Sanju Samson fans Protest : ಭಾರತ Vs ದಕ್ಷಿಣ ಆಫ್ರಿಕಾ ಟಿ20 ಪಂದ್ಯದಲ್ಲಿ ಬಿಸಿಸಿಐ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ ಸಂಜು ಸ್ಯಾಮ್ಸನ್ ಫ್ಯಾನ್ಸ್


ತಿರುವನಂತಪುರಂ: (ICC T20 World Cup)ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಲಾಗಿರುವ ಭಾರತ ತಂಡದಲ್ಲಿ ಕೇರಳದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಸಂಜು ಸ್ಯಾಮ್ಸನ್ (Sanju Samson)ಅವರಿಗೆ ಸ್ಥಾನ ನೀಡಲಾಗಿಲ್ಲ.ಸಂಜು ಸ್ಯಾಮ್ಸನ್ ಅವರನ್ನು ಹೊರಗಿಟ್ಟು ದೆಹಲಿಯ ಎಡಗೈ ವಿಕೆಟ್ ಕೀಪರ್ (Rishabh Pant) ರಿಷಭ್ ಪಂತ್’ಗೆ ಮಣೆ ಹಾಕಿರುವುದು ಕ್ರಿಕೆಟ್ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಸಂಜು ಸ್ಯಾಮ್ಸನ್ ಅವರ ಅಭಿಮಾನಿಗಳು ಬಿಸಿಸಿಐ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಸ್ಯಾಮ್ಸನ್ ಅಭಿಮಾನಿಗಳು ಅಷ್ಟಕ್ಕೇ ಸುಮ್ಮನಾಗಿಲ್ಲ. ಭಾರತ Vs ದಕ್ಷಿಣ ಆಫ್ರಿಕಾ (India Vs South Africa)ನಡುವಿನ ಟಿ20 ಪಂದ್ಯದ ವೇಳೆ ಬಿಸಿಸಿಐ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

(Sanju Samson fans Protest)ಭಾರತ ಮತ್ತು ದಕ್ಷಿಣ ಆಫ್ರಿಕಾ(India Vs South Africa) ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಕೇರಳದ ತಿರುವನಂತಪುರಂನಲ್ಲಿರುವ ಗ್ರೀನ್ ಫೀಲ್ಡ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಆ ಪಂದ್ಯಕ್ಕೆ ಸಂಜು ಸ್ಯಾಮ್ಸನ್ ಅಭಿಮಾನಿಗಳು ಸ್ಯಾಮ್ಸನ್ ಅವರ ಭಾವಚಿತ್ರ ಧರಿಸಿ ಬರಲಿದ್ದಾರೆ. ಆ ಮೂಲಕ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದಿರುವ ತಮ್ಮ ನಾಡಿನ ಆಟಗಾರನ ಬೆಂಬಲಕ್ಕೆ ನಿಲ್ಲಲಿದ್ದಾರೆ. ಅಷ್ಟೇ ಅಲ್ಲ, ಬಿಸಿಸಿಐ ವಿರುದ್ಧ ತಮ್ಮ ಅಸಮಾಧಾನ ಹೊರ ತೋರಿಸಲಿದ್ದಾರೆ.

ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್’ಗೆ (ICC T20 World Cup) ರೋಹಿತ್ ಶರ್ನಾ ನಾಯಕತ್ವದಲ್ಲಿ 15 ಮಂದಿ ಆಟಗಾರರ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಸೋಮವಾರ ಪ್ರಕಟಿಸಿದೆ. ಸತತ ವೈಫಲ್ಯಗಳ ನಂತರವೂ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಬ್ ಪಂತ್ (Rishabh Pant)ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ತಂಡಕ್ಬೊಬ್ಬ ಎಡಗೈ ಬ್ಯಾಟ್ಸ್’ಮನ್ ಬೇಕು ಎಂಬ ಒಂದೇ ಒಂದು ಕಾರಣಕ್ಕೆ ರಿಷಭ್ ಪಂತ್ ಅವರನ್ನು ತಂಡದಲ್ಲಿ ಮುಂದುವರಿಸಲಾಗಿದೆ. ಎಡಗೈ ಬ್ಯಾಟ್ಸ್’ಮನ್ ಕೋಟಾದಲ್ಲಿ ಪಂತ್ ಸ್ಥಾನ ಉಳಿಸಿಕೊಂಡಿದ್ದಾರೆ. ಇದು ಕ್ರಿಕೆಟ್ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ರಿಷಭ್ ಪಂತ್’ಗಾಗಿ (Sanju Samson)ಸಂಜು ಸ್ಯಾಮ್ಸನ್’ರಂತಹ (Sanju Samson) ಪ್ರತಿಭಾವಂತರನ್ನು ಕಡೆಗಣಿಸಲಾಗುತ್ತಿದೆ ಎಂದು ಕ್ರಿಕೆಟ್ ಫ್ಯಾನ್ಸ್ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಟಿ20 ವಿಶ್ವಕಪ್’ಗೆ (T20 World Cup 2022) ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

ರಿಷಭ್ ಪಂತ್(Rishabh Pant) ಹಾಗೂ ಸಂಜು ಸ್ಯಾಮ್ಸನ್ ಅವರ ಈ ವರ್ಷದ ಟಿ20 ದಾಖಲೆಗಳನ್ನು ನೋಡಿದ್ರೆ ಸಂಜು ಸ್ಯಾಮ್ಸನ್ ಹೆಚ್ಚು ರನ್ ಗಳಿಸಿದ್ದಾರೆ. ರಿಷಭ್ ಪಂತ್ ಈ ವರ್ಷ ಒಟ್ಟು 15 ಟಿ20 ಪಂದ್ಯಗಳನ್ನಾಡಿದ್ದು, 22.81ರ ಸರಾಸರಿಯಲ್ಲಿ ಕೇವಲ 251 ರನ್ ಗಳಿಸಿದ್ದಾರೆ. ಇದೇ ವೇಳೆ ಸಂಜು ಸ್ಯಾಮ್ಸನ್ 2022ರಲ್ಲಿ ಆಡಿದ ಕೇವಲ 3 ಟಿ20 ಪಂದ್ಯಗಳಿಂದ 61ರ ಅಮೋಘ ಸರಾಸರಿಯಲ್ಲಿ 122 ರನ್ ಕಲೆ ಹಾಕಿದ್ದಾರೆ. ಅಷ್ಟೇ ಅಲ್ಲ, ಟಿ20 ಕ್ರಿಕೆಟ್’ನಲ್ಲಿ ಸಂಜು ಸ್ಯಾಮ್ಸನ್ 135ಕ್ಕೂ ಹೆಚ್ಚಿನ ಸ್ಟ್ರೈಕ್ ರೇಟ್ ಹೊಂದಿದ್ದರೆ, ರಿಷಭ್ ಪಂತ್ ಕೇವಲ 126ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ದಾಖಲೆಗಳು ಸಂಜು ಸ್ಯಾಮ್ಸನ್ ಪರವಾಗಿದ್ದರೂ ರಿಷಭ್ ಪಂತ್ ಅವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಿರುವುದು ಎಷ್ಟು ಸರಿ ಎಂದು ಕ್ರಿಕೆಟ್ ಪ್ರಿಯರು ಪ್ರಶ್ನೆ ಎತ್ತಿದ್ದಾರೆ.

ಇದನ್ನೂ ಓದಿ : ರಾಬಿನ್ ಉತ್ತಪ್ಪ ಅಭಿಮಾನಿಗಳಿಗೆ ಗುಡ್ ನ್ಯೂಸ್.. ನಿವೃತ್ತಿಯಾದರೂ ಮತ್ತೆ ಆಡಲಿದ್ದಾರೆ ಕೊಡಗಿನ ವೀರ

ಇದನ್ನೂ ಓದಿ : ಐಸಿಸಿ ಟಿ20 ವಿಶ್ವಕಪ್ ನಂತರ ಚುಟುಕು ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನಿವೃತ್ತಿ?

ಟಿ20 ಯಲ್ಲಿ ಸಂಜು ಸ್ಯಾಮ್ಸನ್”ಗೆ ನೀಡಲಾಗಿರುವ ಅವಕಾಶ:

  • 1 ಟಿ20 Vs ಜಿಂಬಾಬ್ವೆ, 2015 ಜುಲೈ (19 ರನ್)
  • 1 ಟಿ20 Vs ಶ್ರೀಲಂಕಾ , 2020 ಜನವರಿ (06 ರನ್)
  • 2 ಟಿ20 Vs ನ್ಯೂಜಿಲೆಂಡ್, 2020 ಜನವರಿ-ಫೆಬ್ರವರಿ (8, 2 ರನ್)
  • 3 ಟಿ20 Vs ಆಸ್ಟ್ರೇಲಿಯಾ, 2020 ಡಿಸೆಂಬರ್ (23, 15, 10 ರನ್)
  • 3 ಟಿ20 Vs ಶ್ರೀಲಂಕಾ , 2021 ಜುಲೈ (27, 07, 00 ರನ್)
  • 2 ಟಿ20 Vs ಶ್ರೀಲಂಕಾ , 2022 ಫೆಬ್ರವರಿ (DNB, 39 ರನ್)
  • 1 ಟಿ20 Vs ಐರ್ಲೆಂಡ್, 2022 ಜೂನ್ (77 ರನ್)
  • 2 ಟಿ20 Vs ವೆಸ್ಟ್ ಇಂಡೀಸ್, 2022 ಆಗಸ್ಟ್ (30*, 15 ರನ್)

Sanju Samson fans will protest against BCCI in India vs South Africa T20 match

Comments are closed.