Sachin Tendulkar Sharjah : ಶಾರ್ಜಾ ಮೈದಾನಕ್ಕೆ ಸಚಿನ್ ಹೆಸರು, ಕ್ರಿಕೆಟ್ ದಿಗ್ಗಜನಿಗೆ ಗೌರವ ಸಲ್ಲಿಸಿದ ಶಾರ್ಜಾ ಕ್ರಿಕೆಟ್ ಸಂಸ್ಥೆ

ಶಾರ್ಜಾ ಕ್ರಿಕೆಟ್ ಮೈದಾನಕ್ಕೂ (Sharjah Cricket Stadiuam) ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಅವರಿಗೂ ಬಿಡದ ನಂಟು. ಶಾರ್ಜಾ ಅಂದ್ರೆ ಮೊದಲು ನೆನಪಾಗೋದೇ ಸಚಿನ್ ತೆಂಡೂಲ್ಕರ್ ಹೆಸರು. ಕಾರಣ, 1998ರಲ್ಲಿ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಸಚಿನ್ (Sachin Tendulkar Sharjah) ಆಡಿದ್ದ ಆ ಎರಡು ಅತ್ಯದ್ಭುತ ಇನ್ನಿಂಗ್ಸ್.

ಕೋಕಾ ಕೋಲಾ ಕಪ್ ತ್ರಿಕೋನ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡಿಲಬ್ಬರದ 143 ರನ್ ಬಾರಿಸಿದ್ದ ಸಚಿನ್, ಏಪ್ರಿಲ್ 23ರಂದು ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧವೇ ಅಬ್ಬರದ 134 ರನ್ ಸಿಡಿಸಿ ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಆ ಐಕಾನಿಕ್ ಇನ್ನಿಂಗ್ಸ್’ಗೆ ಭಾನುವಾರವಷ್ಟೇ 25 ವರ್ಷ ತುಂಬಿತ್ತು. ಸೋಮವಾರ 50 ಹುಟ್ಟುಹಬ್ಬ ಆಚರಿಸಿಕೊಂಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಶಾರ್ಜಾ ಕ್ರಿಕೆಟ್ ಸಂಸ್ಥೆ ಬರ್ತ್ ಡೇ ಗಿಫ್ಟ್ ನೀಡಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನ ಒಂದು ಭಾಗಕ್ಕೆ ಸಚಿನ್ ತೆಂಡೂಲ್ಕರ್ ಸ್ಟ್ಯಾಂಡ್ ಎಂದು ಶಾರ್ಜಾ ಕ್ರಿಕೆಟ್ ಸಂಸ್ಥೆ ಹೆಸರಿಟ್ಟಿದೆ. ಸಚಿನ್ ಹೆಸರಿನ ಈ ಹೊಸ ಸ್ಟ್ಯಾಂಡ್ ಅನ್ನು ಸೋಮವಾರ ಅನಾವರಣ ಮಾಡಲಾಗಿದೆ.

ಕ್ರೀಡಾಂಗಣದ ಒಂದು ಭಾಗಕ್ಕೆ ತಮ್ಮ ಹೆಸರಿಟ್ಟಿರುವ ಶಾರ್ಜಾ ಕ್ರಿಕೆಟ್ ಸಂಸ್ಥೆಗೆ ಸಚಿನ್ ತೆಂಡೂಲ್ಕರ್ ಕೃತಜ್ಞತೆ ಅರ್ಪಿಸಿದ್ದಾರೆ. “ನಾನು ಅಲ್ಲಿರಬೇಕಿತ್ತು. ಆದರೆ ಪೂರ್ವನಿಯೋಜಿನ ಕಾರ್ಯಕ್ರಮಗಳ ಕಾರಣ ಬರಲಾಗಲಿಲ್ಲ. ಶಾರ್ಜಾದಲ್ಲಿ ಆಡುವುದು ಯಾವಾಗಲೂ ಅದ್ಭುತ ಅನುಭವ ನೀಡುತ್ತಿತ್ತು. ವಿದ್ಯುತ್ ಸಂಚಾರ ಮೂಡಿಸುವ ವಾತಾವರಣ, ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲದ ಕಾರಣ ಭಾರತ ತಂಡಕ್ಕೆ ಶಾರ್ಜಾ ಮೈದಾನ ಸದಾ ವಿಶೇಷ. ಆ ಕ್ರೀಡಾಂಗಣ ನಮಗೆ ಸಾಕಷ್ಟು ಸುಮಧರ ನೆನಪುಗಳನ್ನು ನೀಡಿದೆ.

ಇದನ್ನೂ ಓದಿ : ICC World Test Championship Final : “ಟೆಸ್ಟ್ ವಿಶ್ವಕಪ್ ಫೈನಲ್”ಗೆ ಟೀಮ್ ಇಂಡಿಯಾ ಪ್ರಕಟ : ಅಜಿಂಕ್ಯ ರಹಾನೆ ಕಂಬ್ಯಾಕ್, ಸೂರ್ಯ ಔಟ್

ಇದನ್ನೂ ಓದಿ : Ajinkya Rahane : ಧೋನಿ ಗರಡಿಯಲ್ಲಿ ಅರಳಿದ ರಹಾನೆ 2.0; ಕ್ರಿಕೆಟ್ ಜಗತ್ತನ್ನೇ ಬೆಚ್ಚಿ ಬೀಳಿಸಿದ “ಟೆಸ್ಟ್ ಆಟಗಾರ”

ಕ್ರೀಡಾಂಗಣದ ಒಂದು ಸ್ಟ್ಯಾಂಡ್’ಗೆ ನನ್ನ ಹೆಸರಿಟ್ಟಿರುವುದು ನನಗೆ ಸಂದ ಗೌರವ. ಬುಖಾತಿರ್ ಮತ್ತು ತಂಡಕ್ಕೆ ನನ್ನ ಕೃತಜ್ಞತೆಗಳು” ಎಂದು ಸಚಿನ್ ಹೇಳಿದ್ದಾರೆ. “ಕ್ರಿಕೆಟ್’ಗೆ ಸಾಕಷ್ಟು ಕೊಡುಗೆ ನೀಡಿರುವ ಸಚಿನ್ ತೆಂಡೂಲ್ಕರ್ ಅವರಿಗೆ ಇದು ನಮ್ಮ ಸಣ್ಣ ಗೌರವ” ಎಂದು ಶಾರ್ಜಾ ಕ್ರಿಕೆಟ್ ಮೈದಾನದ ಸಿಇಒ ಖಲಾಫ್ ಬುಖಾತಿರ್ ಹೇಳಿದ್ದಾರೆ.

Sachin Tendulkar Sharjah: Sharjah ground named after Sachin, Sharjah Cricket Association pays tribute to cricket legend

Comments are closed.