KL Rahul: ಗಿಲ್ ಸೆಂಚುರಿ ಹೊಡೆದದ್ದು ಉತ್ತಮ ಬ್ಯಾಟಿಂಗ್ ಟ್ರ್ಯಾಕ್‌ನಲ್ಲಿ, ಆದ್ರೆ ನಾನು ಕೆ.ಎಲ್ ರಾಹುಲ್ ಫ್ಯಾನ್; ಕನ್ನಡಿಗನ ಪರ ಆಸೀಸ್ ಸ್ಟಾರ್ ಬ್ಯಾಟಿಂಗ್

ಬೆಂಗಳೂರು: ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಟೆಸ್ಟ್ ವೃತ್ತಿಜೀವನದಲ್ಲಿ ಅತ್ಯಂತ ಕಠಿಣ ಸಮಯವನ್ನು ಎದುರಿಸುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಕಳೆದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕರಾಗಿದ್ದ ರಾಹುಲ್, ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border-Gavaskar test series) ಕೊನೆಯ 2 ಪಂದ್ಯಗಳಿದೆ ಟೀಮ್ ಇಂಡಿಯಾ ಆಡುವ ಬಳಗದಿಂದಲೇ ಹೊರ ಬಿದ್ದಿದ್ದಾರೆ.

ರಾಹುಲ್ ಬದಲು ಆಡುತ್ತಿರುವ ಯುವ ಬಲಗೈ ಓಪನರ್ ಶುಭಮನ್ ಗಿಲ್, ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ್ದಾರೆ. ಗಿಲ್ ಶತಕ ಬಾರಿಸಿದರೂ ಆಸ್ಟ್ರೇಲಿಯಾದ ದಿಗ್ಗಜ ಆಲ್ರೌಂಡರ್ ಒಬ್ಬರು ಕನ್ನಡಿಗ ಕೆ.ಎಲ್ ರಾಹುಲ್ ಪರ ಬ್ಯಾಟ್ ಬೀಸಿದ್ದಾರೆ. ಅವರು ಬೇರಾರೂ ಅಲ್ಲ, ಶೇನ್ ವಾಟ್ಸನ್ (Shane Watson).

ಶುಭಮನ್ ಗಿಲ್ ಬಾರಿಸಿದ ಶತಕದ ಬಗ್ಗೆ ಮತ್ತು ರಾಹುಲ್ ಅವರನ್ನು ಟೀಮ್ ಇಂಡಿಯಾ ಪ್ಲೇಯಿಂಗ್ XIನಿಂದ ಹೊರಗಿಟ್ಟಿರುವ ಬಗ್ಗೆ ಮಾತನಾಡಿರುವ ಶೇನ್ ವ್ಯಾಟ್ಸನ್, ಕನ್ನಡಿಗನ ಸಾಮರ್ಥ್ಯದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಲಿದ್ದಾರೆ. ಅಷ್ಟೇ ಅಲ್ಲ, ನಾನು ಕೆ.ಎಲ್ ರಾಹುಲ್ ಅವರ ಆಟಕ್ಕೆ ದೊಡ್ಡ ಅಭಿಮಾನಿ ಎಂದಿದ್ದಾರೆ.

“ಶುಭಮನ್ ಗಿಲ್ ಬ್ಯಾಟಿಂಗ್’ಗೆ ಅನುಕೂಲಕರವಾಗಿದ್ದ ಪಿಚ್’ನಲ್ಲಿ ಶತಕ ಬಾರಿಸಿದ್ದಾರೆ. ಆದರೆ ನಾನು ಕೆ.ಎಲ್ ರಾಹುಲ್ ಅವರ ಆಟಕ್ಕೆ ದೊಡ್ಡ ಫ್ಯಾನ್. ಅವರಿಗೆ ಅತ್ಯುತ್ತಮ ಬ್ಯಾಟಿಂಗ್ ಕೌಶಲ್ಯವಿಗೆ. ಯಾವುದೇ ಸನ್ನಿವೇಶದಲ್ಲಿ, ಯಾವುದೇ ವಾತಾವರಣದಲ್ಲಿ ಜಗತ್ತಿನ ಶ್ರೇಷ್ಠ ಎಸೆತಗಳನ್ನು ಯಶಸ್ವಿಯಾಗಿ ತಡೆದು ನಿಲ್ಲಿಸುವ ಸಾಮರ್ಥ್ಯ ಕೆ.ಎಲ್ ರಾಹುಲ್’ಗಿದೆ” ಎಂದು ಶೇನ್ ವ್ಯಾಟ್ಸನ್ ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ನಡೆದ ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರಾಹುಲ್ ಟೀಮ್ ಇಂಡಿಯಾ ನಾಯಕತ್ವ ವಹಿಸಿದ್ದರು. ರಾಹುಲ್ ನಾಯಕತ್ವದಲ್ಲಿ ಭಾರತ ತಂಡ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಆದರೆ ಬ್ಯಾಟಿಂಗ್’ನಲ್ಲಿ ಎಡವಿದ್ದ ರಾಹುಲ್ 4 ಇನ್ನಿಂಗ್ಸ್’ಗಳಿಂದ ಕೇವಲ 57 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

ಇದನ್ನೂ ಓದಿ : Virat Kohli test century : 1205 ದಿನಗಳ ನಂತರ ಟೆಸ್ಟ್ ಸೆಂಚುರಿ, ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 75ನೇ ಶತಕ; ಕಿಂಗ್ ಕೊಹ್ಲಿ ಈಸ್ ಬ್ಯಾಕ್

ಇದನ್ನೂ ಓದಿ : ಮೊದಲ ಪ್ರೋಮೋ ರಿಲೀಸ್, ಭರ್ಜರಿ ಸ್ಟೆಪ್ಸ್ ಹಾಕಿದ ರೋಹಿತ್, ರಾಹುಲ್, ಪಾಂಡ್ಯ

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲರೆಡು ಪಂದ್ಯಗಳಲ್ಲಿ ಆಡಿದ್ದ ರಾಹುಲ್ ಆಡಿದ 3 ಇನ್ನಿಂಗ್ಸ್’ಗಳಿಂದ 38 ರನ್ ಗಳಿಸಿದ್ದರು. ಸತತ 7 ಇನ್ನಿಂಗ್ಸ್’ಗಳ ವೈಫಲ್ಯದ ನಂತರ ರಾಹುಲ್ ಅವರನ್ನು ಇಂದೋರ್’ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 3ನೇ ಪಂದ್ಯದ ಪ್ಲೇಯಿಂಗ್ XIನಿಂದ ಕೈಬಿಡಲಾಗಿತ್ತು. ಕಳೆದ ಟೆಸ್ಟ್’ನಲ್ಲಿ ಬೆಂಚ್ ಕಾಯಿಸಿದ್ದ ರಾಹುಲ್, ಅಹ್ಮದಾಬಾದ್’ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ವಾಟರ್ ಬಾಯ್ ಆಗಿದ್ದಾರೆ.

ಇದನ್ನೂ ಓದಿ : ಆರ್‌ಸಿಬಿ ಜೊತೆ “ವಿರಾಟ” ಪಯಣಕ್ಕೆ 15 ವರ್ಷ, ಕಿಂಗ್ ಕೊಹ್ಲಿ ಜೊತೆಗಿನ ಭಾವನಾತ್ಮಕ ಬಾಂಧವ್ಯಕ್ಕೆ ರಾಯಲ್ ಚಾಲೆಂಜರ್ಸ್ ಭಾವುಕ ಸಂದೇಶ

KL Rahul: Gill’s century was on a good batting track, but I am a KL Rahul fan; Aussie star batting for Kannadigas

Comments are closed.