ಅಹ್ಮದಾಬಾದ್: (Shreyas Iyer injury) ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್, ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವುದು ಅನುಮಾನ. ಅಷ್ಟೇ ಅಲ್ಲ, ಐಪಿಎಲ್ ಟೂರ್ನಿಯ ಆರಂಭದ ಕೆಲ ಪಂದ್ಯಗಳಿಗೆ ಲಭ್ಯರಾಗುವುದೂ ಡೌಟ್.
ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border-Gavaskar test series) ಕೊನೆಯ ಪಂದ್ಯದ 4 ಹಾಗೂ 5ನೇ ದಿನ ಶ್ರೇಯಸ್ ಅಯ್ಯರ್ ಮೈದಾನಕ್ಕಿಳಿದಿಲ್ಲ. ಬೆನ್ನು ನೋವಿನಿಂದ ಬಳಲುತ್ತಿರುವ ಕಾರಣ ಶ್ರೇಯಸ್ ಅಯ್ಯರ್(Shreyas Iyer injury), ಭಾರತದ ಪ್ರಥಮ ಇನ್ನಿಂಗ್ಸ್’ನಲ್ಲಿ ಬ್ಯಾಟಿಂಗ್ ಕೂಡ ಮಾಡಿಲ್ಲ. ಬೆನ್ನು ನೋವು ಗಂಭೀರ ಸ್ವರೂಪದ್ದಾಗಿರುವ ಕಾರಣ ಮಾರ್ಚ್ 17ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೂ ಅಯ್ಯರ್ ಅಲಭ್ಯರಾಗುವ ಸಾಧ್ಯತೆಯಿದೆ.
ಅಷ್ಟೇ ಅಲ್ಲ, ಮಾರ್ಚ್ 31ರಿಂದ ಆರಂಭವಾಗಲಿರುವ ಐಪಿಎಲ್-2023 ಟೂರ್ನಿಯ ಮೊದಲ ಕೆಲ ಪಂದ್ಯಗಳಿಂದಲೂ ಶ್ರೇಯಸ್ ಅಯ್ಯರ್ ಹೊರಗುಳಿಸುವ ಸಾಧ್ಯತೆಯಿದೆ. ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದು, ಏಪ್ರಿಲ್ 1ರಂದು ಮೊಹಾಲಿಯಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಕೆಕೆಆರ್ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಈ ಹಿಂದೆಯೇ ಬೆನ್ನು ನೋವಿನಿಂದ ಬಳಲುತ್ತಿದ್ದ ಶ್ರೇಯಸ್ ಅಯ್ಯರ್ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಅಲಭ್ಯರಾಗಿದ್ದರು. ಅಷ್ಟೇ ಅಲ್ಲ, ನಾಗ್ಪುರದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲೂ ಆಡಿರಲಿಲ್ಲ. ನಂತರ ಚೇತರಿಸಿಕೊಂಡಿದ್ದ ಅಯ್ಯರ್, 2ನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಸೇರಿಕೊಂಡಿದ್ದರು. ಆದರೆ 4ನೇ ಟೆಸ್ಟ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್, ಮತ್ತೆ ಬೆನ್ನು ನೋವಿನ ಸಮಸ್ಯೆಗೆ ಗುರಿಯಾಗಿದ್ದು, ಬಿಸಿಸಿಐ ಮೆಡಿಕಲ್ ಟೀಮ್ ಅಯ್ಯರ್ ಅವರಿಗೆ ಸ್ಕ್ಯಾನಿಂಗ್ ನಡೆಸಿದೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ (NCA) ಫಿಟ್ನೆಸ್ ಟೆಸ್ಟ್ ಕ್ಲಿಯರೆಲ್ಸ್ ಸಿಕ್ಕಿದ ನಂತರ ಆಟಗಾರನೊಬ್ಬ ಗಾಯದ ಸಮಸ್ಯೆಗೆ ಗುರಿಯಾಗುತ್ತಿರುವುದು ಕಳೆದ 6 ತಿಂಗಳಲ್ಲಿ ಇದು ಮೂರನೇ ಬಾರಿ. ಇತ್ತೀಚೆಗೆ ವೇಗಿ ಜಸ್ಪ್ರೀತ್ ಬುಮ್ರಾ ವಿಚಾರದಲ್ಲೂ ಇದೇ ಆಗಿತ್ತು. ಇದೀಗ ಬುಮ್ರಾ ಬೆನ್ನು ನೋವಿಗೆ ನ್ಯೂಜಿಲೆಂಡ್’ನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದು, 6 ತಿಂಗಳು ಕ್ರಿಕೆಟ್’ನಿಂದ ಹೊರಗುಳಿಯಲಿದ್ದಾರೆ.
ಇದನ್ನೂ ಓದಿ : ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಮೋಘ ದಾಖಲೆ ಬರೆದ ರೋ’ಹಿಟ್’ಮ್ಯಾನ್
Shreyas Iyer injury: Out of ODI series against Aussies..? Doubt for IPL start; Is Shreyas Iyer so bad luck?