ಭಾನುವಾರ, ಏಪ್ರಿಲ್ 27, 2025
HomeSportsCricketExclusive : ಬೆಂಗಳೂರಿನಲ್ಲಿ ಸಚಿನ್ ತೆಂಡೂಲ್ಕರ್ ಪುತ್ರ, KIOCನಲ್ಲಿ ಅರ್ಜುನ್ ತೆಂಡೂಲ್ಕರ್ ಕ್ರಿಕೆಟ್ ಪ್ರಾಕ್ಟೀಸ್

Exclusive : ಬೆಂಗಳೂರಿನಲ್ಲಿ ಸಚಿನ್ ತೆಂಡೂಲ್ಕರ್ ಪುತ್ರ, KIOCನಲ್ಲಿ ಅರ್ಜುನ್ ತೆಂಡೂಲ್ಕರ್ ಕ್ರಿಕೆಟ್ ಪ್ರಾಕ್ಟೀಸ್

- Advertisement -

ಬೆಂಗಳೂರು: (Arjun Tendulkar practice Bangalore) ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜನ್ ತೆಂಡೂಲ್ಕರ್ (Sachin Tendulkar’s son Arjun Tendulkar) ಬೆಂಗಳೂರಿನಲ್ಲಿದ್ದಾರೆ. ಬೆಂಗಳೂರಿನ ಹಲಸೂರಿನಲ್ಲಿರುವ ಕರ್ನಾಟಕ ಇನ್ಸ್’ಟಿಟ್ಯೂಟ್ ಆಫ್ ಕ್ರಿಕೆಟ್ (Karnataka Institute of Cricket – KIOC) ಅಕಾಡೆಮಿಯಲ್ಲಿ ಅರ್ಜುನ್ ತೆಂಡೂಲ್ಕರ್ ಅಭ್ಯಾಸ ನಡೆಸಿದ್ದಾರೆ. ಈ ಬಗ್ಗೆ KIOC ಮುಖ್ಯಸ್ಥ ಇರ್ಫಾನ್ ಸೇಠ್ ಮಾಹಿತಿ ನೀಡಿದ್ದಾರೆ.

“ಅರ್ಜುನ್ ತೆಂಡೂಲ್ಕರ್ ಅತ್ಯಂತ ಶಿಸ್ತಿನ ಕ್ರಿಕೆಟಿಗ.ಅವರು ಕಲಿಯಲು ಸದಾ ಉತ್ಸುಕರಾಗಿರುವ ಮತ್ತು ಕಠಿಣ ಪರಿಶ್ರಮ ಪಡುವ ಆಟಗಾರ. ಬೌಲಿಂಗ್ ಆಲ್ರೌಂಡರ್ ಆಗಿರುವ ಅರ್ಜುನ್ ತುಂಬಾ ವಿನಮ್ರ ಸ್ವಭಾವದ ಹುಡುಗ. KIOCನಲ್ಲಿ ಅರ್ಜುನ್ ಅಭ್ಯಾಸ ನಡೆಸಿದ್ದು ಖುಷಿ ತಂದಿದೆ” ಎಂದು ಇರ್ಫಾನ್ ಸೇಠ್ ಹೇಳಿದ್ದಾರೆ.

Sachin Tendulkars son Arjun Tendulkar practice in Bangalore Karnataka Institute of Cricket KIOC

ಅಷ್ಟಕ್ಕೂ ಅರ್ಜುನ್ ತೆಂಡೂಲ್ಕರ್ ಬೆಂಗಳೂರಿಗೆ ಬಂದದ್ದು ಯಾಕೆ ? ಕಾರಣ ವಿಜಯ್ ಹಜಾರೆ ಟ್ರೋಫಿ. ಪ್ರಸಕ್ತ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಅರ್ಜುನ್ ತೆಂಡೂಲ್ಕರ್ ಗೋವಾ ಪರ ಆಡುತ್ತಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಗೋವಾ ತಂಡದ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಶನಿವಾರ ನೆಲಮಂಗಲದ KSCA ಆಲೂರು ಮೈದಾನದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಗೋವಾ ತಂಡ ಆಂಧ್ರಪ್ರದೇಶ ತಂಡವನ್ನು ಎದುರಿಸಲಿದೆ. ಕರ್ನಾಟಕದ ಮಾಜಿ ವೇಗದ ಬೌಲರ್ ಮನ್ಸೂರ್ ಅಲಿ ಖಾನ್ ಗೋವಾ ತಂಡದ ಕೋಚ್ ಆಗಿರುವುದು ವಿಶೇಷ. ಕರ್ನಾಟಕ ತಂಡ 2013-14, ಮತ್ತು 2014-15ನೇ ಸಾಲಿನಲ್ಲಿ ಸತತ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಮತ್ತು ಇರಾನಿ ಕಪ್ ಗೆದ್ದ ಕರ್ನಾಟಕ ತಂಡ ಸತತ ಆರು ಟ್ರೋಫಿಗಳನ್ನು ಗೆದ್ದಾಗ ಮನ್ಸೂರ್ ಅಲಿ ಖಾನ್ ಕರ್ನಾಟಕ ತಂಡದ ಬೌಲಿಂಗ್ ಕೋಚ್ ಆಗಿದ್ದರು.

Sachin Tendulkars son Arjun Tendulkar practice in Bangalore Karnataka Institute of Cricket KIOC

ಮುಂಬೈ ಪರ ಎರಡು ಟಿ20 ಪಂದ್ಯಗಳನ್ನಾಡಿರುವ ಅರ್ಜುನ್ ತೆಂಡೂಲ್ಕರ್, ಕಳೆದ ವರ್ಷದ ಜನವರಿ 15ರಂದು ಮುಂಬೈನಲ್ಲಿ ನಡೆದ ಹರ್ಯಾಣ ವಿರುದ್ಧದ ಪಂದ್ಯದ ಮೂಲಕ ದೇಶೀಯ ಟಿ20 ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ಆದರೆ ಮುಂಬೈ ತಂಡದಲ್ಲಿ ಅವಕಾಶದ ಕೊರತೆಯಿಂದಾಗಿ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಗೋವಾ ತಂಡಕ್ಕೆ ವಲಸೆ ಬಂದಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಗೋವಾ ಪರ 7 ಪಂದ್ಯಗಳನ್ನಾಡಿದ್ದ ಅರ್ಜುನ್ ತೆಂಡೂಲ್ಕರ್ 10 ವಿಕೆಟ್’ಗಳನ್ನು ಪಡೆದಿದ್ದರು. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ ಒಂದು ಮೇಡನ್ ಸಹಿತ ಕೇವಲ 10 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದರು. 23 ವರ್ಷದ ಅರ್ಜುನ್ ತೆಂಡೂಲ್ಕರ್ ಎಡಗೈ ವೇಗದ ಬೌಲರ್ ಮತ್ತು ಎಡಗೈ ಬ್ಯಾಟ್ಸ್’ಮನ್.

ಇದನ್ನೂ ಓದಿ : T20 World Cup Defeat : ಟಿ20 ವಿಶ್ವಕಪ್ ಸೋಲು: ಈ ಆಟಗಾರರಿಗೆ ಇನ್ನು ಮುಂದೆ ಭಾರತ ಟಿ20 ತಂಡದಲ್ಲಿ ಸ್ಥಾನವಿಲ್ಲ!

ಇದನ್ನೂ ಓದಿ : Virat Kohli : ಕ್ಷಮಿಸಿ ಬಿಡು ಕೊಹ್ಲಿ… ನಿನ್ನ ಆಟಕ್ಕೆ ಕೊನೆಗೂ ನ್ಯಾಯ ಸಿಗಲಿಲ್ಲ

Sachin Tendulkar’s son Arjun Tendulkar practice in Bangalore Karnataka Institute of Cricket KIOC

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular