Sreyas Gopal IPL: ಶ್ರೇಯಸ್ ಗೋಪಾಲ್ ಐಪಿಎಲ್ ಕರಿಯರ್‌ಗೆ ಕೊಳ್ಳಿ ಇಟ್ಟವರು ನಮ್ಮವರೇ!

ಐಪಿಎಲ್’ನಲ್ಲಿ ಹ್ಯಾಟ್ರಿಕ್ ವಿಕೆಟ್’ಗಳನ್ನು ಪಡೆದ ಪ್ರತಿಭಾವಂತ.., ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್’ರಂಥಾ ದಿಗ್ಗಜರನ್ನು ಮೂರು ಮೂರು ಬಾರಿ ಔಟ್ ಮಾಡಿರೋ ಟ್ರ್ಯಾಕ್ ರೆಕಾರ್ಡ್ ಇರೋ ಆಟಗಾರ. ಔಟ್ & ಔಟ್ ಮ್ಯಾಚ್ ವಿನ್ನರ್ (Sreyas Gopal IPL). ಅಂಥಾ ಆಟಗಾರ ಈ ಬಾರಿ ಐಪಿಎಲ್ ಹರಾಜಿನಲ್ಲಿ ಅನ್ ಸೋಲ್ಡ್. ಇದು ಕರ್ನಾಟಕ ತಂಡದ ಆಲ್ರೌಂಡರ್ ಶ್ರೇಯಸ್ ಗೋಪಾಲ್ ಅವರ ಕಥೆ.

ಐಪಿಎಲ್’ನಲ್ಲಿ ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ಪರ ಆಡಿರುವ ಶ್ರೇಯಸ್ ಗೋಪಾಲ್ ಅವರನ್ನು ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಯಾವ ತಂಡವೂ ಖರೀದಿಸಿಲ್ಲ.ಕಳೆದ ಐಪಿಎಲ್’ನಲ್ಲಿ ಮತ್ತು ದೇಶೀಯ ಕ್ರಿಕೆಟ್’ನಲ್ಲಿ ಶ್ರೇಯಸ್ ಗೋಪಾಲ್’ಗೆ ತಮ್ಮ ಸಾಮರ್ಥ್ಯ ತೋರಿಸುವ ಅವಕಾಶವೇ ಸಿಕ್ಕಿಲ್ಲ. ಇದು ಸಹಜವಾಗಿಯೇ ಅವರ ಐಪಿಎಲ್ ಕರಿಯರ್ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. 2022ರ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಪರ ಶ್ರೇಯಸ್ ಗೋಪಾಲ್’ಗೆ ಆಡುವ ಅವಕಾಶ ಸಿಕ್ಕಿದ್ದು ಕೇವಲ ಒಂದೇ ಒಂದು ಪಂದ್ಯದಲ್ಲಿ.

ಐಪಿಎಲ್ ಕಥೆ ಹಾಗಿರ್ಲಿ. ನಮ್ಮ ಕರ್ನಾಟಕ ತಂಡದಲ್ಲೇ ಶ್ರೇಯಸ್ ಗೋಪಾಲ್ ಅವರನ್ನು ವೈಟ್ ಬಾಲ್ ಕ್ರಿಕೆಟ್’ನಲ್ಲಿ ಸತತವಾಗಿ ಕಡೆಗಣಿಸುತ್ತಾ ಬರಲಿದ್ದಾರೆ. ಕಳೆದ ವರ್ಷ ವಿಜಯ್ ಹಜಾರೆ ಟ್ರೋಫಿ ಏಕದಿನ ಹಾಗೂ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಸೇರಿ ಒಟ್ಟು 16 ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯದಲ್ಲೂ ಶ್ರೇಯಸ್ ಗೋಪಾಲ್ ಅವರನ್ನು ಆಡಿಸಿರಲಿಲ್ಲ. ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಪ್ರಭಾವಿ ಹುದ್ದೆಯಲ್ಲಿದ್ದವರೊಬ್ಬರು ಶ್ರೇಯಸ್ ಗೋಪಾಲ್ ಅವರ ಹಾದಿಗೆ ಅಡ್ಡಗಾಲಾಗಿದ್ದರು. ತಮ್ಮ ನೆಚ್ಚಿನ ಆಟಗಾರ ಪ್ರವೀಣ್ ದುಬೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ಶ್ರೇಯಸ್ ಅವರನ್ನು ಸತತವಾಗಿ ಕಡೆಗಣಿಸಲಾಗಿತ್ತು.

ಈ ವರ್ಷದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡ ಆಡಿದ 8 ಪಂದ್ಯಗಳಲ್ಲಿ ಶ್ರೇಯಸ್ ಗೋಪಾಲ್’ಗೆ ಆಡುವ ಅವಕಾಶ ಸಿಕ್ಕಿದ್ದು 3 ಪಂದ್ಯಗಳಲ್ಲಿ ಮಾತ್ರ. ತಮ್ಮ ಸ್ವಂತ ರಾಜ್ಯದ ತಂಡವೇ ಈ ರೀತಿ ಕಡೆಗಣಿಸಿದಾಗ ಐಪಿಎಲ್ ಫ್ರಾಂಚೈಸಿಗಳು ಅವಕಾಶ ನೀಡುವುದಾದರೂ ಹೇಗೆ? ಒಟ್ನಲ್ಲಿ ಶ್ರೇಯಸ್ ಗೋಪಾಲ್ ಎಂಬ ಪ್ರತಿಭಾವಂತನ ಐಪಿಎಲ್ ಕರಿಯರ್’ಗೆ ನಮ್ಮವರೇ ಕೊಳ್ಳಿ ಇಟ್ಟಿದ್ದಾರೆ.

ಇದನ್ನೂ ಓದಿ : Manoj Bhandage : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ಥಾನ ಪಡೆದ ರಾಯಚೂರಿನ ಪ್ರತಿಭೆ

ಇದನ್ನೂ ಓದಿ : IPL 2023 Players auction : ಹರಾಜು ಕಂಪ್ಲೀಟ್, ಯಾವ ತಂಡ ಸ್ಟ್ರಾಂಗ್? ಇಲ್ಲಿದೆ ಫೈನಲ್ ಟೀಮ್ ಲಿಸ್ಟ್

ಇದನ್ನೂ ಓದಿ : IPL 2023 Players Auction: ಯಾವ ಆಟಗಾರರು, ಯಾವ ತಂಡಗಳಿಗೆ ಸೇಲ್ ? ಇಲ್ಲಿದೆ ಕಂಪ್ಲೀಟ್ ಲಿಸ್ಟ್

2014ರಿಂದ 2022ರವರೆಗೆ ಐಪಿಎಲ್’ನಲ್ಲಿ ಒಟ್ಟು 49 ಪಂದ್ಯಗಳನ್ನಾಡಿರುವ 29 ವರ್ಷದ ಶ್ರೇಯಸ್ ಗೋಪಾಲ್, 180 ರನ್ ಮತ್ತು 49 ವಿಕೆಟ್ ಪಡೆದಿದ್ದಾರೆ. ಪಂದ್ಯವೊಂದರಲ್ಲಿ 16 ರನ್ನಿಗೆ 4 ವಿಕೆಟ್ ಪಡೆದಿರುವುದು ಬೆಸ್ಟ್ ಬೌಲಿಂಗ್ ಪರ್ಫಾಮೆನ್ಸ್. 2019ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಶ್ರೇಯಸ್ ಗೋಪಾಲ್ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 5 ಓವರ್’ಗಳ ಪಂದ್ಯದಲ್ಲಿ ಶ್ರೇಯಸ್ ಗೋಪಾಲ್ RCB ತಂಡದ ದಿಗ್ಗಜರಾದ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ಮಾರ್ಕಸ್ ಸ್ಟೋಯ್ನಿಸ್ ಅವರನ್ನು ಸತತ 3 ಎಸೆತಗಳಲ್ಲಿ ಔಟ್ ಮಾಡಿದ್ದರು.

Sreyas Gopal IPL: Shreyas Gopal’s IPL career is ours!

Comments are closed.