mosquitoes :ಸೊಳ್ಳೆಗಳು ಮನುಷ್ಯನನ್ನು ಕಚ್ಚಲು ವೈರಸ್​​ಗಳೇ ಕಾರಣ : ಅಧ್ಯಯನ

mosquitoes : ಕೆಲವು ವೈರಸ್​ಗಳು ಸೊಳ್ಳೆಗಳು ಮನುಷ್ಯನ ದೇಹದತ್ತ ಹೆಚ್ಚು ಆಕರ್ಷಿತಗೊಳ್ಳುವಂತೆ ಮಾಡುವಂತೆ ಮನುಷ್ಯನ ದೇಹದ ವಾಸನೆಯನ್ನು ಬದಲಾಯಿಸುತ್ತವೆ ಎಂಬುದು ಅಧ್ಯಯನವೊಂದರಲ್ಲಿ ಬಯಲಾಗಿದೆ. ಕನೆಕ್ಟಿಕಟ್​ ವಿಶ್ವವಿದ್ಯಾಲಯದ ರೋಗ ನಿರೋಧಕ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಪೆಂಗ್ವಾ ವಾಂಗ್​ ಈ ಕುರಿತು ಮಾತನಾಡಿದ್ದು ಸೊಳ್ಳೆಗಳು ವಿಶ್ವದ ಅತ್ಯಂತ ಅಪಾಯಕಾರಿ ಜೀವಿಗಳಲ್ಲಿ ಒಂದಾಗಿವೆ. ಮಲೇರಿಯಾ, ಡೆಂಗ್ಯೂ, ಜಾಂಡೀಸ್​ ನಂತಹ ಕಾಯಿಲೆಗಳು ಇದೇ ಸೊಳ್ಳೆಗಳಿಂದ ಬರುತ್ತದೆ ಹಾಗೂ ಪ್ರತಿ ವರ್ಷ ಒಂದು ಮಿಲಿಯನ್​ಗೂ ಹೆಚ್ಚು ಜನರು ಸೊಳ್ಳೆಗಳಿಂದ ಉಂಟಾದ ಕಾಯಿಲೆಗಳಿಂದ ಸಾಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಮನುಷ್ಯನನ್ನು ಕಚ್ಚುವ ಸೊಳ್ಳೆಗಳು ಆತನ ದೇಹದಲ್ಲಿರುವ ವೈರಸ್​ನ್ನು ಮತ್ತೊಬ್ಬರ ದೇಹಕ್ಕೆ ಅತ್ಯಂತ ಸುಲಭವಾಗಿ ವರ್ಗಾವಣೆ ಮಾಡುತ್ತವೆ. ಸೊಳ್ಳೆಯು ಯಾರನ್ನು ಕಚ್ಚುತ್ತೆ ಎನ್ನುವುದು ಆ ವ್ಯಕ್ತಿಯ ದೇಹದ ಉಷ್ಣತೆ, ದೇಹದಿಂದ ಬರುವ ವಾಸನೆ, ಹಾಗೂ ಉಸಿರಾಡಿದಾಗ ಹೊರ ಸೂಸುವ ಕಾರ್ಬನ್​ ಡೈ ಆಕ್ಸೈಡ್​ಗಳ ಮೇಲೆ ಅವಲಂಬಿತವಾಗಿ ಇರುತ್ತದೆ. ಮಲೆರಿಯಾದಿಂದ ಬಳಲುವ ಇಲಿಗಳು ತಮ್ಮ ದೇಹದ ಪರಿಮಳಗಳನ್ನು ಕೀಟಗಳಿಗೆ ಹೆಚ್ಚು ಆಕರ್ಷಿತ ಎನಿಸುವಂತಹ ರೀತಿಯಲ್ಲಿ ಬದಲಾಯಿಸುತ್ತವೆ ಎಂದು ಹಿಂದಿನ ಅಧ್ಯಯನಗಳು ತಿಳಿಸಿವೆ.

ಕಾಯಿಲೆಗೆ ಒಳಗಾಗಿದ್ದ ಇಲಿಗಳು ಇದ್ದ ಜಾಗದಲ್ಲಿ ಗಾಳಿ ಹರಿವನ್ನು ಹೆಚ್ಚಿಸಿದಾಗ ಸೊಳ್ಳೆಗಳು ಹೆಚ್ಚಾಗಿ ಸೋಂಕಿತ ಇಲಿಗಳ ಕಡೆಗೆ ಹಾರಿದ್ದವು ಎಂದು ರೋಗ ನಿರೋಧಕ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಪೆಂಗ್ವಾ ವಾಂಗ್​ ಹೇಳಿದ್ದಾರೆ. ಸೋಂಕಿತ ಇಲಿಗಳಿಂದ ಹೊರಸೂಸಲ್ಪಟ್ಟ ಪರಿಮಳದಿಂದ 20 ಅನಿಲ ರಾಸಾಯನಿಕ ಸಂಯುಕ್ತಗಳಲ್ಲಿ ಮೂರು ಸೊಳ್ಳೆ ಆಂಟೆನಾಗಳಲ್ಲಿ ಗಮನಾರ್ಹ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ ಎಂದು ಹೇಳಿದ್ದಾರೆ. ಅದೇ ರೀತಿ ಡೆಂಗ್ಯೂ ರೋಗಿಯ ಕಂಕುಳಿನಿಂದ ಸಂಗ್ರಹಿಸಲಾದ ವಾಸನೆಯಲ್ಲಿ ಆರೋಗ್ಯವಂತ ಮನುಷ್ಯನ ಬೆವರಿನ ವಾಸನೆಯಲ್ಲಿರುವುದಕ್ಕಿಂತ ಹೆಚ್ಚು ಅಸಿಟೋಫೆನೋನ್​ ಇದೆ ಎಂದು ಪ್ರೊಫೆಸರ್​ ವಾಂಗ್​ ಹೇಳಿದರು. ಅಸಿಟೋಫೆನೋನ್​ ಸೊಳೆಯನ್ನು ಮನುಷ್ಯನತ್ತ ಹೆಚ್ಚು ಆಕರ್ಷಿತಗೊಳ್ಳುವಂತೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದನ್ನು ಓದಿ : India Vs England Test : ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಭಾರತಕ್ಕೆ ಆರಂಭಿಕ ಆಘಾತ

ಇದನ್ನೂ ಓದಿ : Pregnant minor dies : ಗರ್ಭಪಾತ ಮಾತ್ರೆ ಸೇವಿಸಿ ಅಪ್ರಾಪ್ತೆ ಸಾವು : ಬಾಯ್​ಫ್ರೆಂಡ್​ ಬಂಧನ

Viruses make people more attractive to mosquitoes, study finds

Comments are closed.