ಸೋಮವಾರ, ಏಪ್ರಿಲ್ 28, 2025
HomeSportsCricketRishabh Pant car accident: ಕಾರು ಅಪಘಾತದಲ್ಲಿ ಗಂಭೀರ ಗಾಯ; ರಿಷಭ್ ಪಂತ್ ಚೇತರಿಕೆಗೆ ಕ್ರಿಕೆಟ್...

Rishabh Pant car accident: ಕಾರು ಅಪಘಾತದಲ್ಲಿ ಗಂಭೀರ ಗಾಯ; ರಿಷಭ್ ಪಂತ್ ಚೇತರಿಕೆಗೆ ಕ್ರಿಕೆಟ್ ದಿಗ್ಗಜರ ಹಾರೈಕೆ

- Advertisement -

ದೆಹಲಿ: ಭಾರತ ಕ್ರಿಕೆಟ್ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ (Rishabh Pant car accident) ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಿಷಭ್ ಪಂತ್ ಚಲಾಯಿಸುತ್ತಿದ್ದ ಮರ್ಸಿಡಿಸ್ ಐಷಾರಾಮಿ ಕಾರು ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ರೂರ್ಕಿಯ ನರ್ಸನ್ ಬಳಿಯಿರುವ ಹಮ್ಜದ್’ಪುರ ಸಮೀರ ರಸ್ತೆ ಡಿವೈಡರ್’ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಚಲಾಯಿಸುತ್ತಿದ್ದ ರಿಷಬ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತ ನಡೆದ ಕೂಡಲೇ ಕಾರಿಗೆ ಬೆಂಕಿ ಹೊತ್ತಿಕೊಂಡಿತು. ಈ ವೇಳೆ ರಿಷಭ್ ಪಂತ್ ವಿಂಡ್’ಸ್ಕ್ರೀನ್ ಅನ್ನು ಒಡೆದು ಹರಸಾಹಸ ಪಟ್ಟು ಕಾರಿನಿಂದ ಹೊರ ಬಂದಿದ್ದಾರೆ. ಘಟನೆಯಲ್ಲಿ ರಿಷಭ್ ಅವರ ಕಾಲು ಮುರಿತಕ್ಕೊಳಗಾಗಿದೆ ಎನ್ನಲಾಗಿದ್ದು, ತಲೆ ಮತ್ತು ಮೊಣಕಾಲಿಗೆ ಗಾಯಗಳಾಗಿವೆ. ಸದ್ಯ ಡೆಹ್ರಾಡೂನ್’ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಷಬ್ ಪಂತ್ ಅವರ ಶೀಘ್ರ ಚೇತರಿಕೆಗೆ ಕ್ರಿಕೆಟ್ ದಿಗ್ಗಜರು ಹಾರೈಸಿದ್ದಾರೆ.

“ರಿಷಭ್ ಪಂತ್ ಅವರ ಚೇತರಿಕೆಗೆ ಪ್ರಾರ್ಥಿಸುತ್ತೇನೆ. ಅದೃಷ್ಟವಶಾತ್ ರಿಷಬ್ ಅಪಾಯದಿಂದ ಪಾರಾಗಿದ್ದಾನೆ. ಗೆಟ್ ವೆಲ್ ಸೂನ್ ಚಾಂಪಿಯನ್” ಎಂದು ಮಾಜಿ ಟೆಸ್ಟ್ ಕ್ರಿಕೆಟಿಗ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.

“ನಾನು ಕೇಳುತ್ತಿರುವ ಸುದ್ದಿ ನಿಜವೇ ? ರಿಷಭ್ ಪಂತ್ ಅವರ ಶೀಘ್ರ ಚೇತರಿಕೆಗೆ ನಾನು ಪ್ರಾರ್ಥಿಸುತ್ತೇನೆ” ಎಂದು ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್ ಮುನಾಫ್ ಪಟೇಲ್ ಟ್ವೀಟ್ ಮಾಡಿದ್ದಾರೆ.

25 ವರ್ಷದ ರಿಷಭ್ ಪಂತ್ ಇತ್ತೀಚೆಗಷ್ಟೇ ನಡೆದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಬ್ಬರಿಸಿದ್ದರು. ಬಾಂಗ್ಲಾ ಪ್ರವಾಸದ ನಂತರ ತವರಿಗೆ ಮರಳಿದ್ದ ರಿಷಭ್ ಹುಟ್ಟೂರು ಡೆಹ್ರಾಡೂನ್’ಗೆ ತೆರಳಿದ್ದರು. ಶ್ರೀಲಂಕಾ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿರುವ ಭಾರತ ತಂಡದಿಂದ ರಿಷಭ್ ಪಂತ್ ಅವರನ್ನು ಕೈಬಿಡಲಾಗಿದ್ದು, ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸಲು ಬಿಸಿಸಿಐ ಸೂಚನೆ ನೀಡಿತ್ತು. ಫಿಟ್ನೆಸ್ ಉತ್ತಮ ಪಡಿಸಿಕೊಳ್ಳುವ ಸಂಬಂಧ ರಿಷಬ್ ಪಂತ್ ಮುಂದಿನ ವಾರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಆಗಮಿಸಬೇಕಿತ್ತು. ಆದರೆ ಕ್ರಿಕೆಟ್’ನಿಂದ ಬಿಡುವು ಸಿಕ್ಕ ಹಿನ್ನೆಲೆಯಲ್ಲಿ ಹುಟ್ಟೂರಿಗೆ ತೆರಳಿದ್ದ ರಿಷಭ್ ಪಂತ್ ಈಗ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಇದನ್ನೂ ಓದಿ : Rishabh Pant injured : ಡಿವೈಡರ್ ಗೆ ಕಾರು ಢಿಕ್ಕಿ : ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ಗೆ ಗಂಭೀರ ಗಾಯ

ಇದನ್ನೂ ಓದಿ : Team India fixtures 2023: ಮುಂದಿನ ವರ್ಷ ಟೀಮ್ ಇಂಡಿಯಾ ಆಡಲಿರುವ ಸರಣಿಗಳು ಎಷ್ಟು? ಇಲ್ಲಿದೆ ಕಂಪ್ಲೀಟ್ ವೇಳಾಪಟ್ಟಿ

ಇಂಗ್ಲಿಷ್‌ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Rishabh Pant car accident : Cricket legends wish for Rishabh Pant’s recovery

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular