India qualified to ICC WTC: ಶ್ರೀಲಂಕಾ ವಿರುದ್ಧ ಗೆದ್ದದ್ದು ನ್ಯೂಜಿಲೆಂಡ್, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ತಲುಪಿದ್ದು ಟೀಮ್ ಇಂಡಿಯಾ

ಕ್ರೈಸ್ಟ್ ಚರ್ಚ್: (India qualified to ICC WTC) ಪ್ರವಾಸಿ ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯವನ್ನು ನ್ಯೂಜಿಲೆಂಡ್ ತಂಡ 2 ವಿಕೆಟ್’ಗಳಿಂದ ರೋಚಕವಾಗಿ ಗೆಲ್ಲುವುದರೊಂದಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಭಾರತ ತಂಡ ಫೈನಲ್ ತಲುಪಿದೆ. ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್”ಷಿಪ್ ಫೈನಲ್ ನಿಟ್ಟಿನಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಡ್ರಾಗೊಳ್ಳುವ ಸಾಧ್ಯತೆಯಿದ್ದು, ಭಾರತ 2-1ರಿಂದ ಸರಣಿ ಗೆಲ್ಲುವುದು ಖಚಿತವಾಗಿದೆ.

ಮತ್ತೊಂದೆಡೆ ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಶ್ರೀಲಂಕಾ 2-0 ಅಂತರದಲ್ಲಿ ಗೆದ್ದರೆ ಭಾರತದ ಫೈನಲ್ ಕನಸು ನುಚ್ಚುನೂರಾಗಿ ಶ್ರೀಲಂಕಾ ಫೈನಲ್ ತಲುಪುವ ಸಾಧ್ಯತೆಯಿತ್ತು. ಆದರೆ ಪ್ರಥಮ ಟೆಸ್ಟ್’ನಲ್ಲಿ ನ್ಯೂಜಿಲೆಂಡ್ ರೋಚಕ ಗೆಲುವು ಸಾಧಿಸುವುದರೊಂದಿಗೆ ಭಾರತ ಫೈನಲ್ (India qualified to ICC WTC) ತಲುಪಿದೆ. ಜೂನ್ 7ರಿಂದ 11ರವರೆಗೆ ಇಂಗ್ಲೆಂಡ್’ನ ದಿ ಓವಲ್ ಮೈದಾನದಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. 2019-21ನೇ ಸಾಲಿನಲ್ಲೂ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಪ್ರವೇಶಿಸಿದ್ದ ಭಾರತ, ಫೈನಲ್’ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಇದೀಗ ನ್ಯೂಜಿಲೆಂಡ್ ಗೆಲುವಿನೊಂದಿಗೆ ಭಾರತ ಸತತ 2ನೇ ಬಾರಿ ಫೈನಲ್ ತಲುಪಿದೆ.

ಹ್ಯಾಗ್ಲೀ ಓವಲ್ ಮೈದಾನದಲ್ಲಿ ನಡೆದ ಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲಲು ನ್ಯೂಜಿಲೆಂಡ್ ಮುಂದಿದ್ದ ಗುರಿ 70 ಓವರ್’ಗಳಲ್ಲಿ 285 ರನ್. ಈ ಸವಾಲನ್ನು ದಿಟ್ಟವಾಗಿ ಸ್ವೀಕರಿಸಿದ ಕಿವೀಸ್ ಪಡೆಗೆ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಅಮೋಘ ಶತಕದೊಂದಿಗೆ ಆಸರೆಯಾದರು.

4ನೇ ವಿಕೆಟ್’ಗೆ ಡ್ಯಾರಿಲ್ ಮಿಚೆಲ್ ಜೊತೆ ಕೇನ್ ವಿಲಿಯಮ್ಸನ್ 157 ಎಸೆತಗಳಲ್ಲಿ 142 ರನ್’ಗಳ ಜೊತೆಯಾಟವಾಡಿದರು. ಈ ಜೊತೆಯಾಟದಲ್ಲಿ ಮಿಚೆಲ್ ಕೊಡುಗೆ 86 ಎಸೆತಗಳಲ್ಲಿ 81 ರನ್. ಮಿಚೆಲ್ ಔಟಾಗುತ್ತಲೇ ನ್ಯೂಜಿಲೆಂಡ್ 48 ರನ್’ಗಳ ಅಂತರದಲ್ಲಿ 5 ವಿಕೆಟ್’ಗಳನ್ನು ಕಳೆದುಕೊಂಡಿತು. ಆದರೆ ಮತ್ತೊಂದು ತುದಿಯಲ್ಲಿ ಬಂಡೆಯಂತೆ ನಿಂತ ಕೇನ್ ವಿಲಿಯಮ್ಸನ್ 27ನೇ ಟೆಸ್ಟ್ ಶತಕ ಬಾರಿಸಿ ನ್ಯೂಜಿಲೆಂಡ್ ತಂಡಕ್ಕೆ ರೋಚಕ 2 ವಿಕೆಟ್’ಗಳ ಗೆಲುವು ತಂದುಕೊಟ್ಟರು. 194 ಎಸೆತಗಳನ್ನೆದುರಿಸಿದ ವಿಲಿಯಮ್ಸನ್ 11 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 121 ರನ್ ಗಳಿಸಿ ಕಿವೀಸ್ ಗೆಲುವಿನ ರೂವಾರಿಯಾದರು.

ಇದನ್ನೂ ಓದಿ : Shreyas Iyer injury: ಆಸೀಸ್ ವಿರುದ್ಧದ ಏಕದಿನ ಸರಣಿಯಿಂದ ಔಟ್..? ಐಪಿಎಲ್ ಆರಂಭಕ್ಕೂ ಡೌಟ್; ಶ್ರೇಯಸ್ ಅಯ್ಯರ್‌ಗೆ ಇದೆಂಥಾ ಬ್ಯಾಡ್ ಲಕ್?

ಇದನ್ನೂ ಓದಿ : KL Rahul: ಗಿಲ್ ಸೆಂಚುರಿ ಹೊಡೆದದ್ದು ಉತ್ತಮ ಬ್ಯಾಟಿಂಗ್ ಟ್ರ್ಯಾಕ್‌ನಲ್ಲಿ, ಆದ್ರೆ ನಾನು ಕೆ.ಎಲ್ ರಾಹುಲ್ ಫ್ಯಾನ್; ಕನ್ನಡಿಗನ ಪರ ಆಸೀಸ್ ಸ್ಟಾರ್ ಬ್ಯಾಟಿಂಗ್

India qualified to ICC WTC: New Zealand won against Sri Lanka, Team India reached the ICC World Test Championship final.

Comments are closed.