಗುತ್ತಿದ್ದು, ನಮ್ಮಲ್ಲಿದ್ದ ಹಣ ಆಸ್ಪತ್ರೆ ಮನೆ ಎಂದು ತಿರುಗುವುದರಲ್ಲಿಯೇ ಖರ್ಚಾಗಿ ಹೋಗಿದೆ. ಸರಕಾರ ನಮಗೆ ಪರಿಹಾರ ಕೊಡುವುದಾಗಿ ಭರವಸೆ ನೀಡಿದೆ. ಹೊಸ ಆಟೋವನ್ನು ಕೊಡಿಸುವುದಾಗಿ ಬಿಜೆಪಿ ಹೇಳಿದೆ. ಸರಕಾರ ಪರಿಹಾರ ಕೊಟ್ಟರೆ ಸರಿ. ಇಲ್ಲವಾದಲ್ಲಿ ನಮಗೆ ದೇವರೇ ಸಹಾಯ ಮಾಡಬೇಕು” ಎಂದಿದ್ದಾರೆ.

ಇದನ್ನೂ ಓದಿ : Kundapura 4 Arrest : ಕುಂದಾಪುರದಲ್ಲಿ ಇಸ್ಪೀಟ್ ಆಡುತ್ತಿದ್ದ 4 ಮಂದಿಯ ಬಂಧನ

ಇದನ್ನೂ ಓದಿ : Bail granted to president: ಉಡುಪಿಯ ಕಮಲಾಕ್ಷಿ ಸೊಸೈಟಿಯ ಅವ್ಯವಹಾರ ಪ್ರಕರಣ : ಅಧ್ಯಕ್ಷನಿಗೆ ಜಾಮೀನು ಮಂಜೂರು

“ನನ್ನ ಮಗಳ ಮದುವೆ ಮೇ ತಿಂಗಳಲ್ಲಿ ನಿಶ್ಚಯವಾಗಿತ್ತು. ಅದಕ್ಕಾಗಿಯೇ ಮನೆ ದುರಸ್ತಿ ಕಾರ್ಯ ನಡೆಯುತ್ತಿದೆ. ಇದಕ್ಕೆ ಕೆಲವರು ಸಹಾಯ ಮಾಡಿದ್ದಾರೆ. ನನಗೆ ಮನೆ ಬಾಡಿಗೆ ನೀಡಿರುವುದು ನನ್ನ ಸ್ನೇಹಿತ, ಬಾಡಿಗೆ ಎಷ್ಟೂ ಅಂತಾನೂ ಹೇಳಿಲ್ಲ” ಎಂದಿದ್ದಾರೆ. ‘ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಸುನೀಲ್ ಕುಮಾರ್, ಶಾಸಕ ವೇದವ್ಯಾಸ್ ಕಾಮತ್, ಮಾಜಿ ಶಾಸಕ ಜೆಆರ್ ಲೋಬೋ ಮತ್ತು ಎಂಎಲ್ ಸಿ ಐವನ್ ಡಿಸೋಜಾ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಸರ್ಕಾರ ತನ್ನ ಮಾತನ್ನು ಉಳಿಸಿಕೊಳ್ಳುತ್ತದೆ ಎಂಬ ವಿಶ್ವಾಸ ನಮಗಿದೆ.” ಎಂದು ಪುರುಷೋತ್ತಮ ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

Cooker bomb blast case: Auto driver says God should save us if we don’t get relief from the government

Comments are closed.