Royal Challengers Bangalore : ವಿಲ್ ಜೇಕ್ ಬದಲು ಆರ್’ಸಿಬಿ ಟೀಮ್ ಸೇರಲಿದ್ದಾನೆ ಕಿವೀಸ್’ನ ಸ್ಫೋಟಕ ಆಲ್ರೌಂಡರ್

ಬೆಂಗಳೂರು: ಈ ಬಾರಿಯ ಐಪಿಎಲ್’ನಲ್ಲಿ (IPL 2023) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಪರ ಆಡಬೇಕಿದ್ದ ಇಂಗ್ಲೆಂಡ್’ನ ಸ್ಫೋಟಕ ಆಲ್ರೌಂಡರ್ ವಿಲ್ ಜೇಕ್ಸ್ ಗಾಯಗೊಂಡಿರುವ ಕಾರಣ ಐಪಿಎಲ್’ಗೆ ಲಭ್ಯರಿಲ್ಲ. ಗಾಯಾಳು ವಿಲ್ ಜೇಕ್ಸ್ ಬದಲು ನ್ಯೂಜಿಲೆಂಡ್’ನ ಬಿಗ್ ಹಿಟ್ಟಿಂಗ್ ಆಲ್ರೌಂಡರ್’ನನ್ನು ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿ ತಂಡಕ್ಕೆ ಸೇರಿಸಿಕೊಂಡಿದೆ.

ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಆರಂಭಕ್ಕಿನ್ನು ಕೇವಲ ಎರಡು ವಾರಗಳಷ್ಟೇ ಬಾಕಿ. ಐಪಿಎಲ್ (IPL 2023) 16ನೇ ಆವೃತ್ತಿಯ ಟೂರ್ನಿ ಮಾರ್ಚ್ 31ರಂದು ಅಹ್ಮದಾಬಾದ್’ನಲ್ಲಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು 4 ಬಾರಿಯ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಪ್ರಿಲ್ 2ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಆದರೆ ಐಪಿಎಲ್ ಟೂರ್ನಿ ಆರಂಭಕ್ಕೂ ಮೊದಲೇ ಆರ್’ಸಿಬಿಗೆ ಆಘಾತ ಎದುರಾಗಿತ್ತು.

ಈ ಬಾರಿಯ ಐಪಿಎಲ್’ನಲ್ಲಿ ರಾಯಲ್ ಚಾಲೆಂಜರ್ಸ್ ಪರ ಆಡಬೇಕಿದ್ದ ಇಂಗ್ಲೆಂಡ್ ಆಲ್ರೌಂಡರ್ ವಿಲ್ ಜೇಕ್ಸ್ ಗಾಯದ ಕಾರಣ ಇಡೀ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ. ವಿಲ್ ಜೇಕ್ಸ್ ಅವರನ್ನು ಆರ್’ಸಿಬಿ ಫ್ರಾಂಚೈಸಿ 3.2 ಕೋಟಿ ಮೊತ್ತಕ್ಕೆ ಖರೀದಿಸಿತ್ತು. ಬಾಂಗ್ಲಾದೇಶ ವಿರುದ್ಧ ಮೀರ್’ಪುರದಲ್ಲಿ ನಡೆದ ಏಕದಿನ ಸರಣಿಯ 2ನೇ ಪಂದ್ಯದ ವೇಳೆ ವಿಲ್ ಜೇಕ್ಸ್ ಸ್ನಾಯು ಸೆಳೆತಕ್ಕೊಳಗಾಗಿದ್ದರು. ಗಾಯದ ಸ್ವರೂಪ ಕೊಂಚ ಗಂಭೀರವಾಗಿರುವ ಕಾರಣ ಐಪಿಎಲ್’ನಿಂದ ಜೇಕ್ಸ್ ಹೊರಗುಳಿಯಲಿದ್ದಾರೆ.

ಇದನ್ನೂ ಓದಿ : Exclusive: RCB practice match: ಮಾರ್ಚ್ 26ಕ್ಕೆ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಪ್ರಾಕ್ಟೀಸ್ ಮ್ಯಾಚ್, ಅಭಿಮಾನಿಗಳಿಗೆ ಫ್ರೀ ಎಂಟ್ರಿ

ಇದನ್ನೂ ಓದಿ : David Warner : ಮುಂಬೈನ ಬೀದಿಯಲ್ಲಿ ಕ್ಯಾಬ್ ಡ್ರೈವರ್ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಡೇವಿಡ್ ವಾರ್ನರ್, ಫೋಟೋ ವೈರಲ್

ಇದನ್ನೂ ಓದಿ : Yuvraj meets Rishabh Pant : ರಿಷಭ್ ಪಂತ್ ಭೇಟಿ ಮಾಡಿ ಧೈರ್ಯ ತುಂಬಿದ “ದಿ ಫೈಟರ್” ಯುವರಾಜ್ ಸಿಂಗ್

ವಿಲ್ ಜೇಕ್ಸ್ (Will Jacks) ಬದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ನ್ಯೂಜಿಲೆಂಡ್’ನ ಎಡಗೈ ಆಲ್ರೌಂಡರ್ ಮೈಕೆಲ್ ಬ್ರೇಸ್’ವೆಲ್ (Michael Bracewell) ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಕಳೆದ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಮಿಂಚಿದ್ದ ಬ್ರೇಸ್ ವೆಲ್ ಇಲ್ಲಿಯವರೆಗೆ ಒಟ್ಟು 16 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 113 ರನ್ ಮತ್ತು 21 ವಿಕೆಟ್ ಪಡೆದಿದ್ದಾರೆ. ಐಪಿಎಲ್ ಹರಾಜಿನಲ್ಲಿ ಒಂದು ಕೋಟಿ ಮೂಲ ಬೆಲೆ ಹೊಂದಿದ್ದ ಮೈಕೆಲ್ ಬ್ರೇಸ್’ವೆಲ್ ಅವರನ್ನು ಯಾವ ಫ್ರಾಂಚೈಸಿಯೂ ಖರೀದಿಸಿರಲಿಲ್ಲ. ಅನ್ ಸೋಲ್ಡ್ ಆಗಿದ್ದ ಮೈಕೆಲ್ ಬ್ರೇಸ್’ವೆಲ್’ಗೆ ಈಗ ಅದೃಷ್ಟ ಖುಲಾಯಿಸಿದ್ದು, ಮೂಲಬೆಲೆ 1 ಕೋಟಿ ಮೊತ್ತಕ್ಕೆ ಆರ್’ಸಿಬಿ ತಂಡ ಸೇರಲಿದ್ದಾರೆ.

Royal Challengers Bangalore: Kiwis’ explosive all-rounder will join RCB team instead of Will Jake

Comments are closed.