ಸೋಮವಾರ, ಏಪ್ರಿಲ್ 28, 2025
HomeSportsCricketSachin Tendulkar in Goa: ಗೋವಾ ಕಡಲ ಕಿನಾರೆಯಲ್ಲಿ ಬೆಳ್ಳಂ ಬೆಳಗ್ಗೆ ಮೀನು ಹಿಡಿದ ಕ್ರಿಕೆಟ್...

Sachin Tendulkar in Goa: ಗೋವಾ ಕಡಲ ಕಿನಾರೆಯಲ್ಲಿ ಬೆಳ್ಳಂ ಬೆಳಗ್ಗೆ ಮೀನು ಹಿಡಿದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್

- Advertisement -

ಪಣಜಿ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಕಳೆದೊಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಸದ್ದು, ಸುದ್ದಿ ಮಾಡ್ತಿದ್ದಾರೆ. ಕಳೆದ ವಾರ ಬೆಳಗಾವಿ-ಗೋವಾ ಎಕ್ಸ್’ಪ್ರೆಸ್ ಹೈವೇನಲ್ಲಿ ರಸ್ತೆ ಬದಿ ಟೀ ಕುಡಿಯುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದ ಸಚಿನ್, ಈಗ ಮತ್ತೊಂದು ವೀಡಿಯೊವನ್ನು ಪೋಸ್ಟ್ ಮಾಡಿದೆ. ಆ ವೀಡಿಯೊ ಕೆಲವೇ ಗಂಟೆಗಳಲ್ಲಿ ಒಂದು ಮಿಲಿಯನ್’ಗೂ ಹೆಚ್ಚು ಲೈಕ್ಸ್’ಗಳನ್ನು ಪಡೆದಿದೆ (Sachin Tendulkar in Goa). ಅಂದ ಹಾಗೆ ಸಚಿನ್ ತೆಂಡೂಲ್ಕರ್ ಪೋಸ್ಟ್ ಮಾಡಿರುವುದು ಗೋವಾ ಕಡಲ ಕಿನಾರೆಯಲ್ಲಿ ಸ್ಥಳೀಯ ಮೀನುಗಾರರೊಂದಿಗೆ ಮೀನು ಹಿಡಿಯುತ್ತಿರುವ ವೀಡಿಯೊವನ್ನು. ವೀಡಿಯೊಗೆ “ಗೋವಾದಲ್ಲಿ ಮೀನುಗಾರರ ಜೊತೆ ಒಂದು ಆಸಕ್ತಿಕರ ಮುಂಜಾನೆ” ಕ್ಯಾಪ್ಷನ್ ಕೊಟ್ಟಿದ್ದಾರೆ ಸಚಿನ್ (An interesting morning with fishermen in Goa).

ಚಂದ್ರಗ್ರಹಣದ ದಿನವಾದ ಮಂಗಳವಾರ ಬೆಳ್ಳಂ ಬೆಳಗ್ಗೆ ಸಚಿನ್ ತೆಂಡೂಲ್ಕರ್ ಗೋವಾದ ಬೆನೌಲಿಮ್ ಬೀಚ್’ಗೆ ತೆರಳಿದ್ದಾರೆ. ಅಲ್ಲಿದ್ದ ಮೀನುಗಾರರನ್ನು ಭೇಟಿ ಮಾಡಿ, ಮೀನು ಹಿಡಿಯುವ ಕಲೆ ಬಗ್ಗೆ ಒಂದಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಜೊತೆಗೆ ತಾವೂ ಮೀನುಗಾರರ ಜೊತೆ ಸಮುದ್ರಕ್ಕೆ ಬಲೆ ಬೀಸಿ ಮೀನು ಹಿಡಿದು ಸಂಭ್ರಮಿಸಿದ್ದಾರೆ. ನಂತರ ಅದೇ ಮೀನುಗಳನ್ನು ಸ್ಥಳೀಯ ಮೀನುಗಾರರ ಕುಟುಂಬವೊಂದು ಅಡುಗೆ ಮಾಡಿ ಸಚಿನ್ ತೆಂಡೂಲ್ಕರ್ ಅವರಿಗೆ ಮೀನೂಟದ ಆತಿಥ್ಯ ನೀಡಿದೆ. ಈ ವೇಳೆ ಪುತ್ರ ಅರ್ಜುನ್ ತೆಂಡೂಲ್ಕರ್ ಕೂಡ ಸಚಿನ್ ಜೊತೆಗಿದ್ದು, ಅಪ್ಪನ ಜೊತೆ ಸಮುದ್ರ ತಟದಲ್ಲೇ ಮೀನೂಟದ ಸವಿಯನ್ನು ಸವಿದಿದ್ದಾರೆ.

https://www.instagram.com/reel/CksxMNYhEvR/?utm_source=ig_web_copy_link

ನಂತರ ಸ್ಥಳೀಯ ಮೀನುಗಾರ ಪಕ್ಕದಲ್ಲೇ ಇದ್ದ ಎಳನೀರನ್ನು ಕಿತ್ತು ಸಚಿನ್ ಮತ್ತು ಪುತ್ರ ಅರ್ಜುನ್ ಅವರಿಗೆ ನೀಡಿದ್ದಾರೆ. ಪುತ್ರನ ಜೊತೆ ಮೀನೂಟದ ನಂತರ ಫ್ರೆಶ್ ಎಳನೀರು ಸವಿದಿರುವ ಸಚಿನ್ ಗೋವಾದ ಆಹಾರ ಪದ್ಧತಿಗೆ ಕ್ಲೀನ್ ಬೌಲ್ಡಾಗಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ಪುತ್ರ ಅರ್ಜುನ್ ತೆಂಡೂಲ್ಕರ್ ಮೀನು ಹಿಡಿಯುತ್ತಿರುವುದು, ಎಳನೀರು ಕುಡಿಯುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಪ್ರಸಕ್ತ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಗೋವಾ ಪರ ಆಡುತ್ತಿದ್ದಾರೆ. ಮುಂಬೈ ತೊರೆದು ಗೋವಾ ತಂಡ ಸೇರಿಕೊಂಡಿರುವ 23 ವರ್ಷದ ಎಡಗೈ ವೇಗದ ಬೌಲರ್ ಅರ್ಜುನ್, ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಿಂದ 10 ವಿಕೆಟ್ ಪಡೆದಿದ್ದರು.

ಇದನ್ನೂ ಓದಿ : Captain fails in T20 World Cup : ಟಿ20 ವಿಶ್ವಕಪ್ 2022 : ಸೆಮಿಫೈನಲ್‌ನಲ್ಲಿ ಆಡುತ್ತಿರುವ ನಾಲ್ಕೂ ತಂಡಗಳ ಕ್ಯಾಪ್ಟನ್‌ಗಳು ಫೇಲ್

ಇದನ್ನೂ ಓದಿ : Richard Kettleborough : ಅಬ್ಬಾ.. ಭಾರತ Vs ಇಂಗ್ಲೆಂಡ್ ಸೆಮಿಫೈನಲ್ ಪಂದ್ಯಕ್ಕಿಲ್ಲ ಅಪಶಕುನದ ಅಂಪೈರ್

Sachin Tendulkar in Goa An interesting morning with fishermen : Watch

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular