ಮಂಗಳವಾರ, ಏಪ್ರಿಲ್ 29, 2025
HomeSportsCricketRohit Sharma Tests Covid Positive : ಟೀಂ ಇಂಡಿಯಾಕ್ಕೆ ಆಘಾತ, ರೋಹಿತ್‌ ಶರ್ಮಾ ಗೆ...

Rohit Sharma Tests Covid Positive : ಟೀಂ ಇಂಡಿಯಾಕ್ಕೆ ಆಘಾತ, ರೋಹಿತ್‌ ಶರ್ಮಾ ಗೆ ಕೋವಿಡ್‌ ಪಾಸಿಟಿವ್‌

- Advertisement -

ಲೀಸೆಸ್ಟರ್ : ಇಂಗ್ಲೆಂಡ್ ವಿರುದ್ದದ ಐದನೇ ಟೆಸ್ಟ್‌ ಪಂದ್ಯಕ್ಕೆ ಟೀ ಇಂಡಿಯಾ ಸಜ್ಜಾಗುತ್ತಿದೆ. ಈ ನಡುವಲ್ಲೇ ಭಾರತ ತಂಡದಿಂದ ಶಾಕಿಂಗ್‌ ಸುದ್ದಿಯೊಂದು ಹೊರಬಿದ್ದಿದೆ. ಭಾರತ ತಂಡ ನಾಯಕ ರೋಹಿತ್‌ ಶರ್ಮಾಗೆ ಕೋವಿಡ್‌ ಸೋಂಕು (Rohit Sharma Tests Covid Positive) ದೃಢಪಟ್ಟಿದ್ದು, ಅವರು ಬರ್ಮಿಂಗ್‌ ಹ್ಯಾಮ್‌ ಟೆಸ್ಟ್‌ ನಿಂದ ಹೊರಗುಳಿಯುವ ಸಾಧ್ಯತೆಯಿದೆ.

ಶನಿವಾರ ನಡೆಸಿದ ರಾಪಿಡ್ ಆಂಟಿಜೆನ್ ಪರೀಕ್ಷೆಯ ನಂತರ ಶರ್ಮಾ ವೈರಸ್‌ಗೆ ಧನಾತ್ಮಕ ಪರೀಕ್ಷೆ ಮಾಡಿದ್ದಾರೆ ಎಂದು ತಿಳಿಸುವ ಮೂಲಕ ಬಿಸಿಸಿಐ ತನ್ನ ಟ್ವಿಟರ್ ಹ್ಯಾಂಡಲ್ ಮೂಲಕ ಸುದ್ದಿಯನ್ನು ದೃಢಪಡಿಸಿದೆ. ಟೀಂ ಇಂಡಿಯಾದ ಅಗ್ರ ಕ್ರಮಾಂಕದ ಆಟಗಾರರಲ್ಲಿ ರೋಹಿತ್‌ ಶರ್ಮಾ ಪ್ರಮುಖರಾಗಿದ್ದಾರೆ. ಕೆ.ಎಲ್.ರಾಹುಲ್‌ ಗಾಯದಿಂದಾಗಿ ಈಗಾಗಲೇ ಸರಣಿಯಿಂದ ಹೊರಬಿದ್ದಿದ್ದಾರೆ. ಈ ನಡುವಲ್ಲೇ ರೋಹಿತ್‌ ಶರ್ಮಾ ಕೋವಿಡ್‌ ಸೋಂಕಿಗೆ ತುತ್ತಾಗಿರುವುದು ಭಾರತ ತಂಡಕ್ಕೆ ದೊಡ್ಡ ಹೊಡೆತವನ್ನು ಕೊಟ್ಟಿದೆ.

ಕಳೆದ ವರ್ಷ ಭಾರತ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ರೋಹಿತ್ ನಾಲ್ಕು ಟೆಸ್ಟ್‌ಗಳಲ್ಲಿ 52.57 ಸರಾಸರಿಯಲ್ಲಿ 368 ರನ್ ಗಳಿಸಿದ್ದರು. ಎರಡು ಅರ್ಧಶತಕ ಮತ್ತು ಒಂದು ಶತಕ ಬಾರಿಸಿದ್ದರು. ಟೆಸ್ಟ್‌ ಪಂದ್ಯದ ವೇಳೆಗೆ ಅವರು ಚೇತರಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ಯಾವುದೇ ಖಚಿತತೆ ಇಲ್ಲ. ವಿದೇಶದಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯಗಳ ಪೈಕಿ ರೋಹಿತ್‌ ಶರ್ಮಾ ಮೊದಲ ಬಾರಿಗೆ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಶ್ರೀಲಂಕಾ ವಿರುದ್ದದ ಸರಣಿಯ ಮೂಲಕ ರೋಹಿತ್‌ ಶರ್ಮಾ ಭಾರತ ತಂಡದ ನಾಯಕರಾಗಿ ನೇಮಕವಾಗಿದ್ದರು. ಒಂದೊಮ್ಮೆ ರೋಹಿತ್‌ ಶರ್ಮಾ ಪಂದ್ಯದ ವೇಳೆಗೆ ಫಿಟ್‌ ಆಗದೇ ತಂಡವನ್ನು ಯಾರು ಮುನ್ನೆಡೆಸುತ್ತಾರೆ ಅನ್ನೋ ಕುತೂಹಲ ಮೂಡಿದೆ. ಒಂದೊಮ್ಮೆ ರೋಹಿತ್‌ ಅಲಭ್ಯಕ್ಕೆ ಖಚಿತವಾದ್ರೆ ಕೆ.ಎಲ್.ರಾಹುಲ್‌ ಅವರನ್ನು ಸ್ಟ್ಯಾಂಡ್‌ ಇನ್‌ ನಾಯಕನನ್ನಾಗಿ ನೇಮಕ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

IND vs ENG ಟೆಸ್ಟ್ 2022, T20, ODI ತಂಡಗಳು, ವೇಳಾಪಟ್ಟಿ :

ಐದನೇ ಟೆಸ್ಟ್ – ಜುಲೈ 1-5 – ಎಡ್ಜ್‌ಬಾಸ್ಟನ್, ಬರ್ಮಿಂಗ್ಹ್ಯಾಮ್ – ಮಧ್ಯಾಹ್ನ 3.30 ಮಧ್ಯಾಹ್ನ

1 ನೇ T20I – ಜುಲೈ 7 – ರೋಸ್ ಬೌಲ್, ಸೌತಾಂಪ್ಟನ್ – 11 pm

2 ನೇ T2I – ಜುಲೈ 9 – ಎಡ್ಜ್‌ಬಾಸ್ಟನ್, ಬರ್ಮಿಂಗ್ಹ್ಯಾಮ್ – 7 pm IST

3 ನೇ T20I – ಜುಲೈ 10 – ಟ್ರೆಂಟ್ ಬ್ರಿಡ್ಜ್, ನಾಟಿಂಗ್ಹ್ಯಾಮ್ – 11 pm IST

1 ನೇ ODI – ಜುಲೈ 12 – ಕೆನ್ನಿಂಗ್ಟನ್ ಓವಲ್, ಲಂಡನ್ – 3:30 IST IST

2 ನೇ ODI – ಜುಲೈ 14 – ಲಾರ್ಡ್ಸ್, ಲಂಡನ್ – 5:30 pm IST

3ನೇ ODI – ಜುಲೈ 17 – ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್ – ಸಂಜೆ 5:30 IST

ಇಂಗ್ಲೆಂಡ್ ವಿರುದ್ಧ ಭಾರತ 2022 ತಂಡಗಳು

ಐದನೇ ಟೆಸ್ಟ್‌ಗೆ ಭಾರತ ತಂಡ : ರೋಹಿತ್ ಶರ್ಮಾ (ಸಿ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಭ್ ಪಂತ್ (ವಿಕೆ), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ , ಶ್ರೀಕರ್ ಭಾರತ್ (ವಿ.ಕೀ)

ಇದನ್ನೂ ಓದಿ : King Is Back : ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ

ಇದನ್ನೂ ಓದಿ : IND vs IRE : ಇಂದು ಐರ್ಲೆಂಡ್‌ ವಿರುದ್ದ ಮೊದಲ ಟಿ20 ಪಂದ್ಯ : ಹೇಗಿದೆ India Playing XI

Rohit Sharma Tests Covid Positive India vs England test Captain Doubt in test Match

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular