Orange Health Tips:ಕಿತ್ತಳೆ ಹಣ್ಣಿನ ಆರೋಗ್ಯದ ಪ್ರಯೋಜನ ತಿಳಿದುಕೊಳ್ಳಿ

(Orange Health Tips)ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್-ಸಿ, ಅಯೋಡಿನ್, ಸೋಡಿಯಂ, ಕ್ಯಾಲ್ಸಿಯಂನಂತಹ ಖನಿಜ ಅಂಶಗಳು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುವಂತೆ ಮಾಡುತ್ತದೆ. ಕಿತ್ತಲೆ ಹಣ್ಣು ಚಳಿಗಾಲದ ಸಮಯದಲ್ಲಿ ಅತಿ ಹೆಚ್ಚು ಸಿಗುತ್ತದೆ. ಚಳಿಗಾಲದಲ್ಲಿ ಕಿತ್ತಲೆ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹಾಗಾದರೆ ಕಿತ್ತಳೆ ಹಣ್ಣು ತಿನ್ನುವುದರಿಂದ ಆರೋಗ್ಯದ ಲಾಭಗಳೆನು ಎನ್ನುವ ಮಾಹಿತಿಯ ಕುರಿತು ತಿಳಿದುಕೊಳ್ಳೋಣ.

(Orange Health Tips)ಕೊಲೆಸ್ಟ್ರಾಲ್‌ ಕಡಿಮೆ ಆಗಲು ಸಹಾಯ
ಕಿತ್ತಳೆ ಹಣ್ಣಿನಲ್ಲಿ ಫೈಬರ್‌ ಅಂಶ ಇರುವುದರಿಂದ ಇದನ್ನು ಸೇವನೆ ಮಾಡಿದರೆ ಹೃದಯದಲ್ಲಿರುವ ಕೊಲೆಸ್ಟಾಲ್‌ ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ಬರಿ ಕಿತ್ತಳೆ ತಿನ್ನಬಹುದು ಇಲ್ಲವಾದಲ್ಲಿ ಜ್ಯೂಸ್‌ ಮಾಡಿಕೊಂಡು ಕುಡಿಯಬಹುದು.

ಹೃದಯ ಆರೋಗ್ಯಕ್ಕೆ ಪ್ರಯೋಜನಕಾರಿ
ಪೊಟ್ಯಾಸಿಯಮ್, ಫೋಲೇಟ್ ಮತ್ತು ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳು ಕಿತ್ತಳೆಯಲ್ಲಿ ಕಂಡುಬರುವುದರಿಂದ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಿತ್ತಳೆ ಜ್ಯೂಸ್‌ ಅನ್ನು ಪ್ರತಿದಿನ ಸೇವನೆ ಮಾಡಿ.

ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ
ಕಿತ್ತಳೆಯಲ್ಲಿರುವ ಮೆಗ್ನೀಸಿಯಮ್ ಅಂಶ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಕಿತ್ತಳೆಯನ್ನು ಊಟ ಮಾಡಿದ ಅರ್ಧಗಂಟೆಯ ನಂತರ ಸೇವನೆ ಮಾಡುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ತೂಕವನ್ನು ಕಡಿಮೆ ಮಾಡುವಲ್ಲಿ ಪ್ರಯೋಜನಕಾರಿ

ಕಿತ್ತಳೆಯಲ್ಲಿ ಫೈಬರ್ , ವಿಟಮಿನ್-ಸಿ ಸಮೃದ್ಧವಾಗಿರುವುದರಿಂದ ಇದನ್ನು ಸೇವನೆ ಮಾಡಿದರೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಫೈಬರ್ ಅಂಶ ಇರುವ ಹಣ್ಣುಗಳನ್ನು ಸೇವನೆ ಮಾಡುವುದರಿಂದ ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುತ್ತದೆ ಹಸಿವು ಆಗುವುದಿಲ್ಲ ಇದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ. ಕಿತ್ತಳೆ ಜ್ಯೂಸ್‌ ಮಾಡಿಕೊಂಡು ಕುಡಿಯುವುದರಿಂದ ತೂಕ ನಷ್ಟಕ್ಕೆ ಸಹಕಾರಿ ಅಷ್ಟೇ ಅಲ್ಲದೆ ದೇಹದಲ್ಲಿ ನೀರಿನ ಅಂಶ ಕಡಿಮೆ ಆಗುವುದಿಲ್ಲ.

ಇದನ್ನೂ ಓದಿ:Acidity Heartburn Problem Tips:ಆಹಾರ ಸೇವನೆ ನಂತರ ಎದೆಯುರಿ ಅನುಭವ ಆಗುತ್ತಿದೆಯೇ? ಹಾಗಾದ್ರೆ ಈ ಸಲಹೆಗಳನ್ನು ಅನುಸರಿಸಿ

ಇದನ್ನೂ ಓದಿ:Beetroot Health Benefits:ಬಿಟ್ರೋಟ್ ಸೇವನೆ ಮಾಡಿ ಆರೋಗ್ಯದ ಪ್ರಯೋಜನ ಪಡೆಯಿರಿ

ಇದನ್ನೂ ಓದಿ:Cauliflower Health Tips :ಚಳಿಗಾಲದಲ್ಲಿ ಹೂಕೋಸು ಸೇವಿಸಿ ಪಡೆಯಿರಿ ಈ ಆರು ಪ್ರಯೋಜನ

ಕಣ್ಣಿನ ಆರೋಗ್ಯ ಕಾಪಾಡುತ್ತದೆ
ಕಿತ್ತಳೆಯಲ್ಲಿರುವ ಬೀಟಾ-ಕ್ಯಾರೋಟಿನ್ , ವಿಟಮಿನ್-ಎ, ವಿಟಮಿನ್-ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳು ಕಣ್ಣನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ. ಪ್ರತಿದಿನ ಕಿತ್ತಲೆ ಹಣ್ಣು ತಿನ್ನುವುದನ್ನು ರೂಡಿಸಿಕೊಂಡರೆ ಉತ್ತಮ.

ಇದನ್ನೂ ಓದಿ:Ragi Laddu Recipe:ರಾಗಿ ಮುದ್ದೆ, ದೋಸೆ ಇಷ್ಟಪಡದವರು ತಿನ್ನಿ ರಾಗಿ ಲಡ್ಡು

ಕಿತ್ತಳೆ ಹಣ್ಣಿನಿಂದ ಆರೋಗ್ಯದ ಪ್ರಯೋಜನ ಪಡೆದುಕೊಂಡರೆ ಅದರ ಸಪ್ಪೆಯಿಂದ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ. ಸಿಪ್ಪೆಯನ್ನು ಬಿಸಿಲಿನಲ್ಲಿ ಪುಡಿ ಮಾಡಿಟ್ಟುಕೊಂಡು ಮುಖಕ್ಕೆ ಲೇಪನ ಮಾಡಿಕೊಳ್ಳುವುದರಿಂದ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ.

Orange Health Tips Know the health benefits of oranges

Comments are closed.